ಸಹಾಯವಾಣಿ ಕಂಪೆನಿಗೆ ತಿಂಗಳಿಗೆ 4 ಲಕ್ಷ ವೇತನ ಪಾವತಿ: ತನಿಖೆಗೆ ಆದೇಶಿಸಿದ ಸಚಿವ ಜಮೀರ್
ಬೆಂಗಳೂರು, ಜೂನ್ 13: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿಝಡ್ ಜಮೀರ್ ಅಹ್ಮದ್ ಖಾನ್ ಅವರು ತಮ್ಮ ಇಲಾಖೆಯು ಸರ್ಕಾರದ ಯೋಜನೆಗಳ ಮಾಹಿತಿಯನ್ನು ಪ್ರಸಾರ ಮಾಡಲು ಸಹಾಯವಾಣಿಯನ್ನು ಸ್ಥಾಪಿಸಲು ಕಂಪನಿಗೆ 4 ಲಕ್ಷ ರೂಪಾಯಿಗಳ ಮಾಸಿಕ ವೇತನವನ್ನು ಹೇಗೆ ಪಾವತಿಸಿದೆ ಎಂಬುದರ ಕುರಿತು ತನಿಖೆಗೆ ಆದೇಶಿಸಿದ್ದಾರೆ.
ಪರಿಶೀಲನಾ ಸಭೆಯೊಂದರಲ್ಲಿ ಜಮೀರ್ ಅವರು ಈ ಸಂಗತಿಯನ್ನು ಪತ್ತೆ ಹಚ್ಚಿದ್ದಾರೆ. ಕಂಪನಿಯು ಕನಿಷ್ಠ ಒಂದು ವರ್ಷದವರೆಗೆ ತಿಂಗಳಿಗೆ 4 ಲಕ್ಷ ರೂಪಾಯಿ ವೇತನವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ನೀಡುವ ಯೋಜನೆಗಳ ಕುರಿತು ಸಹಾಯವಾಣಿಯನ್ನು ಸ್ಥಾಪಿಸಲು ಮತ್ತು ನಡೆಸಲು ಪಡೆಯುತ್ತಿತ್ತು. ಇಲಾಖೆಗೆ ಯಾವುದೇ ಪ್ರಯೋಜನವಾಗದಿದ್ದರೂ ಸಹಾಯವಾಣಿಯನ್ನು ಏಕೆ ಮುಂದುವರಿಸಲಾಗಿದೆ ಎಂದು ಸಭೆಯಲ್ಲಿ ಜಮೀರ್ ಪ್ರಶ್ನಿಸಿದರು.

ಮುಖ್ಯ ಕಾರ್ಯದರ್ಶಿಗೆ ಸಿಗುವ ವೇತನಕ್ಕಿಂತ ಮೂರು ಪಟ್ಟು ವೇತನ ನೀಡಲು ಹೇಗೆ ಸಾಧ್ಯ? ಇಲಾಖೆಯ ನಿತ್ಯ ಸಹಾಯವಾಣಿಗೆ ಪ್ರತಿ ವರ್ಷ 2.5 ಕೋಟಿ ರೂಪಾಯಿ ವ್ಯಯವಾಗುತ್ತಿರುವಾಗ ಪ್ರತ್ಯೇಕ ಸಹಾಯವಾಣಿ ಕೇಂದ್ರದ ಅಗತ್ಯ ಏನಿತ್ತು? ಈ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದೆ ಎಂದು ಜಮೀರ್ ತಮ್ಮ ಕಚೇರಿಯ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಕಳೆದ ಐದು ವರ್ಷಗಳಲ್ಲಿ ಕಾಮಗಾರಿಗಳಿಗೆ ಗುತ್ತಿಗೆದಾರರಿಗೆ ಪಾವತಿಸಿದ ಮೊತ್ತದ ಕುರಿತು ಸಚಿವರು ಸಮಗ್ರ ವರದಿ ಕೇಳಿದ ಅವರು ಕಾಮಗಾರಿ ಪರಿಶೀಲನೆಗೆ ತಜ್ಞರ ತಂಡವನ್ನು ನಿಯೋಜಿಸಬೇಕು ಎಂದು ಕೋರಿದರು. ರಾಜ್ಯಾದ್ಯಂತ 126 ಶಾದಿ ಮಹಲ್‌ಗಳ ನಿರ್ಮಾಣ ಪೂರ್ಣಗೊಳಿಸಲು 56 ಕೋಟಿ ರೂಪಾಯಿಗಳ ಅಗತ್ಯವಿದೆ. ಹೆಚ್ಚಿನ ಶಾದಿ ಮಹಲ್‌ಗಳಿಗೆ ಬೇಡಿಕೆ ಇದೆ. ಹೀಗಾಗಿ ಅನುದಾನ ಸಂಬಂದ ವಿವರವಾದ ಪ್ರಸ್ತಾವನೆಯನ್ನು ಕೊಡಲು ಸೂಚಿಸಿದರು.
ಪರಿಶೀಲನೆ ವೇಳೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ರಾಜ್ಯದಲ್ಲಿ 126 ಅಲ್ಪಸಂಖ್ಯಾತರ ವಸತಿ ಶಾಲೆ ಮತ್ತು ಕಾಲೇಜುಗಳಿದ್ದು, 29 ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಮುಂದಿನ ವರ್ಷ ಅವರೆಲ್ಲರೂ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳ ಪ್ರವೇಶ ಕಡಿಮೆಯಿದ್ದರೆ ಅದನ್ನು ಹೆಚ್ಚಿಸಬೇಕು, ನಿಗದಿತ ಪ್ರವೇಶಕ್ಕಿಂತ ಹೆಚ್ಚಿನ ಪ್ರವೇಶಕ್ಕೆ ಬೇಡಿಕೆ ಬಂದರೆ ಹೆಚ್ಚುವರಿ ಕಟ್ಟಡಗಳನ್ನು ನಿರ್ಮಿಸಬೇಕು ಎಂದು ಜಮೀರ್ ಹೇಳಿದರು.

ಮೌಲಾನಾ ಆಜಾದ್ ವಸತಿ ಶಾಲೆ ಮತ್ತು ಕಾಲೇಜುಗಳಲ್ಲಿ ಕನ್ನಡ ಕಲಿಸಬೇಕು. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಕನ್ನಡ ಕಲಿಸಲು ಅಗತ್ಯವಿರುವ ಶಿಕ್ಷಕರು ಮತ್ತು ಸಂಪನ್ಮೂಲ ವ್ಯಕ್ತಿಗಳನ್ನು ನೇಮಿಸಬೇಕು. ನಾವು ಈಗಾಗಲೇ ಇಂಗ್ಲಿಷ್ ಕಲಿಸುತ್ತಿದ್ದೇವೆ ಮತ್ತು ಕನ್ನಡ ಕಲಿಸಲು ಪ್ರಾರಂಭಿಸಬೇಕು ಎಂದು ಅವರು ಹೇಳಿದರು.












Click it and Unblock the Notifications