ಕೊರೊನಾ ಸೋಂಕಿತರಿಲ್ಲದ ರಾಜ್ಯದ ಪುಣ್ಯ ಮಾಡಿದ 16 ಜಿಲ್ಲೆಗಳು: ಟಚ್ ವುಡ್ ಹಾಗೇ ಇರಲಿ
ಬೆಂಗಳೂರು ದಕ್ಷಿಣ ಮತ್ತು ಹೃದಯ ಭಾಗದಲ್ಲಿ ಜನಸಂಚಾರ ಹೇಗಿದೆ ಎಂದು ಅವಲೋಕಿಸಿದಾಗ, ಸರಕಾರ ಮತ್ತು ಪೊಲೀಸ್ ಇಲಾಖೆಯ ಸತತ ಮನವಿ/ಎಚ್ಚರಿಕೆಯ ನಂತರ ಒಂದು ಹಂತಕ್ಕೆ ಕಮ್ಮಿಯಾಗಿದೆ ಎಂದು ಹೇಳಬಹುದು.
ಸಾರ್ವಜನಿಕರು ಇದೇ ರೀತಿ ಆಡಳಿತ ವ್ಯವಸ್ಥೆಗೆ ಸಹಕರಿಸುತ್ತಾ ಬಂದರೆ, ಕೊರೊನಾ ಓಡಿಸಿ, ಏಪ್ರಿಲ್ ಹದಿನೈದರ ನಂತರ ಲಾಕ್ ಔಟ್ ತೆರವುಗೊಳ್ಳಬಹುದು. ಇಲ್ಲದಿದ್ದರೆ, ಮುಖ್ಯಮಂತ್ರಿಗಳು ಈಗಾಗಲೇ ಹೇಳಿದಂತೆ, ಮತ್ತೆ ಮುಂದುವರಿಯಬಹುದು.
ಎಷ್ಟು ದಿನಾಂತಾ ಗೃಹ ಬಂಧನದಲ್ಲಿ ಇರುವುದಕ್ಕೆ ಸಾಧ್ಯ ಎಂದು ಸಾರ್ವಜನಿಕರು ಇನ್ನೊಂದೆರಡು ವಾರ ತಾಳ್ಮೆ ಕಳೆದುಕೊಳ್ಳದೇ ಇದ್ದರೆ, ಎಲ್ಲವೂ ಸಸೂತ್ರವಾಗಿ ಹಂತ ಹಂತವಾಗಿ ಸರಿದಾರಿಗೆ ಬರಲಿದೆ.
ರಾಜ್ಯದಲ್ಲಿ ಇದುವರೆಗೆ ಮೂವರನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಒಟ್ಟಿಗೆ ಹನ್ನೆರಡು ಜಿಲ್ಲೆಗಳಲ್ಲಿ ಸೋಂಕಿತರು ಇದ್ದಾರೆ. ಉಳಿದ ಜಿಲ್ಲೆಗಳಲ್ಲಿ ಇದುವರೆಗೆ ಯಾವುದೇ ಸೋಂಕಿತರು (ಕ್ವಾರಂಟೈನ್ ಅಲ್ಲ) ಇಲ್ಲ ಎನ್ನುವುದು ಸಮಾಧಾನದ ವಿಷಯ, ಟಚ್ ವುಡ್ ಹಾಗೇ ಇರಲಿ. ಆ ಜಿಲ್ಲೆಗಳಾವುವು?

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಪುಣ್ಯ ಮಾಡಿದ ಜಿಲ್ಲೆಗಳು - 1
1. ಬಾಗಲಕೋಟೆ
2. ಬೆಳಗಾವಿ
3. ವಿಜಯಪುರ
4. ಗದಗ

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಪುಣ್ಯ ಮಾಡಿದ ಜಿಲ್ಲೆಗಳು - 2
5. ಹಾವೇರಿ
6. ಮಂಡ್ಯ
7. ಕೋಲಾರ
8. ರಾಮನಗರ

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಪುಣ್ಯ ಮಾಡಿದ ಜಿಲ್ಲೆಗಳು - 3
9. ಶಿವಮೊಗ್ಗ
10. ಬೀದರ್
11. ಕೊಪ್ಪಳ
12. ರಾಯಚೂರು

ಕೊರೊನಾ ಸೋಂಕಿತರಿಲ್ಲದ ರಾಜ್ಯದ ಪುಣ್ಯ ಮಾಡಿದ ಜಿಲ್ಲೆಗಳು - 4
13. ಯಾದಗಿರಿ
14. ಚಾಮರಾಜನಗರ
15. ಚಿಕ್ಕಮಗಳೂರು
16. ಹಾಸನ












Click it and Unblock the Notifications