Tomato Price: ಕೆಂಪು ಸುಂದರಿಯ ಸುವರ್ಣಯುಗ ಮುಕ್ತಾಯ! ಈಗ ಎಷ್ಟಿದೆ ಟೊಮೆಟೊ ಬೆಲೆ?

ಸಾರ್ವಕಾಲಿಕ ಗರಿಷ್ಠ ದರ ತಲುಪುವ ಮೂಲಕ ಹಲವು ರೈತರನ್ನು ಕೋಟ್ಯಧಿಪತಿಗಳನ್ನಾಗಿ ಮಾಡಿದ್ದ ಕೆಂಪು ಸುಂದರಿ ಟೊಮೆಟೊ ದರ ಏಕಾಏಕಿ ಕುಸಿತ ಕಂಡಿದೆ. ರಾಜ್ಯದ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಟೊಮೆಟೊ ಪೂರೈಕೆಯಾಗುತ್ತಿದ್ದು ದಿನದಿಂದ ದಿನಕ್ಕೆ ದರ ಕುಸಿತ ಕಾಣುತ್ತಿದೆ.

ಕೆಲವು ವಾರಗಳ ಹಿಂದೆ ಸಗಟು ಮಾರುಕಟ್ಟೆಯಲ್ಲಿ ಕೆಜಿಗೆ 140 ರೂ.ಗಳಷ್ಟಿದ್ದ ಟೊಮೆಟೊ ಬೆಲೆಯು ಕರ್ನಾಟಕದ ಕೆಲವು ಭಾಗಗಳಲ್ಲಿ 20 ರೂಪಾಯಿಗೆ ಕುಸಿದಿದೆ, ಟೊಮೆಟೊ ಪೂರೈಕೆ ಗಣನೀಯವಾಗಿ ಸುಧಾರಿಸಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

Abundant Supply Boosts Karnatakas Tomato Market, Prices Plummet to Rs 20 per kg

ಮೈಸೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಭಾನುವಾರ ಟೊಮೆಟೊ ಬೆಲೆ ಕೆಜಿಗೆ 14 ರೂ.ಗೆ ಇಳಿದಿದೆ. ಪೂರೈಕೆ ಸುಧಾರಿಸಿದ್ದರಿಂದ ಕಳೆದ ವಾರ ಟೊಮೆಟೊ ಬೆಲೆ ಕೆಜಿಗೆ 18 ರಿಂದ 20 ರೂ.ಗಳಷ್ಟಿತ್ತು ಎಂದು ಮೈಸೂರು ಎಪಿಎಂಸಿ ಕಾರ್ಯದರ್ಶಿ ಎಂ.ಆರ್.ಕುಮಾರಸ್ವಾಮಿ ದೂರವಾಣಿ ಮೂಲಕ ತಿಳಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕಳೆದ ತಿಂಗಳು ಮೈಸೂರು ಎಪಿಎಂಸಿಯಲ್ಲಿ ಸಗಟು ದರದಲ್ಲಿ ಟೊಮ್ಯಾಟೊ ಕೆಜಿಗೆ 140 ರೂಪಾಯಿ ಇತ್ತು ಎಂದು ಕುಮಾರಸ್ವಾಮಿ ಹೇಳಿದರು.

ಪೂರೈಕೆಯಲ್ಲಿ ಮೂರು ಪಟ್ಟು ಹೆಚ್ಚಳ

ಮಾರುಕಟ್ಟೆಗೆ ಟೊಮೆಟೊ ಪೂರೈಕೆಯಲ್ಲಿ ಕಳೆದ ತಿಂಗಳಿಗೆ ಹೋಲಿಕೆ ಮಾಡಿದರೆ ಸದ್ಯ ಮೂರು ಪಟ್ಟು ಹೆಚ್ಚಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಪೂರೈಕೆ ಗಣನೀಯವಾಗಿ ಹೆಚ್ಚಾದ ನಂತರ ಬೆಲೆಗಳಲ್ಲಿ ಕುಸಿತ ಕಾಣಲು ಆರಂಭಿಸಿತ್ತು, ಸದ್ಯ ಟೊಮೆಟೊ ಬೆಲೆ 20 ರೂಪಾಯಿಗೆ ಬಂದು ನಿಂತಿದೆ.

ಬೆಂಗಳೂರಿನಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಶನಿವಾರ 40 ರೂಪಾಯಿ ಇದ್ದ ಟೊಮೆಟೊ ಬೆಲೆ, ಭಾನುವಾರ 35 ರೂಪಾಯಿಗಳಿಗೆ ಕುಸಿತ ಕಂಡಿದೆ. ಸೋಮವಾರ 30-35 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ.

ಮತ್ತಷ್ಟು ಕುಸಿಯುವ ಆತಂಕ

ಟೊಮೆಟೊ ದರ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ 200 ರೂಪಾಯಿ ದಾಟಿತ್ತು, ದೇಶದ ಹಲವು ಭಾಗಗಳಲ್ಲಿ ಪ್ರತಿ ಕೆ.ಜಿ. ಟೊಮೆಟೊ 250 ರೂಪಾಯಿಗೆ ಮಾರಾಟವಾಗುವ ಮೂಲಕ ದಾಖಲೆ ಬರೆದಿತ್ತು. ಟೊಮೆಟೊಗೆ ಈ ಪ್ರಮಾಣದಲ್ಲಿ ಬೆಲೆ ಬಂದಿದ್ದು ಇದೇ ಮೊದಲು ಎಂದು ಎರಡು-ಮೂರು ದಶಕಗಳಿಂದ ತರಕಾರಿ ವ್ಯಾಪಾರದಲ್ಲಿ ತೊಡಗಿಸಿಕೊಂಡವರು ಹೇಳಿದ್ದರು.

ಬೆಲೆ ಹೆಚ್ಚಿದ್ದರೂ ಕೆಲವು ರೈತರಷ್ಟೇ ಕೈತುಂಬಾ ಲಾಭ ಮಾಡಿಕೊಂಡಿದ್ದರು. ರೋಗ, ಅನಿಶ್ಚಿತ ಮಳೆಯಿಂದ ಹಲವು ರೈತರಿಗೆ ಟೊಮೆಟೊ ಇಳುವರಿ ಕಡಿಮೆಯಾದ ಕಾರಣ ಹೆಚ್ಚಿನ ಲಾಭ ಪಡೆಯಲು ಆಗಲಿಲ್ಲ. ಕೆಲ ರೈತರು ಮಾತ್ರ ಒಂದು ತಿಂಗಳಲ್ಲೇ ಲಕ್ಷ, ಕೋಟಿ ರೂಪಾಯಿ ಲೆಕ್ಕದಲ್ಲಿ ಆದಾಯ ಗಳಿಸಿದರು.

ಬೆಲೆ ಏರಿಕೆ ಬಳಿಕ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಟೊಮೆಟೊ ನಾಟಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಟೊಮೆಟೊ ಬೆಲೆ ಒಂದಂಕಿಗೆ ಇಳಿಯುವ ಸಾಧ್ಯತೆ ಕೂಡ ಇದ್ದು, ಹಲವು ರೈತರು ನಷ್ಟದ ಭೀತಿಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+