ಕರ್ನಾಟಕದಲ್ಲಿ ಕೊರೊನಾವೈರಸ್ ರಣಕೇಕೆಗೆ 226 ಮಂದಿ ಬಲಿ

ಬೆಂಗಳೂರು, ಜೂನ್.29: ನೊವೆಲ್ ಕೊರೊನಾವೈರಸ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೊಂದು ಮಹಾಸ್ಫೋಟ ಸಂಭವಿಸಿದೆ. ಕಳೆದ 24 ಗಂಟೆಗಳಲ್ಲೇ ರಾಜ್ಯದಲ್ಲಿ ಬರೋಬ್ಬರಿ 1105 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ.

Recommended Video

      Lunar Eclipse July 5th : ಜುಲೈ 5ಕ್ಕೆ ಚಂದ್ರ ಗ್ರಹಣ , ಇಲ್ಲಿದೆ ಕಂಪ್ಲೀಟ್ ಮಾಹಿತಿ | Oneindia Kannada

      ಸೋಮವಾರ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಕೊರೊನಾವೈರಸ್ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ಈ ವೇಳೆ ರಾಜ್ಯದಲ್ಲಿ ಬರೋಬ್ಬರಿ 1105 ಜನರಿಗೆ ಕೊವಿಡ್-19 ಅಂಟಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ14295ಕ್ಕೆ ಏರಿಕೆಯಾಗಿದೆ.

      ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಕರ್ನಾಟಕದಲ್ಲಿ ಒಟ್ಟು 14295 ಮಂದಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ಒಂದೇ ದಿನ 176 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದು, ಬಾಕಿ ಉಳಿದ 6382 ಮಂದಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ.

      ಕರ್ನಾಟಕದಲ್ಲಿ ಕೊರೊನಾವೈರಸ್ ಗೆ 19 ಮಂದಿ ಸಾವು

      ಕರ್ನಾಟಕದಲ್ಲಿ ಕೊರೊನಾವೈರಸ್ ಗೆ 19 ಮಂದಿ ಸಾವು

      ಕರುನಾಡಿನಲ್ಲಿ ಕೊರೊನಾವೈರಸ್ ಸಾವಿನ ಕೇಕೆ ಹಾಕುತ್ತಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 19 ಮಂದಿ ಮಹಾಮಾರಿಗೆ ಸಿಕ್ಕು ಪ್ರಾಣ ಬಿಟ್ಟಿದ್ದಾರೆ. ಬಳ್ಳಾರಿ ಜಿಲ್ಲೆಯೊಂದರಲ್ಲೇ 9 ಮಂದಿ ಕೊವಿಡ್-19ಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ನಾಲ್ವರು ಹೆಮ್ಮಾರಿಯ ಅಟ್ಟಹಾಸಕ್ಕೆ ಸಿಕ್ಕು ಸಾವಿನ ಮನೆ ಸೇರಿದ್ದಾರೆ. ಬಾಗಲಕೋಟೆ, ದಕ್ಷಿಣ ಕನ್ನಡ ಮತ್ತು ಹಾಸನದಲ್ಲಿ ಒಬ್ಬರು ಕೊರೊನಾವೈರಸ್ ನಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಒಟ್ಟು 226 ಜನರು ಮಹಾಮಾರಿಗೆ ತುತ್ತಾಗಿದ್ದಾರೆ.

      ಸಿಲಿಕಾನ್ ಸಿಟಿಯಲ್ಲೇ 738 ಜನರಿಗೆ ಕೊರೊನಾವೈರಸ್ ಸೋಂಕು

      ಸಿಲಿಕಾನ್ ಸಿಟಿಯಲ್ಲೇ 738 ಜನರಿಗೆ ಕೊರೊನಾವೈರಸ್ ಸೋಂಕು

      ಕೊರೊನಾವೈರಸ್ ಅಟ್ಟಹಾಸಕ್ಕೆ ರಾಜ್ಯ ರಾಜಧಾನಿ ಬೆಂಗಳೂರು ಸಿಕ್ಕು ನಲುಗಿದೆ. ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ 738 ಜನರಿಗೆ ಕೊರೊನಾವೈರಸ್ ಸೋಂಕ ತಗಲಿರುವುದು ದೃಢಪಟ್ಟಿದೆ. ನಿನ್ನೆ 783 ಜನರಿಗೆ ಅಂಟಿಕೊಂಡಿದ್ದು, ಬೆಂಗಳೂರು ನಗರವೊಂದರಲ್ಲೇ ಬರೋಬ್ಬರಿ 4052 ಜನರಿಗೆ ಕೊರೊನಾವೈರಸ್ ಸೋಂಕು ಅಂಟಿಕೊಂಡಿದೆ. ಕಳೆದ 24 ಗಂಟೆಗಳಲ್ಲಿ ನಗರದಲ್ಲಿ ನಾಲ್ವರು ಮಹಾಮಾರಿಗೆ ಬಲಿಯಾಗಿದ್ದು, ಬೆಂಗಳೂರಿನಲ್ಲಿ ಒಟ್ಟು 91 ಮಂದಿ ಕೊರೊನಾವೈರಸ್ ಸೋಂಕಿಗೆ ಸಿಕ್ಕು ಉಸಿರು ಬಿಟ್ಟಿದ್ದಾರೆ.

      ಕರ್ನಾಟಕದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ?

      ಕರ್ನಾಟಕದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆ?

      ರಾಜ್ಯದಲ್ಲಿ ಒಂದೇ ದಿನ 1105 ಮಂದಿಗೆ ಕೊರೊನಾವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಜಿಲ್ಲಾವಾರು ಯಾವ ಜಿಲ್ಲೆಯಲ್ಲಿ ಎಷ್ಟು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎನ್ನುವುದನ್ನು ನೋಡುವುದಾದರೆ ಬೆಂಗಳೂರು ಒಂದರಲ್ಲೇ 738 ಜನರಿಗೆ ಸೋಂಕು ಪಕ್ಕಾ ಆಗಿದೆ. ಬಳ್ಳಾರಿ - 76, ದಕ್ಷಿಣ ಕನ್ನಡ - 32, ಬೀದರ್ -28, ಉತ್ತರ ಕನ್ನಡ -24, ಕಲಬುರಗಿ -23, ಹಾಸನ - 22, ವಿಜಯಪುರ - 22, ತುಮಕೂರು - 18, ಉಡುಪಿ - 18, ಧಾರವಾಡ - 17, ಚಿಕ್ಕಮಗಳೂರು - 17, ಚಿಕ್ಕಬಳ್ಳಾಪುರ -15, ಯಾದಗಿರಿ - 9, ಮಂಡ್ಯ -8, ಮೈಸೂರು -6, ಶಿವಮೊಗ್ಗ -5, ರಾಯಚೂರು - 4, ಬಾಗಲಕೋಟೆ - 4, ಕೋಲಾರ -4, ಗದಗ -4, ಬೆಂಗಳೂರು ಗ್ರಾಮಾಂತರ -3, ದಾವಣಗೆರೆ - 2, ರಾಮನಗರ -2, ಚಿತ್ರದುರ್ಗ -2, ಹಾವೇರಿ - 1, ಕೊಡಗು -1 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

      ರಾಜ್ಯದಲ್ಲಿ 268 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

      ರಾಜ್ಯದಲ್ಲಿ 268 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ

      ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕು ಅಂಟಿಕೊಂಡ 268 ಮಂದಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು - 178, ಧಾರವಾಡ -15, ಕಲಬುರಗಿ -12, ಬೀದರ್ - 8, ಬಳ್ಳಾರಿ - 07, ದಕ್ಷಿಣ ಕನ್ನಡ -6, ಹಾಸನ - 6, ಉಡುಪಿ - 4, ಗದಗ -4, ರಾಯಚೂರು - 4, ವಿಜಯಪುರ -3, ಚಾಮರಾಜನಗರ - 3, ತುಮಕೂರು- 3, ಕೋಲಾರ - 2, ಕೊಪ್ಪಳ -2, ದಾವಣಗೆರೆ - 2, ಬೆಳಗಾವಿ -2, ಮೈಸೂರು -2, ಹಾವೇರಿ - 2, ಕೊಡಗು -1, ಉತ್ತರ ಕನ್ನಡ -1, ಚಿಕ್ಕಮಗಳೂರು -1, ಸೋಂಕಿತರಿಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+