ಗುಂಜಾವತಿ ಮುರುಕನಕಟ್ಟೆ ಕೆರೆಯಲ್ಲಿ ಮುಳುಗಿ ಆನೆ ಮರಿ ಸಾವು

ಕಾರವಾರ, ಅಕ್ಟೋಬರ್ 6: ಕೆರೆಯಲ್ಲಿ ಮುಳುಗಿ ಮೂರು ವರ್ಷದ ಆನೆ ಮರಿಯೊಂದು ಸಾವನ್ನಪ್ಪಿದ ಘಟನೆ ಮುಂಡಗೋಡ ತಾಲ್ಲೂಕಿನ ಗುಂಜಾವತಿ ಮುರುಕನಕಟ್ಟೆ ಕೆರೆಯಲ್ಲಿ ನಡೆದಿದೆ.

ವಾರದ ಹಿಂದೆ ಕಾಡಿನಿಂದ ಆನೆಯ ಹಿಂಡು ಬಂದಿದೆ. ಆ ವೇಳೆ ಮರಿಯೊಂದು ಗದ್ದೆಯಲ್ಲಿ ಸಂಚರಿಸಿ, ನೀರು ಕುಡಿಯಲು ತೆರಳಿದ್ದ ವೇಳೆ ತುಂಬಿದ್ದ ಕೆರೆಯಲ್ಲಿ ಬಿದ್ದು ಮೃತಪಟ್ಟಿರಬಹುದು. ಅಥವಾ ಆನೆಗಳು ಜಗಳ ಆಡುವಾಗ ಗಾಯಗೊಂಡ ಮರಿಯು ಕೆರೆಯಲ್ಲಿ ಬಿದ್ದು ಮೃತಪಟ್ಟಿರಬಹುದು ಎಂದು ಅರಣ್ಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

Elephant

ಆನೆಯ ಕಳೇಬರವು ಕೊಳೆತಿದ್ದು, ಎರಡ್ಮೂರು ದಿನಗಳ ಹಿಂದೆಯೇ ಮೃತಪಟ್ಟಿದೆ ಎನ್ನಲಾಗಿದೆ. ಸ್ಥಳಕ್ಕೆ ಎಸಿಎಫ್ ಶಶಿಧರ, ಆರ್ ಎಫ್ ಒ ಸುರೇಶ ಕಲ್ಲೊಳ್ಳಿ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ.

ನೀರಿನಿಂದ ಆನೆ ಮರಿಯ ಕಳೇಬರವನ್ನು ಮೇಲಕ್ಕೆ ಎತ್ತಲು ಹಾಗೂ ಮರಣೋತ್ತರ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.

ಕೆರೆಯ ಪಕ್ಕದ ಅರಣ್ಯದಲ್ಲಿಯೇ ಮೃತ ಆನೆಯ ಅಂತ್ಯಸಂಸ್ಕಾರ ನಡೆಸಲು ತಯಾರಿ ನಡೆಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+