7th Pay Commission: ಸರ್ಕಾರಿ ನೌಕರರ ಕನಿಷ್ಠ ವೇತನದ ಶಿಫಾರಸುಗಳು

ಬೆಂಗಳೂರು, ಸೆಪ್ಟೆಂಬರ್ 29: ಕೆ. ಸುಧಾಕರ್‌ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ 558 ಪುಟಗಳ ಸಂಪುಟ-1ರ ವರದಿಯಲ್ಲಿ ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನದ ಕುರಿತು ಶಿಫಾರಸು ಮಾಡಿದೆ. ಇದಕ್ಕೆ ಪೂರಕವಾಗಿ ಹಿಂದಿನ 6 ವೇತನ ಆಯೋಗಗಳು ಮಾಡಿರುವ ಶಿಫಾರಸುಗಳನ್ನು ಸಹ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರ ಈಗಾಗಲೇ ಆಯೋಗದ ಶಿಫಾರಸುಗಳನ್ನು ಆಗಸ್ಟ್‌ ತಿಂಗಳಿನಿಂದ ಜಾರಿಗೊಳಿಸುವುದಾಗಿ ಹೇಳಿದೆ. ಕನಿಷ್ಠ ಮೂಲ ವೇತನದ ಕುರಿತ ಮಾಹಿತಿ ಇಲ್ಲಿದೆ.

ನಾಲ್ಕನೇ ರಾಜ್ಯ ವೇತನ ಆಯೋಗ 1992. ಈ ವೇತನ ಆಯೋಗವನ್ನು ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಅಧ್ಯಕ್ಷತೆಯಲ್ಲಿ ದಿನಾಂಕ 26.02.1992 ರಲ್ಲಿ ರಚಿಸಲಾಯಿತು ಮತ್ತು ಆಯೋಗದ ಶಿಫಾರಸ್ಸುಗಳು ದಿನಾಂಕ 01.07.1993 ರಂದು ಜಾರಿಗೆ ಬಂದವು. ಆಯೋಗ ವೇತನ ಶ್ರೇಣಿಗಳ ಸಂಖ್ಯೆಯನ್ನು 20ಕ್ಕೆ ನಿಗದಿಗೊಳಿಸುವುದು ಎಂದು ಶಿಫಾರಸು ಮಾಡಿತು. ಕನಿಷ್ಟ ವೇತನವನ್ನು ರೂ. 840 ಮತ್ತು ಗರಿಷ್ಠ ವೇತನವನ್ನು ರೂ.6,800ಕ್ಕೆ ಪರಿಷ್ಕರಿಸುವುದು. ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸಿರುವುದಿಲ್ಲ. ಮೂಲ ವೇತನವನ್ನು ಶೇ.75 ರಷ್ಟು ಹೆಚ್ಚಿಸುವುದು. ವೇತನವನ್ನು ರೂ.111 ರಿಂದ ರೂ. 896 ಗಳವರೆಗೆ ಹೆಚ್ಚಿಸುವುದು ಎಂದು ಶಿಫಾರಸು ಮಾಡಿತು.

7th Pay Commission Recommended Minimum Basic Pay For Government Employees

ಅಧಿಕಾರಿ ವೇತನ ಸಮಿತಿ, 1998. ಕೇಂದ್ರ ಸರ್ಕಾರವು 5ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳನ್ನು 1997ರಲ್ಲಿ ಜಾರಿಗೊಳಿಸಿದ ಹಿನ್ನಲೆಯಲ್ಲಿ, ಅಂದಿನ ಆರ್ಥಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಸಿ. ಗೋಪಾಲ ರೆಡ್ಡಿ ಅಧ್ಯಕ್ಷತೆಯಲ್ಲಿ ದಿನಾಂಕ 05.02.1998 ರಂದು ಅಧಿಕಾರಿ ವೇತನ ಸಮಿತಿಯನ್ನು ರಚಿಸಿತು. ಸಮಿತಿಯು ದಿನಾಂಕ 19.12.1998 ರಂದು ತನ್ನ ವರದಿಯನ್ನು ಸಲ್ಲಿಸಿತು ಮತ್ತು ಸಮಿತಿಯ ಶಿಫಾರಸ್ಸುಗಳು ದಿನಾಂಕ 01.04.1998 ರಿಂದ ಅನ್ವಯವಾಗುವಂತೆ ಜಾರಿಗೆ ಬಂದವು.

ಈ ಸಮಿತಿಯ ಪ್ರಮುಖ ಶಿಫಾರಸ್ಸುಗಳೆಂದರೆ. ಕನಿಷ್ಠ ವೇತನ ರೂ. 2,500 ಮತ್ತು ಗರಿಷ್ಠ ವೇತನ ರೂ. 20,720. ಮೂಲ ವೇತನದಲ್ಲಿ ಶೇ.32.5 ರಷ್ಟು ಏರಿಕೆ, ಕನಿಷ್ಠ ಪಿಂಚಣಿ ರೂ.1,055 ಮತ್ತು ಗರಿಷ್ಮ ಪಿಂಚಣಿ ರೂ.10,620. 1998-99ರ ಆರ್ಥಿಕ ವರ್ಷದಲ್ಲಿ ವೇತನ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸದ ಮೇಲೆ ಉಂಟಾದ ಪರಿಣಾಮ ಅಂದಾಜು ರೂ. 784 ಕೋಟಿಗಳಷ್ಟು.

ಐದನೇ ರಾಜ, ವೇತನ ಆಯೋಗ 2005. 5ನೇ ರಾಜ್ಯ ವೇತನ ಆಯೋಗವನ್ನು, ಆ ಸಮಯದಲ್ಲಿ ಸೇವೆಯಿಂದ ನಿವೃತ್ತರಾಗಿದ್ದ ಸಿ. ಗೋಪಾಲ ರೆಡ್ಡಿ ನೇತೃತ್ವದಲ್ಲಿ ದಿನಾಂಕ 21.05.2005 ರಂದು ರಚಿಸಲಾಯಿತು. ದುರದೃಷ್ಟವಶಾತ್ ಇವರ ನಿಧನದ ಕಾರಣ ಸುಮಾರು ಒಂದು ವರ್ಷದ ತರುವಾಯ ಎಂ. ಬಿ. ಪ್ರಕಾಶ್ ಇವರನ್ನು ದಿನಾಂಕ 03.08.2006ರಂದು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು. ಆಯೋಗವು ತನ್ನ ವರದಿಯನ್ನು ಫೆಬ್ರವರಿ/ ಮಾರ್ಚ್ 2007 ರಲ್ಲಿ ಸಲ್ಲಿಸಿತು ಮತ್ತು ರಾಜ್ಯ ಸರ್ಕಾರವು ಆಯೋಗದ ಶಿಫಾರಸ್ಸುಗಳನ್ನ ದಿನಾಂಕ 01.07.2005 ರಿಂದ ಅನ್ವಯವಾಗುವಂತೆ ಜಾರಿಗೊಳಿಸಿತು.

ಈ ಆಯೋಗದ ಪ್ರಮುಖ ಶಿಫಾರಸುಗಳೆಂದರೆ. ಜಾರಿಯಲ್ಲಿದ್ದ 20 ವೇತನ ಶ್ರೇಣಿಗಳಿಗೆ ಐದು ಹೊಸ ವೇತನ ಶ್ರೇಣಿಗಳನ್ನು ಸೇರಿಸುವುದು. ತುಟ್ಟಿ ಭತ್ಯೆಯನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವುದು. ಮೂಲ ವೇತನವನ್ನ ಶೇ.17.5 ರಷ್ಟು ಹೆಚ್ಚಿಸಿ, ದಿನಾಂಕ: 01.07.2005 ರಂದು ಜಾರಿಯಲ್ಲಿದ್ದ ಶೇ.71 ರಷ್ಟು ತುಟ್ಟಿ ಭತ್ಯೆಯನ್ನು ವಿಲೀನಗೊಳಿಸಿ ಪರಿಷ್ಕೃತ ವೇತನವನ್ನು ನಿಗದಿಗೊಳಿಸುವುದು. ಕನಿಷ್ಟ ವೇತನವನ್ನು ರೂ. 4,275 ರಿಂದ ರೂ. 4,800ಕ್ಕೆ ಹೆಚ್ಚಿಸುವುದು.

ಗರಿಷ್ಠ ವೇತನವನ್ನು ರೂ. 20,720 ರಿಂದ ರೂ. 39,900ಕ್ಕೆ ಹೆಚ್ಚಿಸುವುದು. ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ರೂ. 100 ರಿಂದ ರೂ. 850ಕ್ಕೆ ವೇತನ ಬಡ್ತಿ ದರವನ್ನು ನಿಗದಿಗೊಳಿಸುವುದು. ದಿನಾಂಕ 01.04.2006 ರಿಂದ ಆರ್ಥಿಕ ಸೌಲಭ್ಯಗಳೊಂದಿಗೆ ದಿನಾಂಕ 01.07.2005 ರಿಂದ ಅವ್ಯಯವಾಗುವಂತೆ ಪರಿಷ್ಕೃತ ವೇತನ ಶ್ರೇಣಿಗಳನ್ನು ಜಾರಿಗೊಳಿಸುವುದು. 2005-06ರ ಆರ್ಥಿಕ ವರ್ಷದಲ್ಲಿ ವೇತನ ಪರಿಷ್ಕರಣೆಯಿಂದ ರಾಜ್ಯದ ಬೊಕ್ಕಸದ ಮೇಲೆ ಉಂಟಾದ ಪರಿಣಾಮ ಅಂದಾಜು ರೂ.1,350 ಕೋಟಿಗಳು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+