• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಾಕ್‌ಡೌನ್: ಮತ್ತೆ ದೆಹಲಿಯಿಂದ ರಾಜ್ಯಕ್ಕೆ ಬಂದ 1200 ಜನರು

|

ಬೆಂಗಳೂರು, ಮೇ 16: ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ದೆಹಲಿಯಿಂದ ಮತ್ತಷ್ಟು ಜನರು ರಾಜ್ಯಕ್ಕೆ ಬಂದಿದ್ದು, ಅಲ್ಲಿಂದ ಬಂದ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಬಂದ ಪ್ರಯಾಣಿಕರ ಆರೋಗ್ಯ ತಪಾಸಣೆಯನ್ನು ಬಿಬಿಎಂಪಿ ಆರೋಗ್ಯ ಸಿಬ್ಬಂದಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ಲಾಟ್‌ಫಾರಂನಲ್ಲಿ ಮಾಡಿದ್ದಾರೆ. ರೈಲು ಆಗಮಿಸಿದ ತಕ್ಷಣ ಮೊದಲಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡುವ ಮೂಲಕ ಪ್ರಾಥಮಿಕ ಆರೋಗ್ಯ ಪರೀಕ್ಷೆ ಮಾಡಲಾಯಿತು.

ಭಾರತದಲ್ಲಿ ಒಂದೇ ದಿನ 3,970 ಕೊರೊನಾ ಹೊಸ ಪ್ರಕರಣ: 103 ಸಾವು

ನಂತರ ಕ್ವಾರಂಟೈನ್ ಮಾಡಲು ನಿಗದಿತ ಹೊಟೆಲ್‌ಗಳಿಗೆ ಪ್ರಯಾಣಿಕರನ್ನು ಸ್ಥಳಾಂತರ ಮಾಡಲಾಯ್ತು. ಬಿಎಂಟಿಸಿ ಬಸ್‌ಗಳಲ್ಲಿ ಮೊದಲೇ ನಿಗದಿ ಮಾಡಿದ್ದ ಕ್ವಾರಂಟೈನ್ ಹೋಟೆಲ್, ಪಿಜಿಗಳಿಗೆ ಎಲ್ಲರನ್ನೂ ಕರೆದುಕೊಂಡು ಹೋಗಲಾಯ್ತು. ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ 1200 ಪ್ರಯಾಣಿಕರು ಪ್ರಯಾಣ ಬೆಳೆಸಿದ್ದರು.

ಅವರಲ್ಲಿ ಅರ್ಧದಷ್ಟು ಪ್ರಯಾಣಿಕರು ಹುಬ್ಬಳ್ಳಿ, ಕಲಬುರ್ಗಿಯಲ್ಲಿ‌ ಇಳಿದಿದ್ದರು. ಅವರಗೂ ಅಲ್ಲಿ ಪ್ರಾಥಮಿಕ ಆರೋಗ್ಯ ತಪಾಸಣೆಯ ಬಳಿಕ ಕ್ವಾರಂಟೈನ್ ಹೊಟೆಲ್‌, ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಉಳಿದ 600 ಪ್ರಯಾಣಿಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಚಿದಾನಂದ ಸೇರಿದಂತೆ ಹಲವು ಝೋನ್ ಬಿಬಿಎಂಪಿ ಅಧಿಕಾರಿಗಳು ದೆಹಲಿಯಿಂದ ಹಿಂದಿರುಗಿದವರ ಉಸ್ತುವಾರಿ ವಹಿಸಿದ್ದರು.

English summary
In the wake of corona virus more people from Delhi have come to the state. The initial health checkup was done by thermal screening as soon as the train arrived in Krantivira Sangolli Rayanna railway station platform in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X