ಕೊರೊನಾವೈರಸ್ ಅಟ್ಟಹಾಸಕ್ಕೆ ಕರುನಾಡು ಕಕ್ಕಾಬಿಕ್ಕಿ; ಇಲ್ಲಿದೆ ಮಾಹಿತಿ!

ಬೆಂಗಳೂರು, ಜೂನ್.22: ಕರ್ನಾಟಕದಲ್ಲಿ ನೊವೆಲ್ ಕೊರೊನಾವೈರಸ್ ಮಹಾಸ್ಫೋಟ ಸಂಭವಿಸಿದೆ. ನಿರಂತರವಾಗಿ ಎರಡನೇ ದಿನವೂ ಕೊವಿಡ್-19 ಸೋಂಕಿತರ ಸಂಖ್ಯೆಯು 400ರ ಗಡಿ ದಾಟಿದ್ದು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆಯಾ ಎಂಬ ಆತಂಕವನ್ನು ಹುಟ್ಟು ಹಾಕುತ್ತಿದೆ.

Recommended Video

      ಮೋದಿಗಿಂತ ಮೊದಲೇ ಚೀನಾ ವಿರುದ್ಧ ತೊಡೆತಟ್ಟಿದ್ದ ಕುಮಾರಸ್ವಾಮಿ|HD KumarSwamy |Narendra Modi | Oneindia Kannada

      ರಾಜ್ಯದಲ್ಲಿ ಭಾನುವಾರ ಒಂದೇ ದಿನ ಬರೋಬ್ಬರಿ 453 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 9150ಕ್ಕೆ ಏರಿಕೆಯಾಗಿದೆ.

      ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ನಲ್ಲಿ ಕೊರೊನಾವೈರಸ್ ಅಂಕಿ-ಅಂಶಗಳನ್ನು ಹೇಳಲಾಗಿದೆ. ಭಾನುವಾರ ರಾಜ್ಯದಲ್ಲಿ ಮಹಾಮಾರಿಗೆ ಐವರು ಪ್ರಾಣ ಬಿಟ್ಟಿದ್ದು, ಒಟ್ಟು ಮೃತಪಟ್ಟವರ ಸಂಖ್ಯೆಯು 137ಕ್ಕೆ ಏರಿಕೆಯಾಗಿದೆ.

      ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸಾವಿನ ಪ್ರಮಾಣ ಏರಿಕೆ

      ಸಿಲಿಕಾನ್ ಸಿಟಿಯಲ್ಲಿ ಕೊವಿಡ್-19 ಸಾವಿನ ಪ್ರಮಾಣ ಏರಿಕೆ

      ರಾಜ್ಯ ರಾಜಧಾನಿಯಲ್ಲಿ ಕೊರೊನಾವೈರಸ್ ಅಟ್ಟಹಾಸಕ್ಕೆ ಸಿಕ್ಕು ನಲುಗಿದೆ. ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ ಬರೋಬ್ಬರಿ 196 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಇದರ ಜೊತೆಗೆ ಪ್ರತಿನಿತ್ಯ ಕೊರೊನಾವೈರಸ್ ಸೋಂಕಿನಿಂದ ಮೃತಪಡುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಭಾನುವಾರ ಬೆಂಗಳೂರಿನಲ್ಲೇ ಮೂವರು ಕೊರೊನಾವೈರಸ್ ಮಹಾಮಾರಿಗೆ ಬಲಿಯಾಗಿದ್ದಾರೆ. 53 ವರ್ಷದ ಮಹಿಳೆ, 62 ವರ್ಷದ ಪುರುಷ ಹಾಗೂ 55 ವರ್ಷದ ಪುರುಷ ರೋಗಿಯು ಚಿಕಿತ್ಸೆ ಫಲಿಸದೇ ಪ್ರಾಣ ಬಿಟ್ಟಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಇದುವರೆಗೂ ಕೊವಿಡ್-19 ನಿಂದಾಗಿ ಬರೋಬ್ಬರಿ 64 ಜನರು ಸಾವನ್ನಪ್ಪಿದ್ದಾರೆ.

      ಬೀದರಲ್ಲಿ ಕೊರೊನಾವೈರಸ್ ನಿಂದ ಇಬ್ಬರು ಸಾವು

      ಬೀದರಲ್ಲಿ ಕೊರೊನಾವೈರಸ್ ನಿಂದ ಇಬ್ಬರು ಸಾವು

      ಕೊರೊನಾವೈರಸ್ ಅಟ್ಟಹಾಸಕ್ಕೆ ಬೀದರ್ ನಲ್ಲೂ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಭಾನುವಾರ ಜಿಲ್ಲೆಯಲ್ಲಿ ಮಹಾಮಾರಿಗೆ ಇಬ್ಬರು ಪ್ರಾಣ ಬಿಟ್ಟಿದ್ದಾರೆ. 46 ವರ್ಷದ ಪುರುಷ ಹಾಗೂ 70 ವರ್ಷದ ವೃದ್ಧನು ಚಿಕಿತ್ಸೆ ಫಲಕಾರಿಯಾಗಿದೇ ಉಸಿರು ಚೆಲ್ಲಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಕೊರೊನಾವೈರಸ್ ಗೆ ಮೃತಪಟ್ಟವರ ಒಟ್ಟು ಸಂಖ್ಯೆ 15ಕ್ಕೆ ಏರಿಕೆಯಾಗಿದೆ.

      ರಾಜ್ಯದಲ್ಲಿ ಜಿಲ್ಲಾವಾರು ಕೊರೊನಾವೈರ್ ಪ್ರಕರಣ

      ರಾಜ್ಯದಲ್ಲಿ ಜಿಲ್ಲಾವಾರು ಕೊರೊನಾವೈರ್ ಪ್ರಕರಣ

      ನೊವೆಲ್ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು ರಾಜ್ಯದಲ್ಲಿ 9150ಕ್ಕೆ ಏರಿಕೆಯಾಗಿದ್ದು, ರಾಜ್ಯದಲ್ಲಿ ಒಂದೇ ದಿನ 543 ಮಂದಿಗೆ ಸೋಂಕು ದೃಢಪಟ್ಟಿದೆ. ಬೆಂಗಳೂರು ನಗರ - 196, ಬಳ್ಳಾರಿ - 40, ಕಲಬುರಗಿ - 39, ವಿಜಯಪುರ - 39, ಮೈಸೂರು - 18, ಗದಗ - 18, ಧಾರವಾಡ - 15, ಬಾಗಲಕೋಟೆ - 14, ಬೀದರ್ - 13, ದಾವಣಗೆರೆ - 8, ಉತ್ತರ ಕನ್ನಡ - 8, ಕೋಲಾರ - 8, ದಕ್ಷಿಣ ಕನ್ನಡ -7, ಮಂಡ್ಯ - 5, ಹಾಸನ - 5, ತುಮಕೂರು - 4, ಯಾದಗಿರಿ - 3, ಚಿಕ್ಕಬಳ್ಳಾಪುರ - 3, ಹಾವೇರಿ - 3, ರಾಯಚೂರು - 2, ಶಿವಮೊಗ್ಗ - 2, ರಾಮನಗರ - 2, ಚಿಕ್ಕಮಗಳೂರಿನಲ್ಲಿ ಒಂದು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ಕರ್ನಾಟಕದಲ್ಲಿ 5618 ಸೋಂಕಿತರು ಗುಣಮುಖ

      ಕರ್ನಾಟಕದಲ್ಲಿ 5618 ಸೋಂಕಿತರು ಗುಣಮುಖ

      ಇನ್ನು, ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿತರಿಗೆ ನೀಡುತ್ತಿರುವ ಚಿಕಿತ್ಸೆಯಿಂದ ಭಾನುವಾರ ಕೂಡ 225 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಒಟ್ಟು 5618 ಮಂದಿ ಇದುವರೆಗೂ ಗುಣಮುಖರಾಗಿದ್ದಾರೆ. ಭಾನುವಾರ ಬೀದರ್ - 53, ರಾಯಚೂರು - 34, ದಕ್ಷಿಣ ಕನ್ನಡ -26, ಬೆಂಗಳೂರು ನಗರ - 17, ಯಾದಗಿರಿ - 15, ಬಳ್ಳಾರಿ - 12, ಧಾರವಾಡ -12, ಕಲಬುರಗಿ - 9, ವಿಜಯಪುರ - 7, ಹಾಸನ - 7, ಉಡುಪಿ - 6, ದಕ್ಷಿಣ ಕನ್ನಡ - 6, ಬಾಗಲಕೋಟೆ - 6, ಚಿತ್ರದುರ್ಗ - 3, ಗದಗ - 3, ಬೆಳಗಾವಿ - 3, ಕೊಪ್ಪಳ -1 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+