ಕನಕಪುರ ತೋಟದಲ್ಲಿ 3 ಬರ್ಬರ ಹತ್ಯೆ, ಆರೋಪಿಯ ಬಂಧನ

By: ಮೈಸೂರು ಪ್ರತಿನಿಧಿ
Subscribe to Oneindia Kannada

ಕನಕಪುರ, ಜನವರಿ,08: ಕನಕಪುರ ತಾಲೂಕಿನ ಒಂದೇ ಕುಟುಂಬದ ಮೂವರನ್ನು ಭೀಕರವಾಗಿ ಕೊಲೆಗೈದು, ಇಡೀ ರಾಮನಗರ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ ದುಷ್ಕರ್ಮಿಯ ಬೆನ್ನು ಹತ್ತಿದ್ದ ಪೊಲೀಸರು ಆತನನ್ನು ಒಂದೇ ದಿನದಲ್ಲಿಯೇ ಹುಡುಕಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಬಸವರಾಜ ಬೋವಿ (40) ಎಂಬಾತನೇ ಮೂವರನ್ನು ಕೊಲೆ ಮಾಡಿದ ಆರೋಪಿ. ಈತ ಮಾರೇಗೌಡ (70), ಮಗಳು ಗೌರಮ್ಮ (50), ಮೊಮ್ಮಗಳು ಸುಕನ್ಯಾ (14) ಎಂಬುವವರನ್ನು ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಮರಳವಾಡಿ ಹೋಬಳಿ, ಬೆಜ್ಜಲಹಳ್ಳಿ ಗ್ರಾಮದ ಬಳಿಯ ಒಂಟಿ ಮನೆ ತೋಟದಲ್ಲಿ ಮಂಗಳವಾರ ಕೊಲೆ ಮಾಡಿ ಪರಾರಿಯಾಗಿದ್ದನು.[ತಾಯಿಯನ್ನು ಮದುವೆಯಾಗಲು ಮಕ್ಕಳನ್ನೇ ಕೊಂದ ಭೂಪ!]

Kanakapura

ಬಸವರಾಜ ಬೋವಿ ಗೌರಮ್ಮನಿಗೆ ದೈಹಿಕ ಸಂಬಂಧಕ್ಕೆ ಆಹ್ವಾನ ನೀಡಿದ್ದನು. ಇದಕ್ಕೆ ಗೌರಮ್ಮ ಸಂಪೂರ್ಣವಾಗಿ ಪ್ರತಿರೋಧ ವ್ಯಕ್ತಪಡಿಸಿದ್ದಳು. ಇದರಿಂದ ಕುಪಿತನಾದ ಈತ ಸಂಚು ರೂಪಿಸಿ ಗೌರಮ್ಮ ಸೇರಿದಂತೆ ಮೂವರನ್ನು ಕೊಲೆ ಮಾಡಿದ್ದಾನೆ.[ಮಗಳನ್ನು ಕೊಲ್ಲುವಾಗ ತಾಯಿ ಪ್ರೀತಿ ಎಲ್ಲಿ ಹೋಗಿತ್ತು?]

ತೋಟದ ಮನೆಯಲ್ಲಿ ಮೊಲವನ್ನು ಸೆರೆ ಹಿಡಿದಿರುವುದಾಗಿ ಹೇಳಿ ಮಾರೇಗೌಡನನ್ನು ಮನೆಯಿಂದ ಹೊರಗೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ನಂತರ ಗೌರಮ್ಮನ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಮತ್ತು ಆಕೆಯ ಮೊಮ್ಮಗಳು ಸುಖನ್ಯಾರನ್ನು ಕೊಲೆ ಮಾಡಿ ಪರಾರಿಯಾಗಿದ್ದನು.[18 ವರ್ಷದ ಮಗನ ಹುಡುಕಾಟಕ್ಕೆ ನಿಂತ ಮಹಾತಾಯಿ]

ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ, ಡಿವೈಎಸ್ ಪಿ ಲಕ್ಷ್ಮಿ ಗಣೇಶ್, ಸರ್ಕಲ್ ಇನ್ಸ್ ಪೆಕ್ಟರ್ ಶ್ರೀನಿವಾಸ್ ಈ ಸಂಬಂಧ ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಒಂದೇ ದಿನದಲ್ಲಿ ಬಸವರಾಜ ಬೋವಿಯನ್ನು ಬಂಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three people Maregowda (70), Gowramma (50), Sukhanya (14) brutally murdered in Bejjalahalli Village, Kanakapura taluk, Ramanagar district, on Tuesday, January 5th.
Please Wait while comments are loading...