ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯದಲ್ಲಿ ಕೊರೆಯುವ ಚಳಿ, ಆಗುಂಬೆಯಲ್ಲಿ 7.9 ಕನಿಷ್ಠ ತಾಪಮಾನ

|
Google Oneindia Kannada News

ಬೆಂಗಳೂರು, ಜನವರಿ 4: ರಾಜ್ಯದಲ್ಲಿ ಕೊರೆಯುವ ಚಳಿ ಮುಂದುವರೆದಿದೆ, ಸಂಕ್ರಾಂತಿಯವರೆಗೂ ಚಳಿ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನವದೆಹಲಿಯಲ್ಲಿ ಕಳೆದ 50 ವರ್ಷಗಳಲ್ಲಿ ಮೂರನೇ ಬಾರಿಗೆ ಅತಿ ಕಡಿಮೆ ತಾಪಮಾಣ 6.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ಇದೇ ರೀತಿ ತಾಪಮಾನ ಕನಿಷ್ಠ ಮಟ್ಟಕ್ಕೆ ತಲುಪಿದೆ.

ಅತಿ ಹೆಚ್ಚು ಚಳಿ ಇರುವ ದೇಶದ ಒಟ್ಟು 10 ಸ್ಥಳಗಳ ಪಟ್ಟಿಅತಿ ಹೆಚ್ಚು ಚಳಿ ಇರುವ ದೇಶದ ಒಟ್ಟು 10 ಸ್ಥಳಗಳ ಪಟ್ಟಿ

ಬೀದರ್ ಹಾಗೂ ದಾವಣಗೆರೆಯಲ್ಲಿ ಕನಿಷ್ಠ ಉಷ್ಣಾಂಶ 8ಡಿಗ್ರಿ ಸೆಲ್ಸಿಯಸ್ ಇದೆ. ಶೀತಮಾರುತ ಈ ಬಾರಿ ತೀವ್ರವಾಗಿ ಬೀಸುತ್ತಿರುವುದರಿಂದ ಚಳಿ ಹೆಚ್ಚಿದೆ. ಇದರ ಪ್ರಭಾವ ರಾಜ್ಯಕ್ಕೂ ತಟ್ಟಿದೆ.

ರಾಜ್ಯದ ಎಲ್ಲೆಲ್ಲಿ ಅತಿ ಹೆಚ್ಚು ಚಳಿ

ರಾಜ್ಯದ ಎಲ್ಲೆಲ್ಲಿ ಅತಿ ಹೆಚ್ಚು ಚಳಿ

ಬೆಂಗಳೂರು, ಶಿವಮೊಗ್ಗ, ಆಗುಂಬೆ, ಉತ್ತರ ಕನ್ನಡ ಪ್ರದೇಶಗಳಲ್ಲೂ ಶೀತಮಾರುತವಿದ್ದು, ಕನಿಷ್ಠ ತಾಪಮಾನ ಕಡಿಮೆಯಾಗಿದೆ. ದಾವಣಗೆರೆಯಲ್ಲಿ 8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಬೀದರ್‌ನಲ್ಲಿ 6 ಡಿಗ್ರಿ ಇದ್ದ ಕನಿಷ್ಠ ತಾಪಮಾನ 8 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗಿದೆ.

ಕನಿಷ್ಠ ತಾಪಮಾನದಲ್ಲಿ ಏರಿಕೆ

ಕನಿಷ್ಠ ತಾಪಮಾನದಲ್ಲಿ ಏರಿಕೆ

ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಕನಿಷ್ಠ ತಾಪಮಾನ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಚಳಿ ಕಡಿಮೆಯಾಗಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿಎಸ್ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ. ರಾಜ್ಯದ ಶೇ.15 ರಷ್ಟು ಹವಾಮಾನ ಕೇಂದ್ರಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿಗಿಂತ ಕಡಿಮೆ ಇದ್ದುಈಗ ಕನಿಷ್ಠ ತಾಪಮಾನ ಸ್ವಲ್ಪ ಏರಿಕೆಯಾಗಿದೆ.

ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ ಕಳೆದ 7 ವರ್ಷಗಳಲ್ಲಿ ಜನವರಿಯಲ್ಲಿ ದಾಖಲಾದ ಅತಿ ಕಡಿಮೆ ತಾಪಮಾನ

ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನವಿದೆ

ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನವಿದೆ

ಆಗುಂಬೆಯಲ್ಲಿ ಕನಿಷ್ಠ 7.9 ಡಿಗ್ರಿ ಸೆಲ್ಸಿಯಸ್, ದಾವಣಗೆರೆ, ಬೀದರ್‌ನಲ್ಲಿ 8, ಚಾಮರಾಜನಗರದಲ್ಲಿ 8.2, ಮಡಿಕೇರಿಯಲ್ಲಿ 8.3, ವಿಜಯಪುರದಲ್ಲಿ 8.8, ಹಾಸನದಲ್ಲಿ 9.6, ಹಾವೇರಿಯಲ್ಲಿ 9.8, ಧಾರವಾಡದಲ್ಲಿ 9.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನವಿದೆ.

ಬೆಂಗಳೂರಲ್ಲಿ ಹೇಗಿದೆ ತಾಪಮಾನ

ಬೆಂಗಳೂರಲ್ಲಿ ಹೇಗಿದೆ ತಾಪಮಾನ

ಬೆಂಗಳೂರು ನಗರದಲ್ಲಿ ಕನಿಷ್ಠ ತಾಪಮಾನ ಒಂದು ಡಿಗ್ರಿ ಏರಿಕೆಯಾಗಿದೆ, 13.1ಡಿಗ್ರಿ ಸೆಲ್ಸಿಯಸ್ ಕನಿಷ್ಠ ಹಾಗೂ 28.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಕೆಐಎಎಲ್‌ನಲ್ಲಿ ಕನಿಷ್ಠ 11.2 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 27.5 ಡಿಗ್ರಿ ಸೆಲ್ಸಿಯಸ್, ಎಚ್‌ಎಲ್‌ನಲ್ಲಿ ಕನಿಷ್ಠ 11.6 ಡಿಗ್ರಿ ಸೆಲ್ಸಿಯಸ್, 28.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

English summary
South India Chirapunji Agumbe witnessing low temperature record. Yesterday it was just 7.9-degree celsius.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X