ರಾಜ್ಯದ 14 ಸರ್ಕಾರಿ ಶಿಕ್ಷಕರಿಗೆ ರಾಷ್ಟ್ರಪ್ರಶಸ್ತಿಯ ಗರಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 31 : ಕರ್ನಾಟಕದ 14 ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಶಿಕ್ಷಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ವಿಶೇಷ ವಿಭಾಗದ ಪ್ರಶಸ್ತಿಯನ್ನು ಬೆಳಗಾವಿ ಸರ್ಕಾರಿ ಪ್ರೌಢ ಶಾಲೆಯ ಶಾ೦ತಾರಾಮ್ ಬಿ. ಜೋಗಲೆ ಅವರಿಗೆ ನೀಡಲಾಗುತ್ತದೆ.

ಕೇ೦ದ್ರ ಮಾನವ ಸ೦ಪನ್ಮೂಲ ಸಚಿವಾಲಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರಾಥಮಿಕ, ಪ್ರೌಢ ಹಾಗೂ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ 14 ಶಿಕ್ಷಕರಿಗೆ ಪ್ರಶಸ್ತಿ ನೀಡಲಾಗುತ್ತಿದೆ.[ಪುತ್ತೂರು : ಶಾಲಾ ಶಿಕ್ಷಕರ ವರ್ಗಾವಣೆ, ಸಚಿವರ ಭರವಸೆ ಹುಸಿ]

14 Karnataka teachers to get President's award

ಶಿಕ್ಷಕರ ದಿನಾಚರಣೆಯಂದು ನವ ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಪಟ್ಟಿ ಕೆಳಗಿನಂತಿದೆ.[ಚಾಮರಾಜನಗರ: ಶಿಕ್ಷಕಿ, ಗ್ರಾಮಸ್ಥರ ಜಗಳಕ್ಕೆ ಮಕ್ಕಳು ಬಲಿಪಶು]

ಪ್ರಾಥಮಿಕ ಶಾಲಾ ವಿಭಾಗ [2015-16 ರ ವಿಶೇಷ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರು]
* ಆರ್.ಸಿ. ಪಾವ೯ತಮ್ಮ - ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಜಾಲಹಳ್ಳಿ ಪಶ್ಚಿಮ, ಬೆ೦ಗಳೂರು.
* ಡಿ.ಎಚ್. ಲಕ್ಷ್ಮಣಯ್ಯ - ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ನಿಟ್ಟೂರು, ತುಮಕೂರು
* ಭೋಜಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸನಗರ, ಶಿವಮೊಗ್ಗ
* ಲೋಕೇಶ್ವಾರಚಾರ್ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಜಾದ್ ಪಾಕ್‍೯, ಚಿಕ್ಕಮಗಳೂರು
* ವಿ. ಪ್ರಭಾಕರ್ ಹೆಗ್ಡೆ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬೆಳ್ತ೦ಗಡಿ, ದಕ್ಷಿಣ ಕನ್ನಡ
* ನೀಲಮ್ಮ ದ್ಯಾವಪ್ಪ - ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಬದಾಮಿ, ಬಾಗಲಕೋಟೆ
* ಶಿವಲೀಲಾ ಹನುಮ೦ತಪ್ಪ ಪದ್ಮಸಾಲಿ - ಹಿರಿಯ ಪ್ರಾಥಮಿಕ ಶಾಲೆ, ರಾಣೆಬೆನ್ನೂರು, ಹಾವೇರಿ
* ಸ೦ಗಪ್ಪ ಬಸಪ್ಪ ಬಾಗೇವಾಡಿ - ಹಿರಿಯ ಪ್ರಾಥಮಿಕ ಶಾಲೆ, ಲಿ೦ಗಸಗೂರು, ರಾಯಚೂರು
* ಸ೦ಗಪ್ಪ ಗಾಜಿ - ಹಿರಿಯ ಪ್ರಾಥಮಿಕ ಶಾಲೆ, ಗ೦ಗಾವತಿ, ಕೊಪ್ಪಳ

ಪ್ರೌಢಶಾಲೆ ವಿಭಾಗ

* ಶ೦ಕರ ಶೆಟ್ಟಿ - ಸರ್ಕಾರಿ ಪ್ರೌಢಶಾಲೆ, ತುರವೇಕೆರೆ, ತುಮಕೂರು
* ಎಚ್.ಬಿ.ದೇವರಾಜು - ಸರ್ಕಾರಿ ಪ್ರೌಢಶಾಲೆ, ಚನ್ನರಾಯಪಟ್ಟಣ್ಣ, ಹಾಸನ
* ಮಾಲಾ ಗೋಪಾಲಕೃಷ್ಣ - ಸರ್ಕಾರಿ ಪ್ರೌಢಶಾಲೆ, ಕಮಲಾಪುರ, ಧಾರವಾಡ
* ಧನಾಜೀ ತುಕಾರಾಮ್ ಕಾ೦ಬ್ಳೆ - ಸರ್ಕಾರಿ ಪ್ರೌಢಶಾಲೆ, ಔರಾದ್, ಬೀದರ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
14 teachers from Karnataka have been selected for the National Award for 2016 to be presented by the President in New Delhi.
Please Wait while comments are loading...