ರಾಜ್ಯದಲ್ಲಿ 249 ಕೊರೊನಾ ಕೇಸ್, ಬೆಂಗಳೂರಿನಲ್ಲಿ ಶತಕ
ಬೆಂಗಳೂರು, ಜೂನ್ 22: ಕರ್ನಾಟಕದಲ್ಲಿ ಇಂದು 249 ಜನರಿಗೆ ಕೊರೊನಾ ವೈರಸ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದೆ.
ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9399ಕ್ಕೆ ಏರಿಕೆಯಾಗಿದೆ. ಇಂದು ವರದಿಯಾದ ಸೋಂಕಿನ ಪೈಕಿ ಬೆಂಗಳೂರಿನಲ್ಲಿ 126 ಜನರಿಗೆ ಮಹಾಮಾರಿ ವಕ್ಕರಿಸಿದೆ.
ಕರ್ನಾಟಕದಲ್ಲಿ 'ಡೇಂಜರ್ ಜೋನ್'ನಲ್ಲಿರುವ 5 ಜಿಲ್ಲೆಗಳ ಕೊವಿಡ್ ಅಂಕಿ ಅಂಶ
ಬೆಂಗಳೂರಿನಲ್ಲಿ 126, ಕಲಬುರಗಿಯಲ್ಲಿ 27 ಪ್ರಕರಣ, ವಿಜಯಪುರ 15 ಕೇಸ್, ಉಡುಪಿಯಲ್ಲಿ 14 ಕೇಸ್, ದಕ್ಷಿಣ ಕನ್ನಡದಲ್ಲಿ 12 ಕೇಸ್, ದಾವಣಗೆರೆಯಲ್ಲಿ 9 ಕೇಸ್ ದಾಖಲಾಗಿದೆ. ಉತ್ತರ ಕನ್ನಡ ಹಾಗೂ ಬಾಗಲಕೋಟೆ ತಲಾ 6 ಕೇಸ್, ಬೀದರ್ ಮತ್ತು ಚಿಕ್ಕಮಗಳೂರು ತಲಾ 5 ಪ್ರಕರಣ, ಧಾರವಾಡ ಮತ್ತು ಬೆಂಗಳೂರು ಗ್ರಾಮಾಂತರ ತಲಾ 4 ಕೇಸ್ ವರದಿಯಾಗಿದೆ.
ಇಂದು ಒಟ್ಟು 5 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಈವರೆಗೂ ರಾಜ್ಯದಲ್ಲಿ ಒಟ್ಟು ಕೊರೊನಾ ಸಾವಿನ ಸಂಖ್ಯೆ 142ಕ್ಕೆ ಏರಿಕೆಯಾಗಿದೆ.
ಇಂದು 111 ಸೋಂಕಿತರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಒಟ್ಟು ಈವರೆಗೆ 5,730 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಪ್ರಸ್ತುತ 3523 ಸಕ್ರಿಯ ಸೋಂಕಿತ ಪ್ರಕರಣಗಳು ರಾಜ್ಯದಲ್ಲಿದೆ.