ಕರ್ನಾಟಕದಲ್ಲಿ 80,000 ಬಾಲಕಿಯರು ಪ್ರೆಗ್ನೆಂಟ್ಸ್!
ಎಲ್ಲಿಯೋ ಅಮೆರಿಕಾ - ರಷ್ಯಾದಲ್ಲಿ ಮಾತ್ರ ಕೇಳುತ್ತಿದ್ದ ಆಘಾತಕಾರಿ ಸಂಗತಿಗಳು ಇದೀಗ ಕರ್ನಾಟಕದಲ್ಲೂ ನಡೆಯುವುದಕ್ಕೆ ಪ್ರಾರಂಭವಾಗಿದೆ. ಇದು ಕನ್ನಡಿಗರ ಆತಂಕಕ್ಕೆ ಕಾರಣವಾಗಿದೆ. ಅದೇ ಸಣ್ಣ ವಯಸ್ಸಿನಲ್ಲಿ ಹಾಗೂ ಶಾಲಾ - ಕಾಲೇಜುಗಳಿಗೆ ಹೋಗುತ್ತಿರುವ ಹೆಣ್ಣು ಮಕ್ಕಳು ಗರ್ಭಧಾರಣೆ (ಗರ್ಭಿಣಿ) ಆಗುತ್ತಿದ್ದಾರೆ ಎನ್ನುವ ಆತಂಕಕಾರಿ ವಿಷಯ. ಕರ್ನಾಟಕದಲ್ಲಿ ಇತ್ತೀಚಿನ ವರ್ಷಗಳಲ್ಲಿ ಈ ಬೆಳವಣಿಗೆ ಹೆಚ್ಚಾಗಿದ್ದು, ಹೊಸ ಆತಂಕದ ಅಲೆಯನ್ನು ಸೃಷ್ಟಿ ಮಾಡಿದೆ.
ಕರ್ನಾಟಕದಲ್ಲಿ ಅಪ್ರಾಪ್ತ ಹೆಣ್ಣು ಮಕ್ಕಳು ಗರ್ಭಿಣಿಯರಾಗುತ್ತಿರುವುದು ಹೆಚ್ಚಾಗುತ್ತಿದೆ. ಈ ವಿಷಯವನ್ನು ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ (RCH) ಕೋಶದ ಅಂಕಿ ಅಂಶಗಳು ಬಹಿರಂಗಪಡಿಸಿದ್ದು. ಕರ್ನಾಟಕದಲ್ಲಿ ಕೇವಲ 10 ತಿಂಗಳ ಅವಧಿಯಲ್ಲೇ 25,000 ಸಾವಿರಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ. ಇಷ್ಟು ದಿನಗಳ ವರೆಗೆ ಈ ರೀತಿಯ ಬೆಳವಣಿಗೆಗಳು ಪಾಶ್ಚಿಮಾತ್ಯ ದೇಶಗಳಲ್ಲಿ ಮಾತ್ರ ವರದಿಯಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಭಾರತ ಹಾಗೂ ಕರ್ನಾಟಕದಲ್ಲಿ ವರದಿ ಆಗುತ್ತಿರುವುದು ಪೋಷಕರಲ್ಲಿ ಆತಂಕವನ್ನು ಸೃಷ್ಟಿ ಮಾಡಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ 80 ಸಾವಿರಕ್ಕೂ ಹೆಚ್ಚು ಬಾಲಕಿಯರು ಗರ್ಭಿಣಿಯರಾಗಿದ್ದಾರೆ ಎಂದು ಹೇಳಲಾಗಿದೆ.

2024ನೇ ಸಾಲಿನ ಏಪ್ರಿಲ್ ಮತ್ತು 2025ನೇ ಸಾಲಿನ ನಡುವೆ ಅಂದರೆ ಕೇವಲ 10 ತಿಂಗಳಿನ ಅಂತರದಲ್ಲಿ ಬರೋಬ್ಬರಿ 25,436 ಜನ ಹದಿಹರೆಯದ ಬಾಲಕಿಯರು ಗರ್ಭಧಾರಣೆಗೆ ಒಳಗಾಗಿದ್ದಾರೆ ಎನ್ನುವ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. 2020 ಮತ್ತು 2021ನೇ ಸಾಲಿನಿಂದ 2024 ಮತ್ತು 2025 ರವರೆಗೆ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ 14 ರಿಂದ 19 ವರ್ಷದ ಒಳಗಿನ ಹುಡುಗಿಯರಲ್ಲಿ ಗರ್ಭಧಾರಣೆ ಆಗಿರುವ ಸಂಖ್ಯೆಯ ಬಗ್ಗೆ RCH ವರದಿ ಬಹಿರಂಗಪಡಿಸಿವೆ. ಶಾಲಾ ಹಂತದಲ್ಲೇ ಹೆಣ್ಣು ಮಕ್ಕಳು ಗರ್ಭಧಾರಣೆಗೆ ಕಾರಣವಾಗುತ್ತಿರುವುದರ ಹಿಂದೆ ಹಲವು ಕಾರಣಗಳಿವೆ. ಮೊದಲನೆಯದು ಬದಲಾದ ಆಧುನಿಕ ತಂತ್ರಜ್ಞಾನದ ಬಳಕೆ ಹಾಗೂ ಬಾಲಕ ಮತ್ತು ಬಾಲಕಿಯರು ಈ ಮೊದಲಿಗಿಂತಲೂ ಬೇಗ ಪ್ರೌಢಾವಸ್ಥೆ ಅಥವಾ ವಯಸ್ಸಿಗೆ ಮೀರಿದ ಹಾರ್ಮೋನ್ ಬೆಳವಣಿಗೆ ಸಹ ಇದಕ್ಕೆ ಕಾರಣವಾಗಬಹುದು ಎಂದು ಹೇಳಲಾಗಿದೆ.
ಈ ರೀತಿ ಶಾಲಾ ಹಂತದಲ್ಲೇ ಬಾಲಕಿಯರು ಗರ್ಭಧಾರಣೆ ಒಳಗಾಗುತ್ತಿರುವ ಜಿಲ್ಲೆಗಳಲ್ಲಿ ಬೆಂಗಳೂರು ನಗರ ಪ್ರಥಮ ಸ್ಥಾನದಲ್ಲಿ ಇದೆ. ಹೌದು ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಶಾಲಾ ಮಕ್ಕಳ ಬ್ಯಾಗ್‌ನಲ್ಲಿ ಕಾಂಡೋಮ್ ಸೇರಿದಂತೆ ಕೆಲವೊಂದು ಲೈಂಗಿಕ ಪ್ರಚೋದನೆ ನೀಡುವಂತಹ ವಸ್ತುಗಳು ಇದ್ದವು ಎನ್ನುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ವಿಷಯ ಬಹಿರಂಗವಾದಾಗಲೇ ಭಾರೀ ಚರ್ಚೆಗಳು ನಡೆದಿದ್ದವು. ಅಲ್ಲದೇ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲನೆ ಮಾಡಬೇಕು ಎಂದು ಕೆಲವು ಶಾಲಾ ಸಂಸ್ಥೆಗಳು ನಿರ್ಧಿರಿಸಿದ್ದವು.
ಇನ್ನು ಬೆಂಗಳೂರು ನಗರ ಜಿಲ್ಲೆಯಲ್ಲಿ 2024ನೇ ಸಾಲಿನಲ್ಲಿ ಅತಿ ಹೆಚ್ಚು 2,723 ಪ್ರಕರಣಗಳು ದಾಖಲಾಗಿವೆ. ಎರಡನೇ ಸ್ಥಾನದಲ್ಲಿ ಬೆಳಗಾವಿ (2,622), ವಿಜಯಪುರ (1,919) ಹಾಗೂ ರಾಯಚೂರು (1,649) ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ವರದಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಬಾಲಕಿಯರು ಗರ್ಭಧಾರಣೆಗೆ ಒಳಗಾಗುತ್ತಿರುವುದರಿಂದ ಇದನ್ನು ತಡೆಯುವುದಕ್ಕೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಎನ್ನುವ ಆಗ್ರಹವೂ ಕೇಳಿ ಬಂದಿದೆ.
-
Pizza 4P's ಬೆಂಗಳೂರಲ್ಲಿ ಶಾಂತಿಗಾಗಿ ಪಿಜ್ಜಾ ಎಂದಾಯ್ತು: ಜಪಾನ್ ಪಿಜ್ಜಾ ಸಂಸ್ಥೆ ಹೇಳಿದ್ದೇನು - ಕನ್ನಡಿಗರು ಏನಂದ್ರು -
Bengaluru Migration: ಬೆಂಗಳೂರಿಗೆ ನಾರ್ಥಿಗಳ ವಲಸೆಗೆ ಇದೇ ಕಾರಣ, ವೈರಲ್ ಪೋಸ್ಟ್ - ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬನಶಂಕರಿ ಜಾತ್ರೆಯ ಭಕ್ತರಿಗೆ ಶುಭ ಸುದ್ದಿ: ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಗೆ ಆದೇಶ -
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್












Click it and Unblock the Notifications