ಅಂತರ್ಜಾತಿ ವಿವಾಹ: ಎಸ್ ಸಿ ಯವಕರಿಗೆ 3 ಲಕ್ಷ, ಯುವತಿಯರಿಗೆ 5 ಲಕ್ಷ

ಬೆಂಗಳೂರು, ಫೆಬ್ರವರಿ 16: ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಶಿಷ್ಟ ಜಾತಿ ಯುವಕರ ಮದುವೆಗೆ ಭರ್ಜರಿ ಘೋಷಣೆ ಮಾಡಿದ್ದಾರೆ. ಹ್ಞಾಂ, ತಡೆಯಿರಿ. ಪರಿಶಿಷ್ಟ ಜಾತಿಯ ಯುವಕರು ಅಂತರ್ಜಾತಿ ವಿವಾಹ ಆದರೆ ಮಾತ್ರ ಈ ಯೋಜನೆ ಅನ್ವಯ ಆಗಲಿದ್ದು, ಸರಕಾರದಿಂದ ಪ್ರೋತ್ಸಾಹಧನ ಸಿಗುತ್ತದೆ.

ಬೇರೆ ಜಾತಿಯ ಯುವತಿಯನ್ನು ವಿವಾಹ ಆಗುವ ಪರಿಶಿಷ್ಟ ಜಾತಿ ಯುವಕರಿಗೆ 3 ಲಕ್ಷ ರುಪಾಯಿ ಪ್ರೋತ್ಸಾಹ ಧನ ನೀಡಲಾಗುತ್ತದೆ. ಈ ಮೊತ್ತ ಹಿಂದೆ 2 ಲಕ್ಷ ರುಪಾಯಿ ಇತ್ತು. ಅದನ್ನು ಒಂದು ಲಕ್ಷ ಏರಿಕೆ ಮಾಡಲಾಗಿದೆ. ಇನ್ನು ಪರಿಶಿಷ್ಟ ಜಾತಿಯ ಯುವತಿ ಇತರ ಜಾತಿಯ ಯುವಕನನ್ನು ಮದುವೆ ಆದರೆ 5 ಲಕ್ಷ ರುಪಾಯಿ ನೀಡಲಾಗುತ್ತದೆ.

ಇದಕ್ಕೂ ಮುನ್ನ ಈ ಮೊತ್ತ 3 ಲಕ್ಷ ರುಪಾಯಿ ಇತ್ತು. ಅದನ್ನು 5 ಲಕ್ಷಕ್ಕೆ ಏರಿಸಲಾಗಿದೆ. ಇನ್ನು ದೇವದಾಸಿಯರ ಹೆಣ್ಣುಮಕ್ಕಳ ಮದುವೆಗೆ 5 ಲಕ್ಷ ರುಪಾಯಿ ದೊರೆಯಲಿದೆ. ದೇವದಾಸಿಯರ ಗಂಡುಮಕ್ಕಳ ಮದುವೆಗೆ 3 ಲಕ್ಷ ರುಪಾಯಿ ನೀಡಲಾಗುತ್ತದೆ ಎಂದು ಸಿದ್ದರಾಮಯ್ಯ ಅವರು ಘೋಷಣೆ ಮಾಡಿದ್ದಾರೆ.

3 lakhs and 5 lakhs incentive to promote SC youths inter caste marriages
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+