ವಾಜಪೇಯಿ ನಿಧನ: ಕರ್ನಾಟಕದಲ್ಲಿ ಶಾಲೆ-ಕಾಲೇಜುಗಳಿಗೆ ರಜಾ
ಬೆಂಗಳೂರು, ಆಗಸ್ಟ್ 16: ಮಾಜಿ ಪ್ರಧಾನಿ- ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಶಾಲೆ-ಕಾಲೇಜುಗಳಿಗೆ ರಜಾ ಘೋಷಣೆ ಮಾಡಲಾಗಿದೆ.
ಇನ್ನು ವಾಜಪೇಯಿ ಅವರ ನಿಧನಕ್ಕೆ ದೇಶದಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಅಂದರೆ ಆಗಸ್ಟ್ ಇಪ್ಪತ್ತೆರಡನೇ ತಾರೀಕಿನವರೆಗೆ ಕೇಂದ್ರ ಸರಕಾರದಿಂದ ಭಾರತದಾದ್ಯಂತ ಶೋಕಾಚರಣೆ ಘೋಷಿಸಲಾಗಿದೆ.
ದೆಹಲಿಯಲ್ಲಿ ಶಾಲೆಗಳಿಗೆ ಶುಕ್ರವಾರ ರಜಾ ಘೋಷಣೆ ಮಾಡಲಾಗಿದೆ. ವಿಜಯ್ ಘಾಟ್ ನಲ್ಲಿರುವ ಲಾಲ್ ಬಹಾದ್ದೂರ್ ಶಾಸ್ತ್ರಿ ಸಮಾಧಿ ಪಕ್ಕದಲ್ಲೇ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿ ಮಾಡಲಾಗುತ್ತದೆ. ಇದಕ್ಕಾಗಿ ಒಂದೂವರೆ ಎಕರೆ ಜಾಗ ಮೀಸಲಾಗಿಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ಶುಕ್ರವಾರ ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೆರಳಲಿದ್ದಾರೆ. ದೆಹಲಿಯ ಏಮ್ಸ್ ನಲ್ಲಿ ಗುರುವಾರ ಸಂಜೆ ಐದು ಗಂಟೆಗೆ ವಾಜಪೇಯಿ ಅವರು ನಿಧನರಾದರು. ಅವರ ನಿಧನಕ್ಕೆ ದೇಶದಾದ್ಯಂತ ಇರುವ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.
ಈ ಸಾವಿನಿಂದ ತುಂಬಲಾರದ ನಿರ್ವಾತವೊಂದು ಸೃಷ್ಟಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋಡಿ ತಮ್ಮ ದುಃಖ ವ್ಯಕ್ತಪಡಿಸಿದ್ದಾರೆ.












Click it and Unblock the Notifications