ಸಾಹಿತ್ಯ ಸಮ್ಮೇಳನ: ಹೋಟೆಲ್ ಲಾಡ್ಜ್ ಗಳು ಫುಲ್ ಭರ್ತಿ

Posted By:
Subscribe to Oneindia Kannada

ರಾಯಚೂರು, ಡಿಸೆಂಬರ್ 1: ಡಿಸೆಂಬರ್ 2ರಿಂದ 4 ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರದ 30ಕ್ಕೂ ಹೆಚ್ಚು ಹೋಟೆಲ್ ಗಳು ಲಾಡ್ಜ್ ಗಳು ಭರ್ತಿಯಾಗಿವೆ.

ಭರ್ತಿಯಾಗಲು ಕಾರಣವೂ ಇದೆ ಏನೆಂದರೆ ನಗರದ ಪ್ರಮುಖ ಲಾಡ್ಜ್ ಮತ್ತು ಹೋಟೆಲ್ ಗಳಲ್ಲಿ ಒಟ್ಟು 478 ರೂಂ ಗಳನ್ನು ಜಿಲ್ಲಾಡಳಿತ ಕಾಯ್ದಿರಿಸಿದೆ. ಇನ್ನು ಉಳಿದವನ್ನು ಸಮ್ಮೇಳನಕ್ಕೆ ಬರುವವರು ಕಾಯ್ದಿರಿಸಿದ್ದಾರೆ. ಅಷ್ಟೆ ಅಲ್ಲದೆ ನಗರದ ಹೊರವಲಯಗಳಲ್ಲಿರುವ ಲಾಡ್ಜ್ ಗಳೂ ತುಂಬಿವೆ. ಇನ್ನು ರಾಯಚೂರಿನ 40 ಕಿಲೋ ಮೀಟರ್ ದೂರದಲ್ಲಿರುವ ಮಂತ್ರಾಲಯದ ವಸತಿಗೃಹಗಳನ್ನೂ ಕೆಲವರು ಕಾಯ್ದಿರಿಸಿದ್ದಾರ.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

ಜಿಲ್ಲಾಡಳಿತ ಹೋಟೆಲ್ ನ ಎಲ್ಲ ಕೊಠಡಿಗಳನ್ನು ಕಾಯ್ದಿರಿಸುವುದರಿಂದ ಹೋಟೆಲ್ ಗಳಿಗೆ ಕರೆ ಮಾಡುವವರಿಗೆ ಕೊಠಡಿ ಖಾಲಿಯಿಲ್ಲ ಎಂದು ಹೇಳುತ್ತಿದ್ದಾರೆ. ಹೋಟೆಲ್ ನೃಪತುಂಗ, ಕುಬೇರ ಇತ್ಯಾದಿಯಾಗಿ ಎಲ್ಲ ಹೋಟೆಲ್ ಗಳಲ್ಲಿಯೂ ಇದೇ ಮಾತು ಕೇಳಿಬರುತ್ತಿದೆ.
ಇನ್ನು ಶುಕ್ರವಾರದಿಂದ ಸಾಹಿತ್ಯ ಸಮ್ಮೇಳನ ಪ್ರಾರಂಭವಾಗಲಿದ್ದು, ಪುಸ್ತಕ ಮಳಿಗೆಗಳು, ಅನೇಕ ಸಾಹಿತ್ಯಾಸಕ್ತರು, ಸಹೃದಯರು ಬರುವ ಸಾಧ್ಯತೆ ಇದೆ ಇದಕ್ಕೆ ಜಿಲ್ಲಾಡಳಿತ ಹೇಗೆ ಸ್ಪಂದಿಸುವುದೋ ನೋಡಬೇಕು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
82nd Kannada Sahithya Sammelana on December 2 in Raichuru. 30 are abow Hotel are book the ZP for Sammelana. Other some hotel also booking for peoples, hotel maneger said all hotels are booked.
Please Wait while comments are loading...