• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ: ಎಲ್ಲೆಲ್ಲಿ?

|
   ರಾಜ್ಯದ 15 ಕಡೆ ಸಣ್ಣ ವಿಮಾನ ನಿಲ್ದಾಣ | Oneindia Kannada

   ಬೆಂಗಳೂರು, ಆಗಸ್ಟ್ 26: ರಾಜ್ಯದ ಒಟ್ಟು 15 ಕಡೆ ಸಣ್ಣ ವಿಮಾನ ನಿಲ್ದಾಣಗಳು ತಲೆ ಎತ್ತಲಿವೆ. ಈ ವಿಮಾನ ನಿಲ್ದಾಣಗಳ ಅಭಿವೃದ್ಧಿ ಕಾರ್ಯಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ.ಇಷ್ಟು ದಿನ ಕಲಬುರಗಿ, ಬೆಂಗಳೂರು ಇನ್ನು ಕೆಲವೇ ಕೆಲವು ಕಡೆ ವಿಮಾನ ನಿಲ್ದಾಣವಿತ್ತು. ಆದರೆ ಇನ್ನುಮುಂದೆ ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನಷ್ಟು ವಿಮಾನ ನಿಲ್ದಾಣಗಳು ನಿರ್ಮಾಣಾಗಲಿದೆ.

   ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ 38 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಈ ಕುರಿತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ) ಜೊತೆ ತಿಳುವಳಿಕ ಪತ್ರಕ್ಕೆ ಸಹಿ ಮಾಡಲಾಗಿದೆ. ಇದರೊಂದಿಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ 181 ಕೋಟಿ ರೂ. ಅನುದಾನ ನೀಡಲಾಗಿದೆ.

   ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿಗೆ ಆಹ್ವಾನ

   ಮೊದಲ ಹಂತದಲ್ಲಿ ಕೆಲವು ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳ ಕಾರ್ಯ ಆರಂಭಗೊಂಡಿವೆ. ಎರಡನೇ ಹಂತದಲ್ಲಿ ರಾಯಚೂರು, ಹಾಸನ, ಕಾರವಾರ, ವಿರಾಜಪೇಟೆ (ಕೊಡಗು), ಕೋಲಾರ, ಯಾದಗಿರಿ ಮತ್ತು ಬಳ್ಳಾರಿ ನಗರಗಳನ್ನು ಗುರುತಿಸಲಾಗಿದೆ.

   ಕನಿಷ್ಠ 15 ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿಯ ಕುರಿತು ಎಸ್‍ಪಿವಿ (ಸ್ಪೆಷಲ್ ಪರ್ಪಸ್ ವೆಹಿಕಲ್) ಯೋಜನೆ ಮಾಡಿಕೊಳ್ಳುತ್ತಿದೆ. ಈ ವಿಚಾರವಾಗಿ ಸರ್ಕಾರ ಮತ್ತು ಎಎಐ ಅಧಿಕಾರಿಗಳ ನಡುವೆ ಎರಡು ದಿನಗಳಿಂದ ಮಾತುಕತೆ ನಡೆದಿತ್ತು. ನಾಗರೀಕ ವಿಮಾನಯಾನ ನೀತಿಯನ್ವಯ 15 ಸಣ್ಣ ವಿಮಾನ ನಿಲ್ದಾಣಗಳ ಅಭಿವೃದ್ಧಿ ಮೂಲಕ ಪ್ರಾದೇಶಿಕವಾಗಿ ವಾಯುಯಾನದ ಸೇವೆ ಲಭ್ಯವಾಗಲಿದೆ ಎಂದು ಎಎಐನ ಕಾರ್ಯನಿರ್ವಾಹಕ ನಿರ್ದೇಶಕ ಆನಂದ್ ಜಿ. ಜೋಶಿ ತಿಳಿಸಿದ್ದಾರೆ.

   ಮತ್ತು ಮೈಸೂರು ವಿಮಾನ ನಿಲ್ದಾಣಗಳಿಗೆ ಬೇಕಾದ ಜಮೀನು ಪಡೆದುಕೊಳ್ಳಲಾಗಿದೆ. ಈ ವರ್ಷದ ಅಂತ್ಯದಲ್ಲಿ ಈ ಎರಡೂ ವಿಮಾನ ನಿಲ್ದಾಣಗಳ ಕೆಲಸ ಸಂಪೂರ್ಣವಾಗಲಿದೆ.

   ಮೈಸೂರು (ಮಂಡಕಳ್ಳಿ), ಬೆಳಗಾವಿ (ಸಾಂಬ್ರಾ) ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳ ಅಭಿವೃದ್ಧಿ ನಡೆಯುತ್ತಿದ್ದು, ವಿಮಾನಗಳ ಹಾರಾಟ ಸಹ ಆರಂಭಗೊಂಡಿದೆ. ಪ್ರತಿನಿತ್ಯ ಬೆಳಗಾವಿಯಲ್ಲಿ 13 ಮತ್ತು ಮೈಸೂರಿನಲ್ಲಿ 8 ವಿಮಾನಗಳು ಹಾರಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

   ಮಂಗಳೂರು ನಾಗರೀಕ ವಿಮಾನಯಾನ ಮತ್ತು ವಾಣಿಜ್ಯ ಚಟುವಟಿಕೆ ಸೇವೆಯನ್ನು ಹೊಂದಿದೆ. ಕಲಬುರಗಿ ನಿಲ್ದಾಣಕ್ಕೆ ಅಲಯನ್ಸ್ ಏರ್ ಮತ್ತು ಘೋಧ್ವತ್ ಏವಿಯೇಷನ್ ಸೇವೆಯನ್ನು ಆರಂಭಿಸಿವೆ.

   ಕಲಬುರಗಿಯಿಂದ ನೇರವಾಗಿ ಬೆಂಗಳೂರು, ಘಾಜಿಯಾಬಾದ್, ಉತ್ತರ ಪ್ರದೇಶ ಮತ್ತು ತಿರುಪತಿಗೆ ವಿಮಾನ ಸಂಪರ್ಕ ಕಲ್ಪಿಸುತ್ತಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣ ರಾಜ್ಯದ ಅತಿ ಹೆಚ್ಚು ಜನಸಂದಣಿ ಹೊಂದಿರುವ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

   English summary
   15 Small Airports To Come In Different Districts, The domestic air connectivity in Karnataka is all set to get a boost with the government fast-tracking projects to develop the small airport.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X