ಬೆಂಗಳೂರು, ಅಕ್ಟೋಬರ್ 26 : 2017-18 ಸಾಲಿನ ಎಸ್‌ಎಸ್‌ಎಲ್ಸಿ (10 ನೇ ತರಗತಿ) ಹಾಗೂ ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾ ಪಟ್ಟಿ ಪ್ರಕಟವಾಗಿದೆ.
2018ರ ಮಾರ್ಚ್ 1 ರಿಂದ 16 ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದ್ದು, ಮಾರ್ಚ್ 23ರಿಂದ ಏಪ್ರಿಲ್ 4ರ ವರೆಗೆ ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ತನ್ವೀರ್ ಸೇಠ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಸುಮಾರು 9.60 ಲಕ್ಷ ವಿದ್ಯಾರ್ಥಿಗಳು ಎಸ್‌ಎಸ್‌ಎಲ್ಸಿ ಪರೀಕ್ಷೆ ಬರೆಯಲಿದ್ದು, ಪ್ರಶ್ನೆ ಪತ್ರಿಕೆ ಮೌಲ್ಯ ಮಾಪನಕ್ಕೆ 60 ಸಾವಿರ ಶಿಕ್ಷಕರ ಅಗತ್ಯವಿದೆ. ಇನ್ನು 7 ಲಕ್ಷ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲಿದ್ದಾರೆ. ಏಪ್ರಿಲ್ 30ರೊಳಗೆ ಪಿಯುಸಿ ಮತ್ತು ಎಸ್‌ಎಸ್‌ಎಲ್ಸಿ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಸೇಠ್ ಹೇಳಿದರು.
ದಿನಾಂಕ | ವಿಷಯ | ಕೋಡ್ |
ಮಾರ್ಚ್ 23 | ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಸಂಸ್ಕೃತ | 1, 4, 6, 8, 10, 12, 14, 16 |
ಮಾರ್ಚ್ 24 | ಅರ್ಥಶಾಸ್ತ್ರ, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಎಲಿಮೆಂಟ್ಸ್ ಆಫ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಒಂಜಿನಿಯರಿಂಗ್ ಡ್ರಾಯಿಂಗ್ | 96, 74, 71, 73, 72 |
ಮಾರ್ಚ್ 26 | ಗಣಿತ, ಸಮಾಜ | 95, 81 |
ಮಾರ್ಚ್ 28 | ಇಂಗ್ಲೀಷ್, ಕನ್ನಡ | 31, 33 |
ಏಪ್ರಿಲ್ 2 | ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ | 83, 97, 98 |
ಏಪ್ರಿಲ್ 4 | ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಕೊಂಕಣಿ, ಸಂಸ್ಕೃತ.ತುಳು, ಉರ್ದು, ಪರ್ಷಿಯನ್ | 61, 62, 63, 64, 68, 67, 69, 66, 65 |
ಏಪ್ರಿಲ್ 6 | ಸಮಾಜ ವಿಜ್ಞಾನ | 85 |
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!