ಸೆಕ್ಷನ್ 377 ಅನ್ವಯ ಕರ್ನಾಟಕದಲ್ಲಿ 377 ಕೇಸು ದಾಖಲು
ಬೆಂಗಳೂರು, ಸೆಪ್ಟೆಂಬರ್ 08 : ಸೆಕ್ಷನ್ 377 ಅನ್ವಯ ಕರ್ನಾಟಕದಲ್ಲಿ ಎಂಟು ವರ್ಷಗಳಲ್ಲಿ 71 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು ನಗರದಲ್ಲಿ 12 ಪ್ರಕರಗಳು ದಾಖಲಾಗಿವೆ.
ಸಮ್ಮತಿಯ ಸಲಿಂಗಕಾಮಕ್ಕೆ ಸೆಕ್ಷನ್ 377 ಅನ್ವಯವಾಗುವುದಿಲ್ಲ. ಸಮಾಜದಲ್ಲಿ ಎಲ್ಲರಂತೆ ಸಮಾನ ರೀತಿಯ ಹಕ್ಕನ್ನು ಸಲಿಂಗಕಾಮಿಗಳು ಹೊಂದಿರುತ್ತಾರೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.
2014ರಲ್ಲಿ ಕರ್ನಾಟಕದಲ್ಲಿ ಹೆಚ್ಚು ಪ್ರಕರಣ ದಾಖಲಾಗಿದೆ. ಒಟ್ಟು 14 ಪ್ರಕರಣಗಳು ನಡೆದಿದ್ದು, ಬೆಂಗಳೂರು ನಗರದಲ್ಲಿಯೇ 4 ಪ್ರಕರಣಗಳು ದಾಖಲಾಗಿತ್ತು.

ದೇಶದಲ್ಲಿ 2014ರಲ್ಲಿ 1,148, 2015ರಲ್ಲಿ 1,347 ಮತ್ತು 2016ರಲ್ಲಿ 2,187 ಪ್ರಕರಣಗಳು ದಾಖಲಾಗಿದ್ದವು. ಸೆಕ್ಷನ್ 377 ಪ್ರಕರಣಗಳು ಉತ್ತರ ಪ್ರದೇಶದಲ್ಲಿ ಹೆಚ್ಚು (999) ದಾಖಲಾಗಿವೆ. ಕೇರಳ 2ನೇ ಸ್ಥಾನದಲ್ಲಿದ್ದು 207, ದೆಹಲಿ ಮೂರನೇ ಸ್ಥಾನದಲ್ಲಿದ್ದು 182 ಪ್ರಕರಣ ದಾಖಲಾಗಿತ್ತು.
ಕಳೆದ ಮೂರು ವರ್ಷಗಳಿಂದ ಸೆಕ್ಷನ್ 377 ಕೇಸುಗಳು ದಾಖಲಾಗುವುದು ಕಡಿಮೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರು ನಗರದಲ್ಲಿ ಕೇವಲ 2 ಪ್ರಕರಣ ನಡೆದಿವೆ.
ಸೆಕ್ಷನ್ 377 ಅನ್ವಯ ಪ್ರಕರಣಗಳು ದಾಖಲಾಗುತ್ತವೆ. ಆದರೆ, ಶೋಷಿತರು ನ್ಯಾಯಾಲಯದ ಮುಂದೆ ಬರುವುದಿಲ್ಲ. ಆದ್ದರಿಂದ, ಬಹುತೇಕ ಪ್ರಕರಣಗಳು ವಜಾಗೊಳ್ಳುತ್ತವೆ.
ಯಾವ ಕಾನೂನಿನ ಅಡಿ ಪ್ರಕರಣ ದಾಖಲು ಮಾಡಬೇಕು ಎಂಬುದು ಪೊಲೀಸರಿಗೂ ಗೊಂದಲ. ಆದ್ದರಿಂದ, ಅಸಹಜ ಲೈಂಗಿಕ ಕ್ರಿಯೆ ಪ್ರಕರಣವನ್ನು ಲೈಂಗಿಕ ಕಿರುಕುಳದಡಿ ದಾಖಲು ಮಾಡಲಾಗಿದೆ.












Click it and Unblock the Notifications