ದಯಾನಂದ, ಸಲೀಂ ಸೇರಿ 8 ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು, ಏ. 27 : ಎಂಟು ಐಪಿಎಸ್ ಮತ್ತು ಒಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಪೊಲೀಸ್‌ ಆಯುಕ್ತರಾಗಿದ್ದ ಡಾ.ಎಂ.ಎ.ಸಲೀಂ ಅವರನ್ನು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ ಮತ್ತು ಭದ್ರತೆ) ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

ಶನಿವಾರ ಸಂಜೆ ಸರ್ಕಾರ ಅಧಿಕಾರಿಗಳ ವರ್ಗಾವಣೆ ಕುರಿತು ಆದೇಶ ಹೊರಡಿಸಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಐಎಎಸ್‌ ಅಧಿಕಾರಿ ಟಿ.ಎಂ. ವಿಜಯಭಾಸ್ಕರ್‌ ಅವರನ್ನು ಬಿಬಿಎಂಪಿ ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದ್ದರಿಂದ ತೆರವಾದ ಸ್ಥಾನಕ್ಕೆ ವಸತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. [ಪ್ರಯಾಣದರದ ಮಾಹಿತಿ ನೀಡುವ ಆಟೋ ಕೌಂಟರ್]

B. Dayananda

ವರ್ಗಾವಣೆಗೊಂಡ ಐಪಿಎಸ್ ಅಧಿಕಾರಿಗಳು

ಡಾ.ಎಂ.ಎ.ಸಲೀಂ - ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್‌ ಆಯುಕ್ತ (ಸಂಚಾರ ಮತ್ತು ಭದ್ರತೆ)
ಬಿ.ದಯಾನಂದ - ಮೈಸೂರು ಪೊಲೀಸ್ ಆಯುಕ್ತರು
ಸೌಮೇಂದು ಮುಖರ್ಜಿ (ಸಿಐಡಿ ಡಿಐಜಿ) - ಕೆಎಸ್‌ಆರ್‌ಟಿಸಿ ಡಿಐಜಿ (ಭದ್ರತೆ ಮತ್ತು ವಿಚಕ್ಷಣೆ)
ಡಾ.ಬಿ.ಎ.ಮಹೇಶ್ - ಎಸ್ಪಿ ಹಾಗೂ ನಿರ್ದೇಶಕ (ಭದ್ರತೆ, ವಿಚಕ್ಷಣೆ ಮತ್ತು ಪರಿಸರ) ಬಿಎಂಟಿಸಿ
ಎಂ.ಎನ್‌.ನಾಗರಾಜ್‌ (ರಾಯಚೂರು ಎಸ್ಪಿ) - ಎಸ್ಪಿ (ಆಂತರಿಕ ಭದ್ರತಾ ವಿಭಾಗ, ಬೆಂಗಳೂರು)
ಚೇತನ್‌ ಸಿಂಗ್‌ ರಾಥೋಡ್‌ (ಬಳ್ಳಾರಿ ಎಸ್ಪಿ ) - ರಾಯಚೂರು ಎಸ್ಪಿ
ಆರ್.ಚೇತನ್ (ಚಿಕ್ಕಮಗಳೂರು ಎಸ್ಪಿ) - ಬಳ್ಳಾರಿ ಎಸ್ಪಿ
ಎಚ್‌.ಎಸ್‌.ರೇವಣ್ಣ - ಕೆಎಸ್ಆರ್‌ಟಿಸಿ ಡಿಐಜಿ ವರ್ಗಾವಣೆ ರದ್ದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+