ಶಕ್ತಿ ಯೋಜನೆ: 30 ಕೋಟಿ ದಾಟಿದ ಮಹಿಳಾ ಪ್ರಯಾಣಿಕರ ಸಂಖ್ಯೆ, ಖರ್ಚಾದ ಟಿಕೆಟ್‌ ದರವೆಷ್ಟು?

ಬೆಂಗಳೂರು, ಆಗಸ್ಟ್‌ 05: ರಾಜ್ಯ ಸರ್ಕಾರದ ಗ್ಯಾರಂಟೀ ಯೋಜನೆಯೇ ಸರ್ಕಾರ ರಚನೆ ಆಗಲು ಕಾರಣ ಎಂದು ಬಹುತೇಕರು ಹೇಳುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಫ್ರೀ ಗ್ಯಾರಂಟಿ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಶಕ್ತಿ ಯೋಜನೆ ಕೂಡ ಒಂದು. ಈ ಶಕ್ತಿ ಯೋಜನೆಯಡಿ ಕೆ‌ಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ ಈವರೆಗೆ ಕೋಟ್ಯಾಂತರ ಮಹಿಳೆಯರು ಬಸ್‌ನಲ್ಲಿ ಪ್ರಯಾಣ ಮಾಡಿದ್ದು, ಅದರಿಂದ ಸಾರಿಗೆ ನಿಗಮಗಳಿಗೆ ಕೋಟ್ಯಾಂತರ ರೂಪಾಯಿ ಆದಾಯ ಹರಿದು ಬಂದಿದೆ.

ಜೂನ್ 11 ರಂದು ಆರಂಭವಾದ ಶಕ್ತಿ ಯೋಜನೆ ಜಾರಿಯಾಗಿ ಸಾಕಷ್ಟು ದಿನ ಕಳೆದಿದೆ. ಯೋಜನೆ ಜಾರಿಯಾದ ಬಳಿಕ ಇಲ್ಲಿಯವರೆಗೆ 32.16 ಕೋಟಿ ಮಹಿಳಾ ಪ್ರಯಾಣಿಕರು ಬಸ್‌ನಲ್ಲಿ ಓಡಾಟ ಮಾಡಿದ್ದಾರೆ. 749.30 ಕೋಟಿ ಮೌಲ್ಯದ ಟಿಕೆಟ್ ನೀಡಲಾಗಿದ್ದು, ಪ್ರತಿನಿತ್ಯ ಸರಾಸರಿ 59.55 ಲಕ್ಷ ಮಹಿಳಾ ಪ್ರಯಾಣಿಕರು ಓಡಾಟ ಮಾಡುತ್ತಿದ್ದಾರೆ.

32.16 Crore Women Have Traveled Free Bus In Shakti Scheme

ಯೋಜನೆ ಜಾರಿಗೂ ಮೊದಲು ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ 84.91 ಲಕ್ಷ ಇತ್ತು. ಯೋಜನೆ ಜಾರಿ ಬಳಿಕ 109.95 ಲಕ್ಷ ಪ್ರಯಾಣಿಕರು ಓಡಾಟ ಮಾಡುತ್ತಿದ್ದು, ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಇನ್ನೂ ಶಕ್ತಿ ಯೋಜನೆ ಜಾರಿಯಾದಾಗಿನಿಂದ ಜೂನ್ 11 ರಿಂದ ಆಗಸ್ಟ್ 03ರವರೆಗೆ ಯಾವ ಯಾವ ನಿಗಮಗಳಲ್ಲಿ ಒಟ್ಟು ಮಹಿಳಾ ಪ್ರಯಾಣಿಕರ ಸಂಖ್ಯೆ ಹಾಗೂ ಟಿಕೆಟ್ ಮೌಲ್ಯ ಎಷ್ಟಿದೆ ಎನ್ನುವುದರ ಮಾಹಿತಿ ಇಲ್ಲಿದೆ. ಕೆಎಸ್‌ಆರ್‌ಟಿಸಿಯಲ್ಲಿ ಒಟ್ಟು‌ 9,84,84,932 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 2,83,34,99,224 ರೂಪಾಯಿ ಆಗಿದೆ.

32.16 Crore Women Have Traveled Free Bus In Shakti Scheme

ಬಿಎಂಟಿಸಿಯಲ್ಲಿ ಒಟ್ಟು 10,51,59,121 ಮಹಿಳೆಯರು ಪ್ರಯಾಣಿಸಿದ್ದು, ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 1,34,61,65,595 ರೂಪಾಯಿ ಅಷ್ಟಿದೆ. ಇನ್ನು ಎನ್‌ಡಬ್ಲ್ಯೂಕೆಆರ್‌ಟಿಸಿಯಲ್ಲಿ ಒಟ್ಟು 7,49,43,494 ಮಹಿಳೆಯರು ಪ್ರಯಾಣಿಸಿದ್ದು, ಮಹಿಳಾ ಪ್ರಯಾಣಿಕರ ದರ 1,88,05,92,156 ರೂಪಾಯಿ ಆಗಿದೆ. ಹಾಗೂ ಕೆಆರ್‌ಟಿಸಿಯಲ್ಲಿ ಯಲ್ಲಿ ಒಟ್ಟು 4,30,10,788 ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು, ಮಹಿಳಾ ಪ್ರಯಾಣಿಕರ ದರ 1,43,27,12,544 ರಷ್ಟಿದೆ.

ಈವರೆಗೆ ಒಟ್ಟು 32,15,98,335 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಟ್ಟು ಮಹಿಳಾ ಪ್ರಯಾಣಿಕರ ಟಿಕೆಟ್‌ ಮೌಲ್ಯ 7,49,29,69,539. ಈ ವರೆಗೆ 258 ಕೋಟಿ ಹಣದಲ್ಲಿ ಅರ್ಧ ಹಣ ಸರ್ಕಾರ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಹಣಕಾಸು ಇಲಾಖೆ ಕೆಲವೊಂದು ಮಾಹಿತಿ ಕೇಳಿದ್ದು ಅದನ್ನು ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳು ನೀಡಲಿದ್ದಾರೆ.

ಸದ್ಯ ಎಲ್ಲಿಯೂ ಯಾವುದೇ ಸಮಸ್ಯೆ ಆಗಿಲ್ಲ, ಎಲ್ಲವೂ ಸರಿಯಾಗೇ ಇದೆ. ಎಲ್ಲಾ ನಾಲ್ಕು‌ ನಿಗಮಗಳಲ್ಲೂ ಸರಿಯಾದ ಸಮಯಕ್ಕೆ ಸಂಬಳ ಆಗಿದೆ, ಆಗುತ್ತಿದೆ. ಸಂಬಳ ಆಗಿರೋದರ ದಾಖಲೆ ಇದೆ. ಹೊಸ ಸರ್ಕಾರ ಬಂದಿದೆ, ಎಲ್ಲದಕ್ಕೂ ಕಾಲಾವಕಾಶ‌ ಕೊಡಬೇಕು ಎನ್ನುವುದು ಸಾರಿಗೆ ಇಲಾಖೆಯ ಸ್ಪಷ್ಟನೆ ಆಗಿದೆ.

ಒಟ್ಟಿನಲ್ಲಿ ಸರ್ಕಾರದ ಶಕ್ತಿ ಯೋಜನೆಯಡಿ ಇಲ್ಲಿಯವರೆಗೆ ಕೋಟ್ಯಾಂತರ ಮಹಿಳೆಯರು ಉಚಿತ ಪ್ರಯಾಣ ಲಾಭ ಪಡೆದುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಶಕ್ತಿಯಲ್ಲಿ ಇನ್ನೆಷ್ಟು ದ್ವಿಗುಣವಾಗಿ ಸಾರಿಗೆ ಸಂಸ್ಥೆಗೆ ಇನ್ನೇಷ್ಟು ಲಾಭವಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+