ನಾಗರಹೊಳೆ ಅಭಯಾರಣ್ಯದಲ್ಲಿವೆ 72 ಹುಲಿಗಳು

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 11 : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 72 ವಯಸ್ಕ ಹುಲಿಗಳಿವೆ ಎಂಬುದು ಅಧ್ಯಯನದಿಂದ ಬೆಳಕಿಗೆ ಬಂದಿದೆ. 2014ರ ಸಮೀಕ್ಷೆಯಂತೆ ಕರ್ನಾಟಕದಲ್ಲಿ 406 ಹುಲಿಗಳಿವೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯವೇ ಮೊದಲ ಸ್ಥಾನ ಪಡೆದಿದೆ.

ಸಿಎಸ್‌ಎಸ್ ಕಾರ್ಪ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ನಿಧಿಯ ನೆರವಿನಿಂದ ಅರಣ್ಯ ಇಲಾಖೆ ನಡೆಸಿದ ಅಧ್ಯಯನದ ವರದಿ ತಯಾರಿಸಲಾಗಿದ್ದು, ಅದನ್ನು ಇಲಾಖೆ ಬಿಡುಗಡೆ ಮಾಡಿದೆ. ಕ್ಯಾಮೆರಾ ಟ್ರ್ಯಾಪ್ ಮೂಲಕ ಹುಲಿಗಳ ದಾಖಲೀಕರಣ ಮಾಡಲು ಸಂಸ್ಥೆ ಇಲಾಖೆಗೆ 800 ಕ್ಯಾಮೆರಾ ಟ್ಯಾಪ್‌ಗಳನ್ನು ನೀಡಿದೆ. [ದೇಶದ ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕವೇ ನಂ.1]

tiger
Photo Credit:

ನಾಗರಹೊಳೆಯಲ್ಲಿ ಜನವರಿ 1 ರಿಂದ ಮಾರ್ಚ್ 1 ತನಕ 167 ಪ್ರದೇಶಗಳಲ್ಲಿ ಕ್ಯಾಮೆರಾ ಟ್ಯ್ರಾಪ್‌ಗಳನ್ನು ಇಟ್ಟು ಅಧ್ಯಯನ ನಡೆಸಲಾಗಿದೆ. ಈ ಅವಧಿಯಲ್ಲಿ 637 ಛಾಯಾಚಿತ್ರಗಳನ್ನು ಸೆರೆಹಿಡಿಲಾಗಿದೆ. ಹುಲಿಗಳ ಎಡ ಮತ್ತು ಬಲ ಭಾಗಗಳಲ್ಲಿರುವ ಪಟ್ಟೆಗಳ ಆಧಾರದ ಮೇಲೆ ಅವುಗಳ ಸಂಖ್ಯೆಯನ್ನು ಪತ್ತೆ ಹಚ್ಚಲಾಗಿದೆ. [ನರಹಂತಕ ಹುಲಿ ಅರಣ್ಯ ಇಲಾಖೆ ಸಿಬ್ಬಂದಿ ಗುಂಡೇಟಿಗೆ ಬಲಿ]

ಎಡ ಹಾಗೂ ಬಲ ಪಟ್ಟೆಗಳ ಆಧಾರದ ಮೇಲೆ 59 ಮತ್ತು ಬಲ ಪಟ್ಟೆಗಳ ಆಧಾರದ ಮೇಲೆ 13 ಹುಲಿಗಳನ್ನು ಗುರುತಿಸಲಾಗಿದೆ. ಹುಲಿಯ ಸಂಖ್ಯೆಯ ಜೊತೆಗೆ ಅದರ ಜೀವನ ಶೈಲಿ, ಕಾಡಿನಲ್ಲಿ ಜನರ ಅಕ್ರಮ ಓಡಾಟ, ಅಕ್ರಮ ಚಟುವಟಿಕೆಗಳನ್ನು ಕ್ಯಾಮರಾ ಮೂಲಕ ಪತ್ತೆ ಹಚ್ಚಲಾಗುತ್ತಿದೆ. [ಬನ್ನೇರು ಘಟ್ಟದಲ್ಲಿ ಸದ್ಯದಲ್ಲೇ ಸಿಂಹ, ಜಿರಾಫೆ, ಜೀಬ್ರಾ ಕೇಜ್]

ಸಿಎಸ್‌ಎಸ್ ಕಾರ್ಪ್ ಸಂಸ್ಥೆಯ ಹುಲಿಗಳ ದಾಖಲೀಕರಣಕ್ಕಾಗಿ ನಾಗರಹೊಳೆಗೆ 400, ಬಂಡೀಪುರಕ್ಕೆ 300, ದಾಂಡೇಲಿ-ಅಣಶಿ ಹುಲಿ ಸಂರಕ್ಷಿತ ಪ್ರದೇಶಕ್ಕೆ 100 ಕ್ಯಾಮೇರಾ ಟ್ಯ್ರಾಪ್‌ಗಳನ್ನು ನೀಡಿದೆ. [ಪಿಟಿಐ ಚಿತ್ರ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Forest Department has captured 72 tigers through camera traps at Nagarhole National Park also known as Rajiv Gandhi National Park.
Please Wait while comments are loading...