ರಾಯಚೂರು: ಕಾಂಗ್ರೆಸ್ ಸಮಾವೇಶದಲ್ಲಿ ವ್ಯಕ್ತಿ ಸಾವು

Posted By:
Subscribe to Oneindia Kannada

ರಾಯಚೂರು, ಆಗಸ್ಟ್ 13 : ಇಲ್ಲಿನ ಕೃಷಿ ವಿವಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾರೆ.

ಚುನಾವಣೆಗೆ ಕಾಂಗ್ರೆಸ್ ಸರ್ಕಾರದ ಸಾಧನೆಯೇ ಆಸ್ತಿ : ರಾಹುಲ್ ಗಾಂಧಿ

ಕಾಂಗ್ರೆಸ್ ಸಮಾವೇಶಕ್ಕೆ ಬಂದಿದ್ದ ಯಾದಗಿರಿಯ ಶಹಪುರದ ತಾಲೂಕಿನ ಹಳಕಲ್ ಗ್ರಾಮದ 63 ವರ್ಷದ ಶಿವರಾಯ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ರಾಹುಲ್ ಗಾಂಧಿ ಕಾರ್ಯಕ್ರಮ ಹಿನ್ನೆಲೆ ಟ್ರಾಫಿಕ್ ನಿಯಂತ್ರಿಸಲು ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಸುಮಾರು ದೂರ ನಡೆದುಕೊಂಡು ಸಮಾವೇಶಕ್ಕೆ ಬಂದಿದ್ದ ಶಿವರಾಯ್, ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಅಸುನೀಗಿದ್ದಾರೆ.

A Man death during Congress convention at Raichur
Severe Water Crisis In Raichur | Oneindia Kannada

ಸಮಾವೇಶ ಮುಗಿದ ಬಳಿಕ ಮೃತ ದೇಹವನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಅಷ್ಟು ದೊಡ್ಡ ಸಮಾವೇಶದಲ್ಲಿ ಯಾರೋಬ್ಬರು ವೃದ್ದನ ಸಹಾಯಕ್ಕೆ ತೆರಳದಿರುವುದು ವಿಪರ್ಯಾಸ ಸಂಗತಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 63 old Man (Shivaraya) death by heart attack during Congress convention at Raichur, on August 12th.
Please Wait while comments are loading...