ವಿಜಯಪುರದ ಮುತ್ತಗಿ ಕ್ರಾಸ್‌ ಬಳಿ ಭೀಕರ ರಸ್ತೆ ಅಪಘಾತ, 3 ದುರ್ಮರಣ

Written By: Ramesh
Subscribe to Oneindia Kannada

ವಿಜಯಪುರ, ನವೆಂಬರ್. 11 : ಬಸವನ ಬಾಗೇವಾಡಿ ತಾಲೂಕಿನ ಮುತ್ತಗಿ ಕ್ರಾಸ್‌ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಲಾರಿ ಮತ್ತು ಮಹೀಂದ್ರಾ ಪಿಕಪ್ ನಡುವೆ ಮುಖಾಮುಖಿ ಸಂಭವಿಸಿದ್ದು. ಮಹೀಂದ್ರಾ ಪಿಕಪ್ ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಹಸುನೀಗಿದ್ದಾರೆ.

ಇನ್ನು 3 ಜನರಿಗೆ ಗಂಭಿರ ಗಾಯಗಳಾಗಿದ್ದು, ಅವರನ್ನು ವಿಜಯಪುರ ಜಿಲ್ಲಾ ಆಸ್ಪತ್ರೆ ದಾಖಲಾಗಿಸಲಾಗಿದೆ.ಮುತ್ತಗಿ ಕ್ರಾಸ್‌ ನ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತಪಟ್ಟವರು ಎಲ್ಲರೂ ಮಹಾರಾಷ್ಟ್ರ ಮೂಲದವರು ಎಂದು ತಿಳಿದುಬಂದಿದೆ.

Three Dead injure road accident in Muttagi cross highway Vijayapur

ಮಹೀಂದ್ರಾ ಪಿಕಪ್ ವಾಹನವು ರೇಷ್ಮೆ ತುಂಬಿಕೊಂಡು ಮಹಾರಾಷ್ಟ್ರ ಕಡೆ ಹೋಗುತಿತ್ತು. ಈ ವೇಳೆ ಎದುರಿನಿಂದ ಬಂದ ಲಾರಿ ಮಹೀಂದ್ರಾ ಪಿಕಪ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಘಟನೆ ಕುರಿತು ಬಸವನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A gruesome road accident occurred near Muttagi Cross, Vijayapur district, on November 11 Morning. In a accident killing 3 on the spot and gravely injuring 3.
Please Wait while comments are loading...