ಬ್ರೇಕಿಂಗ್: ಕರ್ನಾಟಕದಲ್ಲಿ ಒಂದೇ ದಿನ 248 ಮಂದಿಗೆ ಕೊರೊನಾ ವೈರಸ್!

ಬೆಂಗಳೂರು, ಮೇ.29: ಕರ್ನಾಟಕದಲ್ಲಿ ನೊವೆಲ್ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದ್ದು, ಒಂದೇ ದಿನ ಬರೋಬ್ಬರಿ 248 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆಯು 2,781ಕ್ಕೆ ಏರಿಕೆಯಾಗಿದೆ.

Recommended Video

      ನೀವು ಸೈಲೆಂಟ್ ಆಗಿಲ್ಲ ಅಂದ್ರೆ, ನಾನು ವೈಲೆಂಟ್ ಆಗಬೇಕಾಗುತ್ತದೆ | Ravi d channannavar | Oneindia Kannada

      ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದ ಬೆಳಗ್ಗಿನ ಬುಲೆಟಿನ್ ನಲ್ಲಿ 178 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಖಾತ್ರಿಯಾಗಿತ್ತು. ಸಂಜೆ ಬಿಡುಗಡೆ ಮಾಡಿರುವ ಬುಲೆಟಿನ್ ನಲ್ಲಿ ಮತ್ತೆ 70 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಮೂರೂ ಜಿಲ್ಲೆಗಳಲ್ಲೂ 60ಕ್ಕಿಂತ ಹೆಚ್ಚು ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಶುಕ್ರವಾರ ಒಂದೇ ದಿನ ಪತ್ತೆಯಾಗಿದ್ದು, ಮೂರು ಜಿಲ್ಲೆಗಳಲ್ಲೂ ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

      248 New Coronavirus Cases Reported in Karnataka Today, State Tally Rise to 2,781

      ಮಹಾರಾಷ್ಟ್ರದಿಂದ ವಾಪಸ್ಸಾದ 206 ಮಂದಿಗೆ ಸೋಂಕು

      ಕರ್ನಾಟಕದ ಪಾಲಿಗೆ ಮಹಾರಾಷ್ಟ್ರದ ನಂಟು ಬೆನ್ನು ಬಿಡದ ಭೂತದಂತೆ ಕಾಡುತ್ತಿದೆ. ಶುಕ್ರವಾರ ಪತ್ತೆಯಾಗಿರುವ ಒಟ್ಟು 248 ಕೊರೊನಾ ವೈರಸ್ ಸೋಂಕಿತರ ಪೈಕಿ 206 ಸೋಂಕಿತರಿಗೆ ಮಹಾರಾಷ್ಟ್ರದ ನಂಟು ಇರುವುದು ದೃಢಪಟ್ಟಿದೆ. ಬೆಳಗ್ಗೆ ಪತ್ತೆಯಾದ 178 ಸೋಂಕಿತರ ಪೈಕಿ 156 ಜನರು ಮಹಾರಾಷ್ಟ್ರದಿಂದಲೇ ಬಂದವರಾಗಿದ್ದರು. ಸಂಜೆ ಬುಲೆಟಿನ್ ನಲ್ಲಿ ಮಹಾರಾಷ್ಟ್ರದಿಂದಲೇ ಆಗಮಿಸಿದ 50 ಜನರಿಗೆ ಸೋಂಕು ತಗಲಿರುವುದು ಖಾತ್ರಿಯಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+