SSLC Results Announced: ಎಸ್‌ಎಸ್‌ಎಲ್‌ಸಿಯಲ್ಲಿ ಹೆಣ್ಣು ಮಕ್ಕಳದ್ದೇ ಮೇಲುಗೈ
ಬೆಂಗಳೂರು ಮೇ 2: ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು 2024-2025ರ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಿಸಿದರು. ಮಧ್ಯಾಹ್ನ 12:30ರ ನಂತರ ವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟ ಆಗಲಿದೆ. 8. ಈ ಬಾರಿಯೂ ಎಸ್‌ಎಸ್‌ಎಲ್‌ಸಿಯಲ್ಲಿ ಹೆಣ್ಣು ಮಕ್ಕಳೇ ಮೇಲುಗೈ ಸಾಧಿಸಿದ್ದಾರೆ.
ರಾಜ್ಯಕ್ಕೆ ಒಬ್ಬರು ಟಾಪರ್ ಬಂದರೆ ಸಾಕು ಎನ್ನುವ ಕಾಲ ಇತ್ತು. ಆದರೀಗ 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿದ್ದಾರೆ. ರಾಜ್ಯಾದ್ಯಂತ ಹಲವು ಜಿಲ್ಲೆಗಳ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದು ಪೋಷಕರು ಹಾಗೂ ಶಿಕ್ಷಕರು ಮಾತ್ರವಲ್ಲದೆ ಆಯಾ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಗೆ (91.12%) ಪ್ರಥಮ ಸ್ಥಾನ, ಉಡುಪಿ ಜಿಲ್ಲೆಗೆ (89.96%) ದ್ವಿತೀಯ ಸ್ಥಾನ, ಉತ್ತರ ಕನ್ನಡ (83.19%) ಜಿಲ್ಲೆಗೆ ಮೂರನೇ ಸ್ಥಾನ, ಶಿವಮೊಗ್ಗ ನಾಲ್ಕನೇ ಸ್ಥಾನ, ಕೊಡಗು ಐದನೇ ಸ್ಥಾನ ಹಾಗೂ ಕಲಬುರಗಿ ಕೊನೆಯ ಸ್ಥಾನದಲ್ಲಿ ಇದೆ. ಜೊತೆಗೆ ಸಿರಸಿ 7, ಚಿಕ್ಕಮಗಳೂರು 8, ಬೆಂಗಳೂರು ದಕ್ಷಿಣ 10, ಹಾವೇರಿ 13, ಕೋಲಾರ 14, ಮೈಸೂರು 15, ಗದಗ 17, ಚಿತ್ರದುರ್ಗ 23, ಬಳ್ಳಾರಿ 29ನೇ ಸ್ಥಾನ ಪಡೆದುಕೊಂಡಿದೆ.
ಬೆಂಗಳೂರು ಗ್ರಾಮೀಣ ಜಿಲ್ಲೆಯ ಭಾವನಾ, ಮೈಸೂರಿನ ಧನುಷ್, ಶಿವಮೊಗ್ಗದಲ್ಲಿ ನಮನ, ಮಂಡ್ಯದ ಧೃತಿ, ಬೆಂಗಳೂರು ದಕ್ಷಿಣದ ನಮಿತ, ಚಿತ್ರದುರ್ಗ ಜಿಲ್ಲೆ ನಂದನ್, ಬೆಂಗಳೂರು ದಕ್ಷಿಣದ ಧನಲಕ್ಷ್ಮೀ, ಬೆಂಗಳೂರು ದಕ್ಷಿಣ ಮಧೂಸೂದನ್, ಬೆಂಗಳೂರು ದಕ್ಷಿಣ ಜಾಹ್ನವಿ ಸೇರಿದಂತೆ ಒಟ್ಟು 22 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಪಡೆದಿದ್ದಾರೆ. ಅಲ್ಲದೆ ನಿತ್ಯಾ ಕುಲಕರಣಿ ಶಿವಮೊಗ್ಗ, ಬೆಳಗಾವಿ ರೂಪಾ ಪಾಟೀಲ್ ಔಟ್ ಆಫ್ ಔಟ್ ತೆಗೆದುಕೊಂಡಿದ್ದಾರೆ.

ಅಲ್ಲದೆ ರಾಜ್ಯದಲ್ಲಿ ಈ ಬಾರಿಯೂ ಕೂಡ ಹೆಣ್ಣುಮಕ್ಕಳೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಣ್ಣು ಮಕ್ಕಳು ಶೇ.74ರಷ್ಟು ಪಾಸಾಗಿದ್ದರೆ, ಶೇ. 58.07ರಷ್ಟು ಗಂಡು ಮಕ್ಕಳು ಪಾಸಾಗಿದ್ದಾರೆ. ಬೆಂಗಳೂರಿನ ವಿದ್ಯಾರ್ಥಿನಿ ಜಾಹ್ನವಿ ಮತ್ತು ಧನಲಕ್ಷ್ಮಿ ಎಸ್‌ಎಸ್‌ಎಲ್‌ಸಿ ಟಾಪರ್ ಆಗಿದ್ದಾರೆ.
ಈ ವಿದ್ಯಾರ್ಥಿಗಳ ಸಾಧನೆಗೆ ಪೋಷಕರು ಹಾಗೂ ಶಿಕ್ಷಕರು ಸಂಭ್ರಮಾಚರಣೆ ಮಾಡುತ್ತಿದ್ದು ವಿದ್ಯಾರ್ಥಿಗಳ ಸಾಧನೆಗೆ ಶಿಕ್ಷಕರು ಹಾಗೂ ಪೋಷಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟಾಪರ್ಸ್ ಮನೆಯಲ್ಲಿ ಸಂತಸ ಮನೆ ಮಾಡಿದೆ.
ಈ ಬಗ್ಗೆ ಮಾತನಾಡಿದ ಟಾಪರ್ ಉತ್ಸವ್, 'ಪೋಷಕರು ಸಪೋರ್ಟ್ ಮಾಡಿದ್ದಾರೆ. ಶಿಕ್ಷಕರೂ ಸಹಕಾರ ಮಾಡಿದರೂ. ಸಿವಿಲ್ ಸರ್ವಿಸ್ ಮಾಡಬೇಕು ಅನ್ಕೊಂಡಿದ್ದೇನೆ. ಜನವರಿಯಿಂದ ಓದುತ್ತಿದ್ದೆ. ಅನುಮಾನ ಕ್ಲಿಯರ್ ಮಾಡುತ್ತಿದ್ದರು.'
ನಂದನ್ ಮಾತನಾಡಿ, 'ಟಾಪ್ ಅಲ್ಲಿ ಬರಬೇಕು ಅಂತ ನಾನು ಓದಿದ್ದೆ. ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾನು ಪರೀಕ್ಷೆಗಾಗಿ ಓದಲಿಲ್ಲ. ನಿತ್ಯ ಓದುತ್ತಿದ್ದೆ. ಗುರು ಪೋಷಕರ ನೆರವಿನಿಂದ ನಾನು ಟಾಪರ್ ಆದೆ. ನಾನು ಮುಂದೆ ಇಂಜಿನೀಯರ್ ಆಗಬೇಕು' ಎಂದು ಹೇಳಿದ್ದಾರೆ.












Click it and Unblock the Notifications