ಉಜಿರೆ: ಮದುವೆಗೆ ಅಣಿಯಾಗಬೇಕಾದವಳು, ಸ್ಮಶಾನ ಸೇರಿದಳು!

Posted By:
Subscribe to Oneindia Kannada

ಉಜಿರೆ,ಮಾರ್ಚ್,30: ಕೇವಲ ಒಂದೇ ದಿನದಲ್ಲಿ ಹಸೆಮಣೆ ಏರಬೇಕಾಗಿದ್ದ ಯುವತಿಯೊಬ್ಬಳು ಸ್ಮಶಾನ ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಪಟ್ಟಣದಲ್ಲಿ ಇಂದು ನಡೆದಿದೆ. ಈಕೆಯ ಸಾವಿನ ಬಗ್ಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಅಪರಿಚಿತ ಮಹಿಳೆ ನೀಡಿದ ಮಾತ್ರೆ ನುಂಗಿದ ವಿನಾಯಕ ನಗರದ ಯುವತಿ ವಿನುತಾ ಬುಧವಾರ ಬೆಳಿಗ್ಗೆ ಮನೆಯಲ್ಲಿ ಸಾವನ್ನಪ್ಪಿದ್ದಾಳೆ. ಮದುವೆಯ ಸಂಭ್ರಮದಲ್ಲಿರಬೇಕಾದ ಮನೆಯಲ್ಲಿ ಶೋಕ ಮಡುಗಟ್ಟಿದೆ. ಪೋಷಕರ ಆಕ್ರಂದನ ಹೇಳತೀರದಾಗಿದೆ.[ವರದಕ್ಷಿಣೆ ಹಿಂಸೆ, ಹಸೆಮಣೆ ಏರುವ ಮೊದಲೇ ಆತ್ಮಹತ್ಯೆ]

21 year old girl died suspectedly in ujire, Dakshina Kannada

ಮೃತ ಯುವತಿ ವಿನುತಾ ಅಪರಿಚಿತ ಮಹಿಳೆ ನೀಡಿದ ಮಾತ್ರೆ ನುಂಗಿದ್ದಾಳೆ. ಇದರಿಂದ ಆಕೆಗೆ ತಕ್ಷಣವೇ ವಾಂತಿ ಆರಂಭವಾಗಿದ್ದು, ಮೂರು ದಿನಗಳಿಂದ ನಿರಂತರವಾಗಿ ವಾಂತಿ ಮಾಡಿಕೊಂಡು ತೀವ್ರ ಅಸ್ವಸ್ಥಳಾದ ವಿನುತಾಳನ್ನು ಪೋಷಕರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಸ್ವಲ್ಪ ಚೇತರಿಸಿಕೊಂಡಂತೆ ಕಂಡ ಹಾಗೂ ಮಾರ್ಚ್ 31ರ ಗುರುವಾರ ಮದುವೆ ಇದ್ದ ಕಾರಣ ವಿನುತಾಳನ್ನು ಮನೆಗೆ ವಾಪಾಸ್ ಕರೆದುಕೊಂಡು ಬಂದಿದ್ದಾರೆ. ಆದರೆ ಮದುವೆ ಶಾಸ್ತ್ರಗಳಿಗೆ ತಯಾರಾಗಬೇಕಾಗಿದ್ದ ಈಕೆ ಮನೆಯಲ್ಲಿಯೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.[ರಿಕ್ಷಾ ಖರೀದಿಸಲು ಮಗಳನ್ನೇ ಮಾರಿದ ಇವನೆಂಥ ಅಪ್ಪ!]

ವಿನುತಾಳ ಸಾವಿನ ಬಗ್ಗೆ ನಿಖರವಾದ ಮಾಹಿತಿ ದೊರೆತಿಲ್ಲ. ಒಟ್ಟಿನಲ್ಲಿ ಮದುವೆ ಸಂಭ್ರಮ, ಸಡಗರದಲ್ಲಿ ಇರಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಪೋಷಕರ, ಸಂಬಂಧಿಕರ ದುಃಖತಪ್ತ ಅಳು ಮುಗಿಲು ಮುಟ್ಟಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
21 year old girl Vinutha died suspectedly in ujire, Beltangady taluk, Dakshina kannada, on Wednesday, March 30th. Vinutha's parents arranged her marriage on March 31st.
Please Wait while comments are loading...