ಮಾಡಿ ಸಖತ್ ಮಜಾ, ಆಗಸ್ಟ್ ತಿಂಗಳಲ್ಲಿ 9 ಸರ್ಕಾರಿ ರಜಾ!

Posted By: Gururaj
Subscribe to Oneindia Kannada

ಬೆಂಗಳೂರು, ಆ.5 : ಯಾವಾಗ ರಜೆ ಇದೆ? ಎಂದು ಕ್ಯಾಲೆಂಡರ್ ಕೆಂಪು ಅಕ್ಷರ ನೋಡುವವರಿಗೆ ಸಿಹಿ ಸುದ್ದಿ. ಆಗಸ್ಟ್ ತಿಂಗಳಿನಲ್ಲಿ ಒಂಭತ್ತು ಸರ್ಕಾರಿ ರಜೆ ಇದೆ.

ಸಾಲು-ಸಾಲು ರಜೆ ಕೆಎಸ್ಆರ್‌ಟಿಸಿಯಿದ 500 ಹೆಚ್ಚುವರಿ ಬಸ್

ಭಾನುವಾರಗಳನ್ನು ಹೊರತು ಪಡಿಸಿ, ಉಳಿದ ಸರ್ಕಾರಿ ರಜೆಗಳು ವಾರಾಂತ್ಯದಲ್ಲಿ ಬಂದಿರುವುದರಿಂದ ಸರಿಯಾಗಿ ಯೋಜನೆ ಹಾಕಿಕೊಂಡರೆ ಸಾಲು-ಸಾಲು ರಜೆಗಳನ್ನು ಪಡೆಯಬಹುದಾಗಿದೆ.

9 govt holidays in August month, Make a plan for trip

ಆಗಸ್ಟ್ ಮೊದಲ ವಾರದಲ್ಲಿ ಶುಕ್ರವಾರ ರಜೆ ಪಡೆದರೆ ಶನಿವಾರ, ಭಾನುವಾರದ ರಜೆ ಒಟ್ಟಿಗೆ ಸಿಗುತ್ತದೆ. ಸೋಮವಾರ ಆಫೀಸಿಗೆ ಹೋದರೆ ಆದೀತು.

ಆಗಸ್ಟ್ 12, 13 ಶನಿವಾರ ಮತ್ತು ಭಾನುವಾರವಿದೆ. ಆಗಸ್ಟ್ 14 ರಂದು ಕೃಷ್ಣ ಜನ್ಮಾಷ್ಟಮಿ ಮತ್ತು 15 ರಂದು ಸ್ವಾತಂತ್ರ್ಯ ದಿನಾಚರಣೆ ರಜೆ ಸಿಗಲಿದೆ. ಆಗಸ್ಟ್ 17ರಂದು ಪಾರ್ಸಿ ಹೊಸವರ್ಷದ ನಿರ್ಬಂಧಿತ ರಜೆ ಪಡೆಯಬಹುದು.

ಶುಕ್ರವಾರ ರಜೆ ಪಡೆದರೆ ಮತ್ತೆ ಶನಿವಾರ ಮತ್ತು ಭಾನುವಾರ ಬರಲಿದೆ. ಪ್ರವಾಸ ಹೋಗುವುದಿದ್ದರೆ ಈಗಲೇ ಪ್ಲಾನ್ ಮಾಡಿದರೆ ಉತ್ತಮ.

ರಜೆಗಳ ವಿಷಯ ಇಷ್ಟಕ್ಕೆ ಮುಗಿಯುವುದಿಲ್ಲ. ಗೌರಿ ಗಣೇಶ ಹಬ್ಬ ಇದೇ ತಿಂಗಳು ಇದ್ದು, ಆ.25ರ ಶುಕ್ರವಾರ ಬಂದಿದೆ. ಶುಕ್ರವಾರ, ಶನಿವಾರ, ಭಾನುವಾರ ಎಂದು ಮತ್ತೆ ಮೂರು ದಿನ ರಜೆ ಪಡೆಯಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Government of Karnataka has declared its list of holidays for 2017. 9 govt holidays will come in August month. It's sweet news for who planning for trip.
Please Wait while comments are loading...