ಸಂಜೆ ವಿಶ್ವಾಸಮತಯಾಚನೆ? : 19 ಶಾಸಕರು ಅಧಿವೇಶನಕ್ಕೆ ಗೈರು
ಬೆಂಗಳೂರು, ಜುಲೈ 22 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲಿನ ಚರ್ಚೆ ಸೋಮವಾರವೂ ಮುಂದುವರೆದಿದೆ. ಸಂಜೆ ವಿಶ್ವಾಸಮತಕ್ಕೆ ಹಾಕುವ ಸಾಧ್ಯತೆ ಇದೆ. 19 ಶಾಸಕರು ಇಂದು ಸದನಕ್ಕೆ ಗೈರಾಗಿದ್ದಾರೆ.
ಸೋಮವಾರ ಸಂಜೆ ವಿಶ್ವಾಸಮತದ ನಿರ್ಣಯದ ಪರ-ವಿರೋಧ ಮತದಾನ ನಡೆಸಲು ಸ್ಪೀಕರ್ ರಮೇಶ್ ಕುಮಾರ್ ತೀರ್ಮಾನಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಎಲ್ಲಾ ಶಾಸಕರಿಗೂ 5 ಗಂಟೆ ಬಳಿಕ ಕಡ್ಡಾಯವಾಗಿ ಸದನದಲ್ಲಿ ಹಾಜರಿರಬೇಕು ಎಂದು ಸೂಚಿಸಿದೆ.
ಒಂದು ವೇಳೆ ಇಂದೇ ಮತಯಾಚನೆ ಮಾಡಬೇಕು ಎಂದು ಸ್ಪೀಕರ್ ರೂಲಿಂಗ್ ನೀಡಿದರೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ವಿದಾಯ ಭಾಷಣ ಮಾಡಿ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುವ ಸಾಧ್ಯತೆ ಇದೆ.

ವಿಶ್ವಾಸಮತದ ಮೇಲಿನ ಚರ್ಚೆಯನ್ನು ಮಂಗಳವಾರಕ್ಕೆ ಮುಂದೂಡಲಾಗುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸೋಮವಾರ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಗೆ ಆಯ್ಕೆಯಾದ ಹೊಸ ಸದಸ್ಯರಿಗೆ 10 ನಿಮಿಷ ಮಾತನಾಡಲು ಕಾಲಾವಕಾಶ ನೀಡಲಾಗುತ್ತಿದೆ.
ವಿಶ್ವಾಸಮತದ ಮೇಲಿನ ಚರ್ಚೆಯನ್ನು ಮಂಗಳವಾರಕ್ಕೆ ಮುಂದೂಡಲಾಗುವುದಿಲ್ಲ ಎಂದು ಸ್ಪೀಕರ್ ರಮೇಶ್ ಕುಮಾರ್ ಸೋಮವಾರ ಹಲವು ಬಾರಿ ಸ್ಪಷ್ಟಪಡಿಸಿದ್ದಾರೆ. ವಿಧಾನಸಭೆಗೆ ಆಯ್ಕೆಯಾದ ಹೊಸ ಸದಸ್ಯರಿಗೆ 10 ನಿಮಿಷ ಮಾತನಾಡಲು ಕಾಲಾವಕಾಶ ನೀಡಲಾಗುತ್ತಿದೆ.
ಸೋಮವಾರದ ಕಲಾಪಕ್ಕೆ ರಾಜೀನಾಮೆ ನೀಡಿರುವ 15 ಶಾಸಕರು ಸೇರಿ 19 ಸದಸ್ಯರು ಗೈರಾಗಿದ್ದಾರೆ. ಕಾಂಗ್ರೆಸ್ ಶಾಸಕರಾದ ಶ್ರೀಮಂತ ಪಾಟೀಲ್ (ಕಾಗವಾಡ), ಬಿ. ನಾಗೇಂದ್ರ (ಬಳ್ಳಾರಿ ಗ್ರಾಮಾಂತರ), ಎನ್. ಮಹೇಶ್ (ಕೊಳ್ಳೇಗಾಲ) ಗೈರಾಗಿದ್ದಾರೆ.
ಈಗ ವಿಧಾನಸಭೆಯ ಮ್ಯಾಜಿಕ್ ನಂಬರ್ 103, ಬಿಜೆಪಿ + : 105, ಕಾಂಗ್ರೆಸ್ + ಜೆಡಿಎಸ್ : 100

Click it and Unblock the Notifications