7th Pay Commission: ಪ್ರಥಮ, ದ್ವಿತೀಯ ದರ್ಜೆ ಸಹಾಯಕರ ವೇತನ ಎಷ್ಟು?
ಬೆಂಗಳೂರು, ಸೆಪ್ಟೆಂಬರ್ 02: ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಕರ್ನಾಟಕ ಸರ್ಕಾರ ಕೆ. ಸುಧಾಕರ್ ರಾವ್ ನೇತೃತ್ವದ ರಾಜ್ಯ 7ನೇ ವೇತನ ಆಯೋಗ ನೀಡಿದ 558 ಪುಟಗಳ ಸಂಪುಟ-1ರ ವರದಿಯನ್ನು ಅಂಗೀಕಾರ ಮಾಡಿದೆ. 7ನೇ ವೇತನ ಆಯೋಗದ ಶಿಫಾರಸುಗಳು ಆಗಸ್ಟ್ ತಿಂಗಳಿನಿಂದ ಜಾರಿಗೆ ಬಂದಿದೆ. ಇದರಿಂದ ಸರ್ಕಾರಿ ನೌಕರರ ವೇತನ, ಪಿಂಚಣಿ ಮತ್ತು ಭತ್ಯೆ ಹೆಚ್ಚಳವಾಗಿದೆ. ಯಾವ ನೌಕರರಿಗೆ ಎಷ್ಟು ವೇತನ ಏರಿಕೆಯಾಗಲಿದೆ ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.
ಡಾ. ರೇಜು ಎಂ. ಟಿ. ಸರ್ಕಾರದ ಕಾರ್ಯದರ್ಶಿ (ವೆಚ್ಚ) ಆರ್ಥಿಕ ಇಲಾಖೆ ವಿವಿಧ ನೌಕರರ ವೇತನ ಎಷ್ಟು ಹೆಚ್ಚಳವಾಗಲಿದೆ? ಎಂದು ವಿವರವಾದ ಆದೇಶ ಹೊರಡಿಸಿದ್ದಾರೆ. ಹಾಗಾದರೆ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ ಹುದ್ದೆಯಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ನೌಕರರ ವೇತನ ಎಷ್ಟು? ಎಂದು ಆದೇಶದಲ್ಲಿ ಮಾಹಿತಿ ನೀಡಿದ್ದಾರೆ. ಅವುಗಳ ವಿವರಗಳು ಹೀಗಿವೆ...

ಪ್ರಥಮ ದರ್ಜೆ ಸಹಾಯಕ: ಪ್ರಥಮ ದರ್ಜೆ ಸಹಾಯಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನದ ದೃಷ್ಟಾಂತ ಉದಾಹರಣೆ ಈ ಕಳಕಂಡಂತಿದೆ
* 1ನೇ ಜುಲೈ 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ಪ್ರಥಮ ದರ್ಜೆ ಸಹಾಯಕ. ಪ್ರಸಕ್ತ ವೇತನ ಶ್ರೇಣಿ ರೂ. 27650-650-29600-750-32600-850-36000-950-39800-1100-46400-1250-52650.
* 1ನೇ ಜುಲೈ 2022 ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ. ರೂ. 35,150.
* 1ನೇ ಜುಲೈ 2022ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ವೇತನ ನಿಗದಿ. ರೂ. 36,000.
* ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜುಲೈ, 2023
2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತ ಪುನರ್ ನಿಗದಿಪಡಿಸಿದೆ. ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. ರೂ. 44425-1125-47800-1250-52800-1375-58300-1500-64300-1650-74200-1900-83700
* 1ನೇ ಜುಲೈ, 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ (ಪೂರ್ವ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಮಂಜೂರು ಮಾಡಲಾದ ವಾರ್ಷಿಕ ವೇತನ ಬಡ್ತಿಯನ್ನು ಆಧರಿಸಿ ವೇತನ ನಿಗದಿ). ರೂ.58,300.
* 01.07.2023ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 59,800.
* 01.07.2024 ರಂದು ಲಭ್ಯವಿರುವ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 61,300 ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ.
* ಮುಂದಿನ ವೇತನ ಬಡ್ತಿಯ ದಿನಾಂಕ 1ನೇ ಜುಲೈ 2025.
ದ್ವಿತೀಯ ದರ್ಜೆ ಸಹಾಯಕ: ದ್ವಿತೀಯ ದರ್ಜೆ ಸಹಾಯಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರನ 2018ರ ಪರಿಷ್ಕೃತ ವೇತನ ಶ್ರೇಣಿಯಲ್ಲಿನ ವೇತನದ ದೃಷ್ಟಾಂತ ಉದಾಹರಣೆ ಈ ಕೆಳಕಂಡಂತಿದೆ. 1ನೇ ಜುಲೈ, 2022 ರಂದು ಧಾರಣೆ ಮಾಡಿದ ಹುದ್ದೆಯ ಪದನಾಮ. ದ್ವಿತೀಯ ದರ್ಜೆ ಸಹಾಯಕ.
* ಪ್ರಸಕ್ತ ವೇತನ ಶ್ರೇಣಿ. 21400-500-22400-550-24600-600- 27000-650-29600-750-32600-850-36000-950-39800-1100-42000.
* 1ನೇ ಜುಲೈ 2022 ರಂದು ಇದ್ದಂತೆ ಪ್ರಸಕ್ತ ವೇತನ ಶ್ರೇಣಿಯಲ್ಲಿ ಮೂಲ ವೇತನ. ರೂ. 25.200.
* ಪ್ರಸಕ್ತ ವೇತನ ಶ್ರೇಣಿಯಲ್ಲಿ ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜನವರಿ 2023.
* 2024ನೇ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಸರ್ಕಾರಿ ನೌಕರನ ವೇತನವನ್ನು ಈ ಕೆಳಕಂಡಂತೆ ಪುನರ್ ನಿಗದಿಪಡಿಸಿದೆ.
* ಹುದ್ದೆಗೆ ಅನ್ವಯವಾಗುವ ಪರಿಷ್ಕೃತ ವೇತನ ಶ್ರೇಣಿ. ರೂ. 34100-800-35700-900-39300-1000-43300-1125-47800-1250-52800-1375-58300-1500-64300-1650-67600.
* 1ನೇ ಜುಲೈ 2022 ರಿಂದ ಜಾರಿಗೆ ಬರುವಂತೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ಕಾಲ್ಪನಿಕವಾಗಿ ನಿಗದಿಪಡಿಸಬೇಕಾದ ಮೂಲ ವೇತನ. ರೂ. 40,300.
* ಕರ್ನಾಟಕ ನಾಗರಿಕ ಸೇವಾ (ಪರಿಷ್ಕೃತ ನಿಯಮಗಳು, 2024 ರ ನಿಯಮ 8ರ ಉಪನಿಯಮ (1)ರನ್ವಯ ದಿನಾಂಕ 01.01.2023ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 41,300.
* 01.01.2024 ರಂದು ಲಭ್ಯವಿದ್ದ ವಾರ್ಷಿಕ ವೇತನ ಬಡ್ತಿಯನ್ನು ಬಿಡುಗಡೆ ಮಾಡಿ ಕಾಲ್ಪನಿಕವಾಗಿ ವೇತನ ನಿಗದಿ. ರೂ. 42.300 ಆರ್ಥಿಕ ಸೌಲಭ್ಯವು 01.08.2024 ರಿಂದ ಪ್ರಾಪ್ತವಾಗುತ್ತದೆ.
* ಮುಂದಿನ ವೇತನ ಬಡ್ತಿಯ ದಿನಾಂಕ. 1ನೇ ಜನವರಿ 2024.












Click it and Unblock the Notifications