ತಾಂಜೇನಿಯಾ ಯುವತಿ ಮೇಲೆ ಹಲ್ಲೆ: ಐವರ ಬಂಧನ

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಫೆಬ್ರವರಿ, 04: ತಾಂಜೇನಿಯಾ ಯುವತಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರು ಪೊಲೀಸರು ಐವರನ್ನು ಬಂಧಿಸಿದ್ದಾರೆ. ನಾಲ್ವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದ್ದು ಐದನೇ ವ್ಯಕ್ತಿಯನ್ನು ಗುರುವಾರ ಬೆಳಗ್ಗೆ ವಶಕ್ಕೆ ಪಡೆಯಲಾಗಿದೆ.[ವಿಡಿಯೋ : ತಾಂಜಾನಿಯಾ ಮಹಿಳೆ ಮೇಲೆ ದಾಳಿ]

ನಾಲ್ಕು ಜನರನ್ನು ಸಮಗ್ರವಾಗಿ ವಿಚಾರಣೆ ಮಾಡಲಾಗಿದ್ದು ಪ್ರಮುಖ ಆರೋಪಿ 5ನೇ ವ್ಯಕ್ತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ನಾವು ದೂರು ತೆಗೆದುಕೊಳ್ಳಲು ನಿರಾಕರಿಸಿಲ್ಲ. ಯುವತಿಯಿಂದ ಘಟನೆ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಂಡಿದ್ದೇವೆ. ಪ್ರಕರಣದಲ್ಲಿ 8 ರಿಂದ 10 ಜನ ಪಾಲ್ಗೊಂಡಿದ್ದು ಎನ್ನಲಾಗಿದ್ದು ಎಲ್ಲರನ್ನು ಬಂಧಿಸುತ್ತೇವೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ.[ತಾಂಜೇನಿಯಾ ಯುವತಿ ಮೇಲೆ ಹಲ್ಲೆ ನಡೆದಿದ್ದು ಯಾಕೆ?]

5 arrested for assault on Tanzanian student in Bengaluru

ಬೆಂಗಳೂರು ಸೋಲದೇವನಹಳ್ಳಿ ಠಾಣೆಯ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರು. ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಹುಲ್ ಗಾಂಧಿ ಸಹ ವರದಿ ಕೇಳಿದ್ದಾರೆ.[ಯುವತಿ ಮೇಲೆ ಹಲ್ಲೆ : ಸಿದ್ದರಾಮಯ್ಯಗೆ ಸುಷ್ಮಾ ಸ್ವರಾಜ್ ಕರೆ]

ಈ ಬಗ್ಗೆ ಟ್ವಿಟರ್ ನಲ್ಲಿ ಮಾಹಿತಿ ನೀಡಿದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್, ತಾಂಜಾನಿಯಾ ಯುವತಿಗೆ ಥಳಿಸಿರುವ ಪ್ರಕರಣದ ಸಮಗ್ರ ವರದಿ ನೀಡಿ ಹಾಗೂ ಆರೋಪಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಬೆಂಗಳೂರು ಪೊಲೀಸರ ಬಳಿ ಕ್ಷಿಪ್ರವಾಗಿ ವರದಿ ನೀಡುವಂತೆ ಕೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The Bengaluru police has arrested five persons in connection with the attack on a 21 year old Tanzanian student. All the five are being questioned by the police in connection with the case. The police had detained for questioning four persons last night and the fifth person was picked up based on the investigations that the police have been conducting.
Please Wait while comments are loading...