ಕರುನಾಡಲ್ಲಿ ಕೊರೊನಾವೈರಸ್ ಸ್ಫೋಟ: 24 ಗಂಟೆಯಲ್ಲೇ 1502 ಮಂದಿಗೆ ಸೋಂಕು

ಬೆಂಗಳೂರು, ಜುಲೈ.02: ಕೊರೊನಾವೈರಸ್ ಎಂಬ ಹೆಸರು ಕೇಳಿದರೆ ಸಾಕು ಕನ್ನಡಿಗರು ನಿದ್ದೆಯಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ಸೃಷ್ಟಿಯಾಗುತ್ತಿದೆ. ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ.

Recommended Video

      Nikhil Kumaraswamy to start agriculture ತಾತನಂತೆ ಮಣ್ಣಿನ ಮಗನಾಗಲು ಹೊರಟ ನಿಖಿಲ್ ಕುಮಾರಸ್ವಾಮಿ

      ಕರ್ನಾಟಕದಲ್ಲಿ ಗುರುವಾರವೂ ಕೂಡಾಕೊರೊನಾವೈರಸ್ ಮಹಾಸ್ಫೋಟವೇ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ 1502 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆಯು ಬರೋಬ್ಬರಿ 18016ಕ್ಕೆ ಏರಿಕೆಯಾಗಿದೆ.

      ಕೊರೊನಾವೈರಸ್ ಮಹಾಮಾರಿಗೆ ಒಂದಿ ದಿನ 19 ಮಂದಿ ಪ್ರಾಣ ಬಿಟ್ಟಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ 272 ಜನರು ಕೊವಿಡ್-19 ಸೋಂಕಿನಿಂದ ಉಸಿರು ಚೆಲ್ಲಿದ್ದಾರೆ. 271 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

      ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ

      ಸಿಲಿಕಾನ್ ಸಿಟಿಯಲ್ಲಿ ಕೊರೊನಾವೈರಸ್ ಸೋಂಕಿನ ಅಟ್ಟಹಾಸ

      ಬೆಂಗಳೂರಿನಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಕಳೆದ 24 ಗಂಟೆಗಳಲ್ಲೇ ಬರೋಬ್ಬರಿ 889 ಮಂದಿಗೆ ಮಹಾಮಾರಿ ಅಂಟಿಕೊಂಡಿರುವುದು ದೃಢಪಟ್ಟಿದೆ. ರಾಜ್ಯ ರಾಜಧಾನಿವೊಂದರಲ್ಲೇ ಬರೋಬ್ಬರಿ 6179 ಮಂದಿಗೆ ಸೋಂಕು ಅಂಟಿಕೊಂಡಿದೆ. ಇಂದು ನಗರದಲ್ಲಿ ಮಹಾಮಾರಿಗೆ ಮೂವರು ಬಲಿಯಾಗಿದ್ದು, ಒಟ್ಟಾರೆ ಮೃತಪಟ್ಟವರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

      ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾವೈರಸ್?

      ಯಾವ ಜಿಲ್ಲೆಯಲ್ಲಿ ಎಷ್ಟು ಜನರಿಗೆ ಕೊರೊನಾವೈರಸ್?

      ರಾಜ್ಯದಲ್ಲಿ ಒಂದೇ ದಿನ 1502 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಜಿಲ್ಲಾವಾರು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ಒಂದರಲ್ಲೇ 889 ಜನರಿಗೆ ಸೋಂಕು ದೃಢಪಟ್ಟಿದೆ. ದಕ್ಷಿಣ ಕನ್ನಡ 90, ಮೈಸೂರು 68, ಬಳ್ಳಾರಿ 65, ಧಾರವಾಡ 47, ವಿಜಯಪುರ 39, ರಾಮನಗರ 39, ಕಲಬುರಗಿ 38, ಬೀದರ್ 32, ತುಮಕೂರು 26, ಶಿವಮೊಗ್ಗ 23, ಮಂಡ್ಯ 19, ಉತ್ತರ ಕನ್ನಡ 17, ಹಾಸನ 15, ಉಡುಪಿ 14, ಕೋಲಾರ 12, ರಾಯಚೂರು 11, ಬಾಗಲಕೋಟೆ 10, ದಾವಣಗೆರೆ 8, ಯಾದಗಿರಿ 7, ಬೆಳಗಾವಿ 7, ಕೊಡಗು 6, ಬೆಂಗಳೂರು ಗ್ರಾಮಾಂತರ 5, ಹಾವೇರಿ 4, ಕೊಪ್ಪಳ 4, ಚಿತ್ರದುರ್ಗ 3, ಗದಗ 2, ಚಿಕ್ಕಮಗಳೂರು - 1, ಚಿಕ್ಕಬಳ್ಳಾಪುರ 1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ರಾಜ್ಯದಲ್ಲಿ 161 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

      ರಾಜ್ಯದಲ್ಲಿ 161 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

      ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡ 161 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು 113, ಧಾರವಾಡ 8, ಕಲಬುರಗಿ 5, ಬಳ್ಳಾರಿ 5, ಹಾಸನ 4, ರಾಯಚೂರು 4, ಉಡುಪಿ 3, ಗದಗ 3, ಕೋಲಾರ 3, ಬೆಳಗಾವಿ 2, ಚಾಮರಾಜನಗರ 2, ಬಾಗಲಕೋಟೆ 2, ದಕ್ಷಿಣ ಕನ್ನಡ 2, ಬೀದರ್ 2, ತುಮಕೂರು 1, ಕೊಡಗು 1, ದಾವಣಗೆರೆ 1 ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

      ರಾಜ್ಯದಲ್ಲಿ 8334 ಕೊವಿಡ್-19 ಸೋಂಕಿತರು ಆರಾಮ

      ರಾಜ್ಯದಲ್ಲಿ 8334 ಕೊವಿಡ್-19 ಸೋಂಕಿತರು ಆರಾಮ

      ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆ ಕಂಡು ಬರುತ್ತಿದೆ. ಇನ್ನೊಂದು ಮಗ್ಗಲಲ್ಲಿ ಕೊರೊನಾವೈರಸ್ ಸೋಂಕಿತರ ಗುಣಮುಖರಾಗುತ್ತಿರುವವರ ಸಂಖ್ಯೆ ಇಳಿಮುಖ ಆಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಕೇವಲ 271 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಬಳ್ಳಾರಿ 62, ದಕ್ಷಿಣ ಕನ್ನಡ 34, ಬೆಂಗಳೂರು ಗ್ರಾಮಾಂತರ 32, ಬೆಂಗಳೂರು ನಗರ 30, ಕಲಬುರಗಿ 23, ಉಡುಪಿ 21, ವಿಜಯಪುರ 14, ಮಂಡ್ಯ 12, ಗದಗ 9, ಹಾವೇರಿ 8, ಮೈಸೂರು 8, ಶಿವಮೊಗ್ಗ 8, ದಾವಣಗೆರೆ 6, ಚಿಕ್ಕಮಗಳೂರು 2, ರಾಯಚೂರು 1, ಚಿಕ್ಕಬಳ್ಳಾಪುರ 1 ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+