ಚಿಂತಾಮಣಿ: ಸೆಲ್ಫಿ ಕ್ಲಿಕ್ಕಿಸಲು ಹೋಗಿ ನೀರಲ್ಲಿ ಮುಳುಗಿ ವ್ಯಕ್ತಿ ಸಾವು

Posted By: ಚಿಕ್ಕಬಳ್ಳಾಪುರ ಪ್ರತಿನಿಧಿ
Subscribe to Oneindia Kannada

ಚಿಕ್ಕಬಳ್ಳಾಪುರ, ಅಕ್ಟೋಬರ್ 25: ಸ್ನೇಹಿತನೊಂದಿಗೆ ಕೆರೆಯಲ್ಲಿ ನಿಂತು ಸೆಲ್ಫಿ ತೆಗೆದುಕೊಳ್ಳಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಕನಂಪಲ್ಲಿ ಕೆರೆಯಲ್ಲಿ ನಡೆದಿದೆ.

ದೇವನಹಳ್ಳಿ: ನೀರು ತರಲು ಹೋಗಿದ್ದ ಇಬ್ಬರು ಬಾಲಕಿಯರು ಸಾವು

ಚಿಂತಾಮಣಿಯ ಬಂಬೂಬಜಾರ್ ನಿವಾಸಿ, ಶ್ರೀನಿವಾಸಪುರದ ಸಂಗೀತ ಮೊಬೈಲ್‍ನಲ್ಲಿ ಕೆಲಸ ಮಾಡುತ್ತಿದ್ದ ಸುನೀಲ್(25) ಸೆಲ್ಫಿ ತೆಗೆಯುವ ವೇಳೆಗೆ ನೀರಿಗೆ ಬಿದ್ದು ಸಾವನ್ನಪ್ಪಿದ ದುರ್ದೈವಿ. ಸ್ನೇಹಿತ ಜಯಂಸಿಹನ ಜೊತೆಗೂಡಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ನೇತೃತ್ವದ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ವನಮಹೋತ್ಸದ ಹೆಸರಿನ ಬಾಡೂಟದ ಕಾರ್ಯಕ್ರಮಕ್ಕೆ ತೆರಳಿದ್ದ ಇವರು ನಂತರ ಬಳಿಕ ಸೆಲ್ಫಿ ತೆಗೆಯಲು ಹೋದ ವೇಳೆ ದುರಂತ ನಡೆದಿದೆ.

A man died after drown into water while clicking selfie in Kanampalli lake in Chintamani

ಕಾರ್ಯಕ್ರಮಕ್ಕೆ ತೆರಳುವ ವೇಳೆ ಮದ್ಯ ಸೇವಿಸಿದ್ದ ಇವರು, ಕೆರೆಯ ಆಳದ ಅರಿವಿಲ್ಲದೆ ಕೆರೆಯಲ್ಲಿ ನಿಂತು ಫೋಟೋ ತೆಗೆಯುವ ಪ್ರಯತ್ನ ಮಾಡಿದ್ದಾರೆ. ಈ ಸಂದರ್ಭ ಸುನೀಲ್ ನೀರಿನಲ್ಲಿ ಮುಳುಗಿದ್ದಾನೆ. ಸ್ನೇಹಿತ ಜಯಸಿಂಹ, ಸುನೀಲ್ ನನ್ನು ಕಾಪಾಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

ಸ್ಥಳಕ್ಕೆ ಆಗಮಿಸಿದ ಚಿಂತಾಮಣಿ ಪೊಲೀಸರು ಪ್ರಕರಣ ದಾಖಲಿಸಿಕೊಂದು, ಮುಳುಗು ತಜ್ಞರ ಸಹಾಯದಿಂದ ಶವವನ್ನು ಪತ್ತೆ ಮಾಡಿ, ಹೊರಗೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A man died after drown into water whicle clicking selfie in Kanampalli lake in Chintamani in Chikkaballapur district. Chintamani police registered complaint.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ