KAS Officers Transfer: ಮೂವರು ಕೆಎಎಸ್ ಅಧಿಕಾರಿಗಳ ದಿಢೀರ್ ವರ್ಗಾವಣೆ
KAS Officers Transfer: ರಾಜ್ಯ ಸರ್ಕಾರವು ಆಗಾಗ ಮೇಜರ್ ಸರ್ಜರಿಯನ್ನು ಮಾಡುತ್ತಲಿತ್ತದೆ. ಹಾಗೆಯೇ ಇದೀಗ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಮೂವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು, ಎಲ್ಲಿಗೆ ವರ್ಗಾವಣೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಾಜ್ಯ ಸರ್ಕಾರ ಮೂವರು ಕೆಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕರ್ನಾಟಕ ಆಡಳಿತ ಸೇವೆಗೆ ಸೇರಿದ ಈ ಕೆಳಕಂಡ ಅಧಿಕಾರಿಗಳನ್ನು ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಹುದ್ದೆಗಳಿಗೆ ವರ್ಗಾಯಿಸಿ ಆದೇಶ ಹೊರಡಿಸಿದೆ. ಹಾಗಾದ್ರೆ ಯಾರು ಎಲ್ಲಿಗೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಅಧಿಕಾರಿಗಳ ಹಸರು, ಹುದ್ದೆ ಹಾಗೂ ಸ್ಥಳದ ವಿವರ
* ಡಾ.ಸ್ನೇಹ ಸಿ.ವಿ. ಕೆಎಎಸ್ ಕಾರ್ಯದರ್ಶಿ, ಕರ್ನಾಟಕ ನಗರ ನೀರು ಸರಬರಾಜು ಮಂದಳಿ, ಬೆಂಗಳೂರು: ನಿರ್ದೇಶಕರು, ಸಮಗ್ರ ಮಕ್ಕಳ ರಕ್ಷಣಾ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
* ಕಾವ್ಯಾರಾಣಿ ಕೆ.ವಿ. ಕೆಎಎಸ್ ಉಪವಿಭಾಗಾಧಿಕಾರಿ, ಶಿರಸಿ ಉಪವಿಭಾಗ, ಉತ್ತರ ಕನ್ನಡ ಜಿಲ್ಲೆ: ಉಪವಿಭಾಗಾಧಿಕಾರಿ, ಹುಣಸೂರು ಉಪವಿಭಾಗ, ಮೈಸೂರು ಜಿಲ್ಲೆ
* ಶ್ರೀ ಚಿದಾನಂದ ಗುರುಸ್ವಾಮಿ, ಕೆಎಎಸ್, ಉಪವಿಭಾಗಾಧಿಕಾರಿ, ಹಪಪನಹಳ್ಳಿ, ಉಪವಿಭಾಗ, ವಿಜಯನಗರ ಜಿಲ್ಲೆ: ಉಪ ವಿಭಾಗಾಧಿಕಾರಿ, ಇಂಡಿ ಉಪವಿಭಾಗ, ವಿಜಯನಗರ ಜಿಲ್ಲೆ. ಇವರನ್ನು ಶ್ರೀಮತಿ ಅನುರಾಧ ವಸ್ತ್ರದ ಇವರ ಜಾಗಕ್ಕೆ ವರ್ಗಾಹಿಸಲಾಗಿದೆ.
ಏಳು ಮಂದಿ ವರ್ಗಾವಣೆ: ಕಳೆದ ಕೆಲವು ದಿನಗಳ ಹಿಂದೆಯಷ್ಟೇ7 ಮಂದಿ ಐಎಫ್‌ಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು.ಹುಲಿ ದಾಳಿ ಪ್ರಕರಣಗಳಿಂದ ವಿವಾದಕ್ಕೆ ಸಿಲುಕಿರುವ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಎಸ್.ಪ್ರಭಾಕರನ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಆ ಜಾಗಕ್ಕೆ ಡಾ.ಸಂತೋಷ್‌ಕುಮಾರ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅನಿಲ್ ಕುಮಾರ್ ರತನ್-ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಅರಣ್ಯ ಸಂಪನ್ಮೂಲ ನಿರ್ವಹಣೆ. ಸಾಸ್ವತಿ ಮಿಶ್ರಾ-ಹೆಚ್ಚವರಿ ಮಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಸಿಬ್ಬಂದಿ ನೇಮಕಾತಿ. ಬಿಸ್ವಜಿತ್ ಮಿಶ್ರಾ-ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವನ್ಯಜೀವಿ. ವನಶ್ರೀ ವಿಪಿನ್ ಸಿಂಗ್-ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕಾರ್ಯಯೋಜನೆ.
ಮನೋಜ್ ಕುಮಾರ್ ತ್ರಿಪಾಠಿ-ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ವಿಚಕ್ಷಣೆ. ಎಸ್.ಪ್ರಭಾಕರನ್-ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ ವೃತ್ತ. ಡಾ.ಜಿ.ಸಂತೋಷ್‌ಕುಮಾರ್-ಉಪ ಅರಣ್ಯ ಸಂರಕ್ಷಣಾಧಿಕಾರಿ, ಬಂಡೀಪುರ ಹುಲಿ ಯೋಜನೆ. ಹೀಗೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು ಎಂದು ವರದಿಯಾಗಿತ್ತು.












Click it and Unblock the Notifications