ಕರ್ನಾಟಕದಲ್ಲಿ 1.29 ಲಕ್ಷ ಡೋಸ್ ಕೊವ್ಯಾಕ್ಸಿನ್ ಲಸಿಕೆ ವ್ಯರ್ಥ!

ಬೆಂಗಳೂರು, ಡಿಸೆಂಬರ್ 20: ಭಾರತದಲ್ಲಿ ಒಂದು ಕಡೆ ಕೊರೊನಾವೈರಸ್ ಲಸಿಕೆಯನ್ನು ಸಮರೋಪಾದಿಯಲ್ಲಿ ವಿತರಣೆ ಮಾಡಲಾಗುತ್ತಿದೆ. ಇದರ ಮಧ್ಯೆ ದೇಶದ 11 ರಾಜ್ಯಗಳಲ್ಲಿ ಕೊವ್ಯಾಕ್ಸಿನ್ ಲಸಿಕೆ ಸರಿಯಾಗಿ ವಿತರಣೆ ಆಗದೇ ವ್ಯರ್ಥವಾಗಿದೆ. 1 ಲಕ್ಷಕ್ಕೂ ಹೆಚ್ಚು ಡೋಸ್ ಲಸಿಕೆಯನ್ನು ವ್ಯರ್ಥ ಮಾಡಿರುವ 11 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಕೂಡ ಗುರುತಿಸಿಕೊಂಡಿದೆ.

ದೇಶದಲ್ಲಿ 1 ಲಕ್ಷಕ್ಕಿಂತ ಹೆಚ್ಚು ಡೋಸ್ ಕೊವಿಡ್-19 ಲಸಿಕೆಯನ್ನು ವ್ಯರ್ಥಗೊಳಿಸಿದ ರಾಜ್ಯಗಳ ಬಗ್ಗೆ ಕೇಂದ್ರದ ರಾಜ್ಯ ಖಾತೆ ಸಚಿವರಾದ ಡಾ.ಭಾರತಿ ಪ್ರವೀಣ್ ಪವಾರ್ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.

ಡಿಸೆಂಬರ್ 18 ರವರೆಗಿನ ಕೋ-ವಿನ್ ಪೋರ್ಟಲ್ ಅಂಕಿ-ಅಂಶಗಳ ಪ್ರಕಾರ, ರಾಜ್ಯವು ಇದುವರೆಗೆ 1,29,261 ಡೋಸ್‌ಗಳನ್ನು ವ್ಯರ್ಥ ಮಾಡಿದೆ. ಈ ಪೈಕಿ ಬಳ್ಳಾರಿ 61,203 ಡೋಸ್ ಲಸಿಕೆಯನ್ನು ವ್ಯರ್ಥವಾಗಿಸಿದ್ದು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. 45,080 ಡೋಸ್ ವ್ಯರ್ಥ ಮಾಡಿರುವ ಕೊಪ್ಪಳ ಎರಡನೇ ಸ್ಥಾನದಲ್ಲಿದೆ. ಮೈಸೂರಿನಲ್ಲಿ - 40,043 ಡೋಸ್ ಹಾಗೂ ಹಾಸನದಲ್ಲಿ 34,985 ಡೋಸ್ ಮತ್ತು ದಾವಣಗೆರೆಯಲ್ಲಿ 27,609 ಡೋಸ್ ಲಸಿಕೆಯನ್ನು ವ್ಯರ್ಥಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

1.29 lakh doses of Covaxin Vaccine wasted in Karnataka

ಎರಡನೇ ಡೋಸ್ ಪಡೆಯುವಲ್ಲಿ ಹಿಂಜರಿಕೆ:

ಕೊರೊನಾವೈರಸ್ ರೂಪಾಂತರಿ ಓಮಿಕ್ರಾನ್ ಹರಡುವಿಕೆ ಭೀತಿ ನಡುವೆಯೂ ಸಾರ್ವಜನಿಕರು ಎರಡನೇ ಡೋಸ್ ಲಸಿಕೆ ಪಡೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದರ ಮಧ್ಯೆ ಲಸಿಕೆ ವ್ಯರ್ಥ ಆಗುತ್ತಿರುವುದರ ಕುರಿತು ಅಂಕಿ-ಅಂಶಗಳು ಹೊರ ಬಿದ್ದಿವೆ. ಈ ಕುರಿತು ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಅವರ ಕಚೇರಿಯನ್ನು ಸಂಪರ್ಕಿಸಿದಾಗ, "ವ್ಯರ್ಥವಾದ ಎಲ್ಲಾ 1,29,261 ಡೋಸ್ ಲಸಿಕೆಗಳೂ ಕೋವಾಕ್ಸಿನ್ ಆಗಿವೆ," ಎಂದು ತಿಳಿದು ಬಂದಿದೆ.

ಕೊವ್ಯಾಕ್ಸಿನ್ ಬದಲಿಗೆ ಕೊವಿಶೀಲ್ಡ್ ಲಸಿಕೆಗೆ ಬೇಡಿಕೆ:
"ನಾವು ಹೆಚ್ಚಾಗಿ 20 ಡೋಸ್ ಲಸಿಕೆಯನ್ನು ಹೊಂದಿರುವ ಕೊವ್ಯಾಕ್ಸಿನ್ ಬಾಟಲಿಗಳನ್ನು ಪಡೆಯುತ್ತಿದ್ದೇವೆ. ಬಹುತೇಕ ಕಡೆಗಳಲ್ಲಿ ಲಸಿಕೆ ಪಡೆದುಕೊಳ್ಳಲು 20 ಮಂದಿ ಏಕಕಾಲಕ್ಕೆ ಬರುತ್ತಿಲ್ಲ. ಅಲ್ಲದೇ ಕೊವ್ಯಾಕ್ಸಿನ್ ಬದಲಿಗೆ ಕೊವಿಶೀಲ್ಡ್ ಲಸಿಕೆಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಕೊವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಳ್ಳುವವರು ಮಾತ್ರ ಬರುತ್ತಿದ್ದಾರೆ. ಇದರಿಂದ ಕೊವ್ಯಾಕ್ಸಿನ್ ಲಸಿಕೆಯು ಹೆಚ್ಚಿನ ಪ್ರಮಾಣದಲ್ಲಿ ವ್ಯರ್ಥವಾಗಿದೆ ಎಂದು ತಿಳಿಸಿದ್ದಾರೆ.

ಜಿಲ್ಲಾವಾರು ಆರೋಗ್ಯಾಧಿಕಾರಿಗಳು ನೀಡುವ ಕಾರಣ:
ಕೋವಾಕ್ಸಿನ್ ತಯಾರಕ ಭಾರತ್ ಬಯೋಟೆಕ್, ಈ ಹಿಂದೆ ತಮ್ಮ ತೆರೆದ ಸೀಸೆ ನೀತಿಯ ಬಗ್ಗೆ ಪ್ರತಿಕ್ರಿಯಿಸುತ್ತಾ,"ಕೋವಾಕ್ಸಿನ್ 28 ದಿನಗಳ ತೆರೆದ ಸೀಸೆ ನೀತಿಯನ್ನು ಹೊಂದಿದ್ದು, ತೆರೆದ ಸೀಸೆಯಲ್ಲಿರುವ ಲಸಿಕೆಯನ್ನು ಖಾಲಿ ಮಾಡುವುದಕ್ಕೆ ಯಾವುದೇ ಸಮಯದ ಮಿತಿ ಇರಲಿಲ್ಲ. ಸೀಸೆಯನ್ನು ತೆರೆದ ಆರು ಗಂಟೆಗಳಲ್ಲಿ 10 ಜನರಿಗೆ ಲಸಿಕೆ ನೀಡುವುದು ಕಷ್ಟದ ವಿಷಯವೇನೂ ಆಗಿರಲಿಲ್ಲ," ಎಂದು ಡಿಹೆಚ್‌ಗೆ ಹೀಗೆ ಹೇಳಿದ್ದಾರೆ.
ಹಾಸನ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆರೋಗ್ಯಾಧಿಕಾರಿಗಳು ಒಂದೊಂದು ಕಾರಣವನ್ನು ನೀಡುತ್ತಾರೆ. ಲಸಿಕೆ ನಿರ್ವಹಣೆಯಲ್ಲಿ ದೋಷದಿಂದ ಹಿಡಿದು ಅಂಕಿ-ಅಂಶಗಳನ್ನು ನೋಂದಾಯಿಸುವಲ್ಲಿನ ಲೋಪದೋಷಗಳವರೆಗೂ ಕಾರಣವನ್ನು ನೀಡಿದ್ದಾರೆ.

ಹಾಸನ:
ನಮ್ಮಲ್ಲಿ ಕೊವ್ಯಾಕ್ಸಿನ್ ಲಸಿಕೆ ವಿತರಕರು ಬಾಟಲಿಯಿಂದ ಸರಿಯಾಗಿ ಔಷಧಿಯನ್ನು ಸಿರಿಂಜ್‌ಗೆ ಸೆಳೆಯುವ ವೇಳೆ ನಿಖರವಾಗಿ 0.5 ಮಿಲಿ ಅನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ "30,000 ಡೋಸ್" ಲಸಿಕೆ ವ್ಯರ್ಥವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಹೇಳಿದ್ದಾರೆ.

ಕೊಪ್ಪಳ:
"ನಮ್ಮ ನಿಜವಾದ ವ್ಯರ್ಥವು ಎಲ್ಲೋ ಸುಮಾರು 20,000 ಡೋಸ್‌ಗಳಾಗಿರಬೇಕು ಅಥವಾ 45,000 ಕ್ಕಿಂತ ಹೆಚ್ಚಿರಬಾರದು. ಉಳಿದ ಡೋಸ್‌ಗಳನ್ನು ಬಳಸಲಾಗಿದೆ, ಆದರೆ CoWIN p ನಲ್ಲಿ ಈ ಅಂಕಿ ಅಂಶಗಳನ್ನು ಸೇರಿಸಲಾಗಿಲ್ಲ," ಎಂದು ಕೊಪ್ಪಳ ಡಿಸಿ ವಿಕಾಸ್ ಕಿಶೋರ ಸುರಳಕರ್ ಆರೋಪಿಸಿದ್ದಾರೆ.

ಗದಗ:
"ಗದಗ ಜಿಲ್ಲೆಯಲ್ಲಿ ಕೋ-ವಿನ್ ಪ್ರಕಾರ 24,812 ಡೋಸ್ ಕೊವ್ಯಾಕ್ಸಿನ್ ಲಸಿಕೆಯು ನಷ್ಟವಾಗಿದೆ. ಆದರೆ ನಾವು ಈಗ ನಾಲ್ಕು ತಿಂಗಳಿನಿಂದ ಲಸಿಕೆ ಕೋಲ್ಡ್ ಚೈನ್ ಮ್ಯಾನೇಜರ್ ಅನ್ನು ಹೊಂದಿಲ್ಲ, ಆದ್ದರಿಂದ ಡೇಟಾ ವಿಳಂಬವಾಗಿದೆ," ಎಂದು ಗದಗ ಜಿಲ್ಲಾ ಲಸಿಕೆ ಅಧಿಕಾರಿ ಡಾ.ಬಿ.ಎಂ.ಗೊಜನೂರ ಹೇಳಿದ್ದಾರೆ. "ಕೋವಿನ್ ಪ್ರಕಾರ, ನಾವು 5,193 ಕೋವಾಕ್ಸಿನ್ ಡೋಸ್‌ಗಳನ್ನು ವ್ಯರ್ಥ ಮಾಡಿದ್ದೇವೆ, ವಾಸ್ತವವಾಗಿ ಇದು 1,400 ಕ್ಕಿಂತ ಹೆಚ್ಚಿಲ್ಲ. ಕೋವಿಶೀಲ್ಡ್ ವ್ಯರ್ಥಗೊಳಿಸಿರುವ ಪ್ರಮಾಣ ಕೂಡ 19,619 ಎಂದು ತೋರಿಸಲಾಗಿದೆ, ಆದರೆ ಅದು 10,000 ಡೋಸ್‌ಗಳಿಗಿಂತ ಹೆಚ್ಚಾಗಿಲ್ಲ ಎಂದು ಅವರು ಹೇಳಿದ್ದಾರೆ.

ಶೇಕಡಾವಾರು ಲೆಕ್ಕಾಚಾರ ಹೇಗಿದೆ?:
ಶೇಕಡಾವಾರು ಲೆಕ್ಕದಲ್ಲಿ, ಶೇಕಡಾ 2ಕ್ಕಿಂತ ಹೆಚ್ಚು ಡೋಸ್ ವ್ಯರ್ಥವಾಗುವ ಮೊದಲ ಆರು ಜಿಲ್ಲೆಗಳು ಹೀಗಿವೆ: ಕೊಪ್ಪಳ (ಶೇ. 3.8), ಗದಗ (ಶೇ. 3.4), ಮೈಸೂರು (ಶೇ. 2.4), ಹಾವೇರಿ (ಶೇ. 2.3), ಚಿತ್ರದುರ್ಗ (ಶೇ. 2.2 ರಷ್ಟು), ಮತ್ತು ಧಾರವಾಡ (ಶೇ 2.1)ರಷ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+