Get Updates
Get notified of breaking news, exclusive insights, and must-see stories!

T. B. Jayachandra: ಶಿರಾದಲ್ಲಿ ಮತ್ತೆ ಅಧಿಕಾರ ಹಿಡಿಯುತ್ತಾರಾ ಬರದ ನಾಡಿನ ಭಗೀರಥ ಟಿ.ಬಿ.ಜಯಚಂದ್ರ?

ಬೆಂಗಳೂರು, ಮಾರ್ಚ್. 29: ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ. ಆರು ಬಾರಿ ಶಾಸಕರಾಗಿ ಕಳೆದ ಬಾರಿ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಸೋಲು ಕಂಡಿರುವ ಅವರನ್ನು ಈ ಬಾರಿಯಾದರೂ ಕ್ಷೇತ್ರದ ಜನ ಕೈ ಹಿಡಿಯುತ್ತಾರಾ ಎಂಬುದು ಫಲಿತಾಂಶ ಬಂದ ಮೇಲೆ ತಿಳಿಯಲಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನದಲ್ಲಿ ಶಿರಾದಿಂದ ಮಾಜಿ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಈ ಕ್ಷೇತ್ರದಿಂದ ಟಿಕೆಟ್ ಬಯಸಿದ್ದ ಸಾಸಲು ಸತೀಶ್ ಅಸಮಾಧಾನಗೊಂಡಿದ್ದಾರೆ. ಟಿಕೆಟ್ ಸಿಗುವ ಭರವಸೆಯೊಂದಿಗೆ ಅವರು ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ, ಈ ಭಿನ್ನಾಭಿಪ್ರಾಯ ದಾಟಿ ಟಿ.ಬಿ.ಜಯಚಂದ್ರ ಶಿರಾದಲ್ಲಿ ಗೆಲ್ಲಬೇಕಿದೆ.

Karnataka Elections 2023: Congress Leader T. B. Jayachandra Profile

ತಿಮ್ಮನಹಳ್ಳಿ ಬೋರಯ್ಯ ಜಯಚಂದ್ರ ಅವರು 29 ಜುಲೈ 1949ರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿನ ತಿಮ್ಮನಹಳ್ಳಿಯಲ್ಲಿ ಜನಿಸಿದರು. 2018 ರ ಚುನಾವಣೆ ಮತ್ತು 2020ರ ಉಪ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಮೊದಲು ಅವರು ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

*ರಾಜಕೀಯ ವೃತ್ತಿಜೀವನ*

ಟಿ.ಬಿ. ಜಯಚಂದ್ರ ಅವರು ಕರ್ನಾಟಕ ವಿಧಾನಸಭೆಗೆ 1978 ರಲ್ಲಿ ಮೊದಲ ಬಾರಿಗೆ ಆಯ್ಕೆಯಾದರು. ಅವರು 2013 ರ ಚುನಾವಣೆಯಲ್ಲಿ 74,089 ಮತಗಳೊಂದಿಗೆ ಶಿರಾದಿಂದ ಗೆದ್ದ ನಂತರ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬಳಿಕ 2018 ರ ವಿಧಾನಸಭಾ ಚುನಾವಣೆಯಲ್ಲಿ ಶಿರಾದಿಂದ ಜೆಡಿ (ಎಸ್) ಅಭ್ಯರ್ಥಿ ಬಿ ಸತ್ಯನಾರಾಯಣ ವಿರುದ್ಧ ಸೋತರು. ಬಳಿಕ ಬಿ ಸತ್ಯನಾರಾಯಣ ನಿಧನದ ಕಾರಣ 2020ರಲ್ಲಿ ಉಪಚುನಾವಣೆ ನಡೆದು ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ. ರಾಜೇಶ್‌ಗೌಡ ವಿರುದ್ಧವು ಸೋತಿದ್ದಾರೆ.

Karnataka Elections 2023: Congress Leader T. B. Jayachandra Profile

ಟಿ.ವಿ ಜಯಚಂದ್ರ ಅವರು ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಕಳ್ಳಂಬೆಳ್ಳ ಮತ್ತು ಶಿರಾ ಕ್ಷೇತ್ರಗಳಿಂದ 6 ಅವಧಿಗೆ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು, ಇದು ಅವರ ಜನಪ್ರಿಯತೆ ಮತ್ತು ಜನರಿಗೆ ಅವರ ಮೇಲಿನ ಪ್ರೀತಿ ವಿಶ್ವಾಸ ತೋರಿಸುತ್ತದೆ.

ಜಯಚಂದ್ರ ಅವರು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಬತ್ತಿದ ಪ್ರದೇಶಗಳಿಗೆ ಹೇಮಾವತಿ ನದಿ ನೀರನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಜಯಚಂದ್ರ ಅವರು ಈ ಆಂದೋಲನದ ನೇತೃತ್ವವನ್ನು ವಹಿಸಿಕೊಂಡು ಬರಪೀಡಿತ ಶಿರಾಕ್ಕೆ ನೀರು ತರುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಜೊತೆಗೆ ಕಳ್ಳಂಬೆಳ್ಳಕ್ಕೆ ಸಂಪರ್ಕ ಕಲ್ಪಿಸುವ ಮದಲೂರು ಕೆರೆಗೆ ಕಾಲುವೆ ನಿರ್ಮಿಸಿ ಮದಲೂರು ಕೆರೆಗೆ ನೀರನ್ನು ಹರಿಸುವ ಪ್ರಯತ್ನವನ್ನೂ ಮಾಡಿದ್ದಾರೆ ಹೀಗಾಗಿ ಇವರನ್ನು ಬರದ ನಾಡಿನ ಭಗೀರಥ ಎಂದೂ ಕರೆಯಲಾಗುತ್ತದೆ.

ಆರು ಬಾರಿ ಶಾಸಕ ಟಿ.ಬಿ.ಜಯಚಂದ್ರ ಅವರು ಕಳೆದ ಬಾರಿ ಅನುಭವಿಸಿದ ಸೋಲನ್ನು ಮರೆತು ಮತ್ತೆ ಗೆಲುವು ಕಾಣಲು ಮುಂದಾಗಿದ್ದು, ಕಾಂಗ್ರೆಸ್ ಕೂಡಾ ಈ ಕ್ಷೇತ್ರವನ್ನು ಪುನಃ ವಶಪಡಿಸಿಕೊಳ್ಳಲು ಹವಣಿಸುತ್ತಿದೆ. ಕುಂಚಿಟಿಗ ಒಕ್ಕಲಿಗರು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಯಾದವರು, ಮುಸ್ಲಿಂಮರು ಕ್ಷೇತ್ರದ ಶಾಸಕರು ಯಾರಾಗಬೇಕು ಎಂದು ನಿರ್ಧರಿಸಲಿದ್ದಾರೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಉಪನಾಯಕರಾದ ಟಿ ಬಿ ಜಯಚಂದ್ರ ಅವರ ನಾಯಕತ್ವದಲ್ಲಿ ನಡೆದ ಬಳ್ಳಾರಿ ಪಾದಯಾತ್ರೆಯ ಸಂಯೋಜನೆಯು 2013 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಐತಿಹಾಸಿಕ ವಿಜಯಕ್ಕೆ ಕಾರಣವಾಯಿತು. ಈ ವೇಳೆ ಜಯ ಚಂದ್ರ ಕ್ಯಾಬಿನೆಟ್ ಸಚಿವರಾಗಿದ್ದರು. ಕಾನೂನು, ಸಂಸದೀಯ ವ್ಯವಹಾರಗಳು, ಪಶುಸಂಗೋಪನೆ, ದತ್ತಿ, ಉನ್ನತ ಶಿಕ್ಷಣ ಮತ್ತು ಸಣ್ಣ ನೀರಾವರಿ ಖಾತೆಗಳನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ್ದಾರೆ.

ಶಿಕ್ಷಣ ಮತ್ತು ಆರೋಗ್ಯ ಜಯಚಂದ್ರ ಅವರ ಆಸಕ್ತಿಯ ಇತರ ಕ್ಷೇತ್ರಗಳಾಗಿವೆ. ಅವರ ದೂರದೃಷ್ಟಿಯ ಆಲೋಚನೆಯಿಂದಾಗಿ ತುಮಕೂರು ಜಿಲ್ಲೆಗೆ ಎಚ್‌ಎಎಲ್ ತರಲು ಸಹಾಯ ಮಾಡಿತು. ಶಿರಾದಲ್ಲಿ ಹೈಟೆಕ್ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಸಿರಾ ತಾಲ್ಲೂಕಿನಾದ್ಯಂತ ಎಲ್ಲಾ ಸಮುದಾಯಗಳಿಗೆ ಹಲವಾರು ಸರ್ಕಾರಿ ವಸತಿ ನಿಲಯಗಳು, ಸಿರಾದಲ್ಲಿ ಸರ್ಕಾರಿ ಪಾಲಿಟೆಕ್ನಿಕ್ ಪ್ರಾರಂಭವಾಯಿತು. ಅಭಿವೃದ್ಧಿ ಮತ್ತು ಅನುಭವ ಅವರನ್ನು ಈ ಬಾರಿಯ ಚುನಾವಣೆಯಲ್ಲಿ ಕೈ ಹಿಡಿಯಲಿದೆ ಎಂದಬುದು ಕಾಂಗ್ರೆಸ್ ವಿಶ್ವಾಸ.

ಶಿರಾದಲ್ಲಿ ಉಪಚುನಾವಣೆಯಲ್ಲಿ ಪಡೆದುಕೊಂಡ ಸ್ಥಾನ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬಿಜೆಪಿ, ಹಾಲಿ ಶಾಸಕರನ್ನೇ ಕಣಕ್ಕೆ ಇಳಿಸಲಿದೆ. ಶಿರಾ ಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆಯನ್ನು ನಡೆಸಿ, ಶಾಸಕ ಡಾ.ಸಿ.ಎಂ.ರಾಜೇಶ್‌ ಗೌಡ ಅವರನ್ನು ಗೆಲ್ಲಿಸಬೇಕು. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷ ಕಳೆದ 70 ವರ್ಷಗಳಿಂದ ಆಡಳಿತ ನಡೆಸಿವೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ. ನಾವು ಕೊಟ್ಟ ಮಾತು ತಪ್ಪುವುದಿಲ್ಲ ಎಂದು ಭರವಸೆ ನೀಡಿದೆ.

ಇನ್ನು,ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಘೋಷಿಸಿಲ್ಲ. ಜೆಡಿಎಸ್ ಅಧ್ಯಕ್ಷ ಆರ್.ಉಗ್ರೇಶ್, ಬಿ.ಸತ್ಯಪ್ರಕಾಶ್ ಹಾಗೂ ಸಿ.ಆರ್.ಉಮೇಶ್ ಪ್ರಮುಖ ನಾಯಕರಿದ್ದಾರೆ. ಇದರ ಜೊತೆಗೆ ಪಕ್ಷ ಬಿಟ್ಟು ಬಿಜೆಪಿ ಸೇರಿ ಮತ್ತೆ ಗೂಡಿಗೆ ಮರಳಿರುವ ಎಸ್.ಆರ್.ಗೌಡ, ಇತ್ತೀಚೆಗೆ ಪಕ್ಷಕ್ಕೆ ಸೇರಿದ ಶ್ರೀರಾಮೇಗೌಡ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+