Siddaramaiah: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವರವಾಗಲಿದೆಯೇ ವರುಣಾ?

ಬೆಂಗಳೂರು, ಮಾರ್ಚ್. 29: ರಾಜ್ಯದ ಅನುಭವಿ ರಾಜಕಾರಣಿ ಸಿದ್ದರಾಮಯ್ಯ ಸದ್ಯ ಕಾಂಗ್ರೆಸ್ ವಿರೋಧ ಪಕ್ಷದ ನಾಯಕರಾಗಿದ್ದಾರೆ. ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ. ಆದರೆ, ಕೋಲಾರದಿಂದಲೂ ಸ್ವರ್ಧಿಸುವುದಾಗಿಯೂ ತಿಳಿಸಿದ್ದಾರೆ. ಆದರೆ, ಕಾಂಗ್ರೆಸ್ ಹೈಕಮಾಂಡ್ ಅವರಿಗೆ ವರುಣಾ ಕ್ಷೇತ್ರದಿಂದ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.

ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಿರುವ ಸಿದ್ದರಾಮಯ್ಯ, ತಮ್ಮ ರಾಜಕೀಯ ಅನುಭವ, ವಾಕ್‌ಚಾತುರ್ಯದಿಂದಲೇ ಹೆಸರುವಾಸಿಗಿದ್ದಾರೆ. ಇದೀಗ 2023ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತಿದ್ದಾರೆ. ಸದ್ಯ ವರುಣಾ ಕ್ಷೇತ್ರದಿಂದ ಚುನಾವಣೆಯಲ್ಲಿ ಕಣಕ್ಕಿಳಿಯಲು ಪ್ರಚಾರ ನಡೆಸುತ್ತಿದ್ದಾರೆ. ಜೊತೆಗೆ ಕೋಲಾರದಲ್ಲಿಯೂ ಪ್ರಚಾರ ನಡೆಸುತ್ತಿದ್ದಾರೆ.

ಮೈಸೂರಿನ ವರುಣಾ ಹೋಬಳಿಯ ಸಿದ್ಧರಾಮನಹುಂಡಿ ವಿಪಕ್ಷ ನಾಯಕ ಸಿದ್ದರಾಮಯ್ಯನವರ ಹುಟ್ಟೂರು. 1948 ರ ಆಗಸ್ಟ್ 12 ರಂದು ಅವರು ಸಿದ್ಧರಾಮೇಗೌಡ-ಬೋರಮ್ಮ ದಂಪತಿಯ ಪುತ್ರರಾಗಿ ಜನಿಸಿದರು. ಅವಿಭಕ್ತ ಕುಟುಂಬ ಸದಸ್ಯರಾಗಿದ್ದ ಅವರು ಬಾಲ್ಯದಲ್ಲೇ ಜಾನಪದ ನೃತ್ಯ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ನೃತ್ಯಗಳನ್ನು ಕಲಿತವರು. ಇಂದಿಗೂ ಆ ಕಲಾ ಪ್ರಕಾರಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದಾರೆ.

Karnataka Elections 2023: Congress Leader Siddaramaiah Profile

10ನೇ ವಯಸ್ಸಿನವರೆಗೆ ಶಾಲೆ ಮೆಟ್ಟಿಲು ತುಳಿಯದ ಇವರು, ನೇರವಾಗಿ ಐದನೇ ತರಗತಿಗೆ ದಾಖಲಾದರು. ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದರು. ಬಳಿಕ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿಯನ್ನು ಹಿರಿಯರೊಬ್ಬರ ಬಳಿ ಪ್ರ್ಯಾಕ್ಟೀಸ್ ಮಾಡಿದ್ದಾರೆ. ವಕೀಲಿಕೆ ಬಳಿಕ ಸಿದ್ದರಾಮಯ್ಯನವರು 1983ರಲ್ಲಿ ರಾಜ್ಯ ಚುನಾವಣೆಯಲ್ಲಿ ಭಾರತೀಯ ಲೋಕದಳ ಪಕ್ಷದಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೊದಲ ಬಾರಿಗೆ ವಿಜಯ ಪತಾಕೆ ಹಾರಿಸಿದರು. ಬಳಿಕ ಅವರು ಜನತಾಪಕ್ಷಕ್ಕೆ ಸೇರ್ಪಡೆಯಾದರು.

ಜನತಾ ಪಕ್ಷದಿಂದ ಚಾಮುಂಡೇಶ್ವರಿ ಕ್ಷೇತ್ರದಿಂದ ಅಭೂತಪೂರ್ವ ಗೆಲುವು ಸಾಧಿಸಿದರು. ಪಶುಸಂಗೋಪನೆ ಸಚಿವರಾಗಿ ಮೊದಲ ಬಾರಿಗೆ ನಂತರ ರೇಷ್ಮೆ ಮತ್ತು ಸಾರಿಗೆ ಸಚಿವರಾಗಿಯೂ ಸೇವೆ ಸಲ್ಲಿಸಿದರು. ಕಾಂಗ್ರೆಸ್ ಅಲೆ ಆರಂಭದ ನಂತರ ಕಾರಣಾಂತರಗಳಿಂದ ಜನತಾ ಪಕ್ಷ ಇಬ್ಬಾಗವಾಯಿತು. ಈ ವೇಳೆ ಸಿದ್ದರಾಮಯ್ಯ ಜಾತ್ಯಾತೀತ ಜನತಾದಳ ಪಕ್ಷ ಸೇರಿದರು. 1994 ರಲ್ಲಿ ಚುನಾವನಣೆಯಲ್ಲಿ ಗೆದ್ದು ಹಣಕಾಸು ಖಾತೆ ಸಚಿವರೂ ಆಗಿ ಅನುಭವ ಪಡೆದರು.

2004ರಲ್ಲಿ ಸಿದ್ದರಾಮಯ್ಯನವರು ಎರಡನೇ ಬಾರಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವರಾದರು. ಇದಾದ ಮೇಲೆ ಕಾಂಗ್ರೆಸ್‌ ಸೇರಿದ ಸಿದ್ದರಾಮಯ್ಯ ಅವರು 2008ರಲ್ಲಿ ಗೆಲುವು ಸಾಧಿಸಿದರು. ಅಲ್ಲಿಂದ 2012ರವರೆಗೆ ಐದು ವರ್ಷಗಳ ಪೂರ್ಣಾವಧಿಗೆ ರಾಜ್ಯದ 22ನೇ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದರು. ಬಳಿಕ 2013ರಲ್ಲಿ ಕಾಂಗ್ರೆಸ್‌ ಪಕ್ಷದಿಂದಲೇ ಮುಖ್ಯಮಂತ್ರಿ ಅಭ್ಯರ್ಥಿಯಾದರು. ಅದಾದ ಬಳಿಕ 2018ರಲ್ಲಿ ಜೆಡಿಎಸ್ ಜೊತೆ ಸೇರಿ ಮೈತ್ರಿ ರಚನೆ ಮಾಡುವ ಮೂಲಕ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

Karnataka Elections 2023: Congress Leader Siddaramaiah Profile

ಈಗ ವರುಣಾದಿಂದ ಸಿದ್ದರಾಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಕೋಲಾರದಿಂದಲೂ ಟಿಕೆಟ್ ಘೋಷಣೆಯಾಗುತ್ತದೆಯೇ ಇಲ್ಲವೂ ಎಂಬುದು ಇನ್ನೇನು ಕಾಂಗ್ರೆಸ್ ಎರಡನೇ ಎರಡನೇ ಪಟ್ಟಿ ಪ್ರಕಟವಾಗಲಿದ್ದು, ತಿಳಿಯಲಿದೆ. 2008ರಲ್ಲಿ ರಚನೆಯಾದ ಕ್ಷೇತ್ರ ವರುಣಾದಲ್ಲಿ ಇದುವರೆಗೂ ಮೂರು ವಿಧಾನಸಭಾ ಕ್ಷೇತ್ರಗಳು ನಡೆದಿವೆ. ಅದರಲ್ಲಿ ಎರಡು ಬಾರಿ ಅಂದರೆ 2008, 2013ರಲ್ಲಿ ಸಿದ್ದರಾಮಯ್ಯ ಗೆಲುವು ಕಂಡಿದ್ದಾರೆ. 2018ರಲ್ಲಿ ಯತೀಂದ್ರ ಗೆದ್ದಿದ್ದಾರೆ. ಹೀಗಾಗಿ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆಯಾಗಿದೆ.

ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ದಲಿತ ಹಾಗೂ ಲಿಂಗಾಯತ ಮತಗಳೇ ನಿರ್ಣಯಕ. 2018ರ ಚುನಾವಣೆಯಲ್ಲಿ ಯತೀಂದ್ರ ಸಿದ್ದರಾಮಯ್ಯ 96,435 ಮತಗಳು, ಬಿಜೆಪಿಯಿಂದ ಟಿ ಬಸವರಾಜು 37,819 ಮತಗಳು, ಜೆಡಿಎಸ್‌ನಿಂದ ಅಭಿಷೇಕ್‌ 28,123 ಮತಗಳನ್ನು ಪಡೆದಿದ್ದರು. ಯತೀಂದ್ರ ಸಿದ್ದರಾಮಯ್ಯ 58,616 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, ಈ ಬಾರಿ ಯತೀಂದ್ರ ಸಿದ್ದರಾಮಯ್ಯ ಅವರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಬಗ್ಗೆ ಇನ್ನು ಯಾವುದೇ ಸೂಚನೆ ಕಂಡು ಬಂದಿಲ್ಲ.

ಜೆಡಿಎಸ್‌ನಿಂದ ವರುಣಾ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಿದರು ಗೆಲ್ಲುವ ಸಾಧ್ಯತೆ ಕಡಿಮೆ ಇರುವುದರಿಂದ ಈ ಕ್ಷೇತ್ರದ ಬಗ್ಗೆ ಜೆಡಿಎಸ್‌ ವರಿಷ್ಠರು ಗಮನಹರಿಸಿದಂತೆ ಇಲ್ಲ. ಆದರೆ ಜೆಡಿಎಸ್‌ ಅಭಿಷೇಕ್‌ ಮಣಿಗಾರ್‌ ಅವರಿಗೆ ಟಿಕೆಟ್ ಘೋಷಿಸಿದೆ. ಇನ್ನು, ಬಿಜೆಪಿಯಿಂದ ಇಲ್ಲಿ ಬಿ.ಎಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಪಕ್ಷ ಚಿಂತಿಸುತ್ತಿದೆ ಎನ್ನಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+