Get Updates
Get notified of breaking news, exclusive insights, and must-see stories!

ರವಿ ಚೆನ್ನಣ್ಣನವರ್ ಸಹೋದರನ ವಿರುದ್ಧ ಪತ್ನಿ ದೂರು: ಸಂತ್ರಸ್ತ ಮಹಿಳೆ ನೆರವಿಗೆ ಜಗದೀಶ್ ಎಂಟ್ರಿ!

ಬೆಂಗಳೂರು, ಏ. 27: ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ವಕೀಲ ಕೆ.ಎನ್. ಜಗದೀಶ್ ನಡುವೆ ಎರಡನೇ ಹಂತದ 'ವಾರ್' ಶುರುವಾಗಿದೆ. ರವಿ ಡಿ. ಚನ್ನಣ್ಣನವರ್ ಅವರ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ಅಕ್ರಮ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಸಂಬಂಧ ಆತನ ಪತ್ನಿ ರೋಜಾ ಎಂಬುವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದು, ನೊಂದ ಮಹಿಳೆ ಬೆಂಬಲಕ್ಕೆ ನಿಲ್ಲುವ ಮೂಲಕ ವಕೀಲ ಕೆ.ಎನ್. ಜಗದೀಶ್ ಎರಡನೇ ಹಂತದ ಸಮರ ಆರಂಭಿಸಿದ್ದಾರೆ.

ರವಿ ಡಿ. ಚನ್ನಣ್ಣವರ್ ವಿರುದ್ಧ ದೂರು:

ಐಪಿಎಸ್ ಅಧಿಕಾರಿ ರವಿ. ಡಿ. ಚನ್ನಣ್ಣನವರ್ ಸಹೋದರ ರಾಘವೇಂದ್ರ ಡಿ. ಚನ್ನಣ್ಣನವರ್ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡು ಮೋಸ ಮಾಡಿದ್ದಾರೆ ಎಂದು ಆರೋಪಿಸಿ ಆತನ ಪತ್ನಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ವಿಶೇಷ ಅಂದ್ರೆ ಐಪಿಎಸ್ ಅಧಿಕಾರಿ ರಾಘವೇಂದ್ರ ಡಿ. ಚನ್ನಣ್ಣ ಅವರ ವಿರುದ್ಧ ಸಹ ದೂರು ನೀಡಲಾಗಿದೆ. ಇದರಿಂದ ಐಪಿಎಸ್ ಅಧಿಕಾರಿ ರವಿ ಡಿ. ಚನ್ನಣ್ಣನವರ್ ಹಾಗೂ ಅವರ ಸಹೋದರನಿಗೆ ಸಂಕಷ್ಟ ಎದುರಾಗಿದೆ.

ನನ್ನನ್ನು 2015 ರಲ್ಲಿ ರಾಘವೇಂದ್ರ ಡಿ. ಚನ್ನಣ್ಣನವರ್ ಮದುವೆಯಾಗಿದ್ದರು. ಮದುವೆಯಾದ ಒಂದೇ ವರ್ಷಕ್ಕೆ ರುಕ್ಮಿಣಿ ಎಂಬ ಮಹಿಳೆ ಜತೆ ನನ್ನ ಪತಿ ಅಕ್ರಮ ಸಂಬಂಧ ಹೊಂದಿದ್ದಾರೆ. ಈ ಬಗ್ಗೆ ನಾನು ರವಿ ಡಿ. ಚನ್ನಣ್ಣನವರ್ ಗಮನಕ್ಕೆ ತಂದಿದ್ದೆ. ನೀನು ನಿನ್ನ ಓದಿನ ಕಡೆ ಗಮನ ಹರಿಸಿ. ಪ್ರಾರಂಭದಲ್ಲಿ ಹೀಗೆಲ್ಲ ಆಗುತ್ತದೆ. ಮುಂದೆ ಎಲ್ಲಾ ಸರಿಪಡಿಸೋಣ ಎಂದು ಹೇಳಿದ್ದರು. ಆರು ವರ್ಷದಿಂದ ನಾನು ನರಕ ಅನುಭವಿಸುತ್ತಿದ್ದೇನೆ. ನನ್ನ ಪತಿಯನ್ನು ಕೇಳಿದ್ರೆ, ನಾನು ಬಾಳುವುದಿದ್ದರೆ ರುಕ್ಮಿಣಿಯೊಂದಿಗೆ ಇರುತ್ತೇನೆ ಎಂದು ಹೇಳಿ ನನಗೆ ವಂಚನೆ ಮಾಡಿದ್ದಾನೆ. ರಾಘವೇಂದ್ರ ಅವರ ಅಣ್ಣನ ಹೆಸರು ದುರ್ಬಳಕೆ ಮಾಡಿಕೊಂಡು ಅನೇಕ ಅಪರಾಧ ಕೃತ್ಯಗಳನ್ನು ಎಸಗಿದ್ದಾನೆ. ನನಗೆ ರುಕ್ಮಿಣಿ ಸಹೋದರರ ಕಡೆಯಿಂದ ಜೀವ ಬೆದರಿಕೆ ಹಾಕಿದ್ದಾರೆ. ನನಗೆ ನ್ಯಾಯ ಕೊಡಿ ಎಂದು ಆರೋಪಿಸಿ ರೋಜಾ ಎಂಬ ಮಹಿಳೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.

2nd war start between IPS officer Ravi D Channannavar and Advocate k.N. Jagadish

ನನ್ನ ತಂದೆ ಲಕ್ಷಾಂತರ ರೂಪಾಯಿ ಸಾಲ ಮಾಡಿ ಮದುವೆ ಮಾಡಿಕೊಟ್ಟಿದ್ದರು. ನನ್ನ ತಂದೆ ಬಳಿ ಅನೇಕ ಸಲ ಹಣ ಪಡೆದು ಕೊಲೆ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ರವಿ ಚೆನ್ನಣ್ಣನವರ ಗಮನಕ್ಕೆ ತಂದ್ರೆ ಕೋರ್ಟ್ ಗೆ ಹೋಗು ಎಂದು ಹೇಳುತ್ತಿದ್ದಾರೆ. ಅವರೇ ನನ್ನನ್ನು ಅವರ ಸಹೋದರಿಗೆ ಮದುವೆ ಮಾಡಿಸಿದ್ದು. ನನಗೆ ರಾಘವೇಂದ್ರ ಡಿ. ಚನ್ನಣ್ಣನವರ್ ಮೋಸ ಮಾಡಿದ್ದಾರೆ. ನನಗೆ ನ್ಯಾಯ ಒದಗಿಸಿಕೊಡಿ ಎಂದು ರೋಜಾ ಎಂಬ ಮಹಿಳೆ ಚಂದ್ರಾ ಲೇಔಟ್ ಪೊಲೀಸ್ ಠಾಣೆ ಹಾಗೂ ನಗರ ಪೊಲೀಸ್ ಆಯುಕ್ತರಿಗೆ ಕೊಟ್ಟಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.

ವಕೀಲ ಜಗದೀಶ್ ಎಂಟ್ರಿ:

ರವಿ ಡಿ. ಚೆನ್ನಣ್ಣವರ್ ಅವರ ಭ್ರಷ್ಟಾಚಾರ ಪ್ರಕರಣ ಸಂಬಂಧ ಈ ಹಿಂದೆ ಸಾಮಾಜಿಕ ಜಾಲ ತಾಣದಲ್ಲಿ ಲೈವ್ ಮಾಡುವ ಮೂಲಕ ಸಮರ ಸಾರಿದ್ದ ಜಗದೀಶ್ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ ನಡೆದಿತ್ತು. ಜಗದೀಶ್ ಅವರು ಸಹ ವಕೀಲರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಬಂಧನಕ್ಕೆ ಒಳಗಾಗಿದ್ದರು. ಇದಕ್ಕೂ ಮೊದಲು ರವಿ ಡಿ. ಚೆನ್ನಣ್ಣನವರ್ ಅಕ್ರಮ ಆಸ್ತಿ ಕುರಿತ ಹಲವು ದಾಖಲೆಗಳನ್ನು ತೋರಿಸಿ ಸಾಮಾಜಿಕ ಜಾಲ ತಾಣದಲ್ಲಿ ಲೈವ್ ಮಾಡಿ ಜಗದೀಶ್ ವೈರಲ್ ಮಾಡಿದ್ದರು. ಈ ಪ್ರಕರಣದಲ್ಲಿ ಇಂಜೆಕ್ಷನ್ ಪಡೆದಿದ್ದ ರವಿ ಡಿ. ಚೆನ್ನಣ್ಣನವರ್ ಅವರು ಪಡೆದಿದ್ದ ಆದೇಶ ತೆರವು ಸಂಬಂಧ ಅರ್ಜಿ ಸಲ್ಲಿಸಲು ಹೋಗಿದ್ದ ಜಗದೀಶ್ ಗಲಾಟೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಎಲ್ಲೂ ಸುದ್ದಿಯಾಗದೇ ಜಗದೀಶ್ ಮೌನಕ್ಕೆ ಶರಣಾಗಿದ್ದರು.

2nd war start between IPS officer Ravi D Channannavar and Advocate k.N. Jagadish

ರೋಜಾಗೆ ಬೆಂಬಲ ಕೊಟ್ಟ ಜಗದೀಶ್:

ರಾಘವೇಂದ್ರ ಡಿ. ಚನ್ನಣ್ಣನವರ್ ಹಾಗೂ ರವಿ ಡಿ. ಚೆನ್ನಣ್ಣನವರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿರುವ ರೋಜಾ ಪರ ವಕೀಲ ಜಗದೀಶ್ ನಿಂತಿದ್ದಾರೆ. ಆಕೆ ಪೊಲೀಸ್ ಆಯುಕ್ತರಿಗೆ ದೂರು ಕೊಡಲು ಹೋದಾಗ ಜಗದೀಶ್ ಕೂಡ ತೆರಳಿದ್ದಾರೆ. ಆಕೆಗೆ ಆಗಿರುವ ಅನ್ಯಾಯದ ಬಗ್ಗೆ ಪೀಠಿಕೆ ಹಾಕಿದ ಜಗದೀಶ್ ಸಂತ್ರಸ್ತ ಮಹಿಳೆ ಬಾಯಿಂದಲೇ ಅಕೆಗೆ ಆಗಿರುವ ಅನ್ಯಾಯದ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಕೊಡಿಸಿದ್ದಾರೆ. ಈ ಮೂಲಕ ರವಿ ಡಿ.ಚೆನ್ನಣ್ಣನವರ್ ಕುಟುಂಬದ ವಿರುದ್ಧ ದೂರು ದಾಖಲಿಸಿದ ಸಂತ್ರಸ್ತ ಮಹಿಳೆ ಬೆನ್ನಿಗೆ ನಿಲ್ಲುವ ಮೂಲಕ ಎರಡನೇ ಹಂತದ ವಾರ್ ಘೋಷಣೆ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+