ಕರ್ನಾಟಕ ಚುನಾವಣೆ: ತಂದೆ -ಮಕ್ಕಳ ದರ್ಬಾರ್, ಗೆದ್ದವರು, ಸೋತವರು ಇವರು!
ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳಲ್ಲಿ ಕುಟುಂಬ ರಾಜಕಾರಣದ ಸದ್ದು ಜೋರಾಗಿಯೇ ಸೌಂಡ್ ಮಾಡಿತ್ತು. ಕಣದಲ್ಲಿದ್ದ ಅಭ್ಯರ್ಥಿಗಳ ಪೈಕಿ ತಂದೆ - ಮಕ್ಕಳ ದರ್ಬಾರ್ ನಲ್ಲಿ ಸೋತವರು ಯಾರು, ಗೆದ್ದವರು ಯಾರು ಎನ್ನುವ ಸುದ್ದಿ ಇಲ್ಲಿದೆ:
ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್. ಡಿ.ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದಿಂದ ಹಾಗೂ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ರಾಮನಗರದಿಂದ ಸ್ಪರ್ಧಿಸಿದ್ದರು. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಟಿಕೆಟಿನಿಂದ ಸ್ಪರ್ಧಿಸಿದ್ದ ಕುಮಾರಸ್ವಾಮಿಗೆ ಗೆಲುವಾದರೆ, ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿಗೆ ಸೋಲಾಗಿದೆ.

ಇನ್ನೂ ಕೆಜಿಎಫ್ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕಿ ರೂಪಾಕಲಾ ಶಶಿಧರ್ ಸ್ಪರ್ಧಿಸುತ್ತಿದ್ದರೆ, ಅವರ ತಂದೆ ಕೆ.ಎಚ್.ಮುನಿಯಪ್ಪ ದೇವನಹಳ್ಳಿ ಕ್ಷೇತ್ರದಿಂದ ಕಣದಲ್ಲಿದ್ದರು. ಮುನಿಯಪ್ಪಗೆ ಮತ್ತು ಕೆಜಿಎಫ್ ನಿಂದ ರೂಪಕಲಾ ಶಶಿಧರ್‌ಗೆ ಗೆಲುವು ದೊರೆತಿದೆ.
ದಾವಣಗೆರೆ ದಕ್ಷಿಣದಿಂದ ಕಾಂಗ್ರೆಸ್ ಹಿರಿಯ ಮುತ್ಸದ್ಧಿ ರಾಜಕಾರಣಿ ಶಾಮನೂರು ಶಿವಶಂಕರಪ್ಪ ಹಾಗೂ ದಾವಣಗೆರೆ ಉತ್ತರದಿಂದ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ್ ಅಖಾಡಕ್ಕೆ ಇಳಿದಿದ್ದರು. ಶಾಮನೂರು ಶಿವಶಂಕರಪ್ಪ ಮತ್ತು ಮಲ್ಲಿಕಾರ್ಜುನ ಇಬ್ಬರೂ ತಮ್ಮತಮ್ಮ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರ
ಬಿಟಿಎಂ ಲೇಔಟ್ ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಯನಗರ ವಿಧಾನಸಭಾ ಕ್ಷೇತ್ರದಿಂದ ಅವರ ಪುತ್ರಿ ಸೌಮ್ಯ ರೆಡ್ಡಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ರಾಮಲಿಂಗಾರೆಡ್ಡಿಗೆ ಬಿಟಿಎಂ ಲೇಔಟ್‌ನಲ್ಲಿ ಗೆಲುವು ಸಾಧಿಸಿದರೆ, ಸೌಮ್ಯ ರೆಡ್ಡಿಗೆ ಜಯನಗರದಲ್ಲಿ ಸೋಲಾಗಿದೆ.
ಜಿ. ಟಿ.ದೇವೇಗೌಡ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದರೆ, ಅವರ ಮಗ ಹರೀಶ್ ಗೌಡ ಜಿ.ಡಿ ಅವರು ಹುಣಸೂರು ಕ್ಷೇತ್ರದ ಅಭ್ಯರ್ಥಿಯಾಗಿದ್ದು ಅಪ್ಪ -ಮಗನಿಗೆ ಅವರವರ ಕ್ಷೇತ್ರದಲ್ಲಿ ಗೆಲುವಾಗಿದೆ.
ಮಡಿಕೇರಿಯಲ್ಲಿ ಕಾಂಗ್ರೆಸ್ನಿಂದ ಮಂಥರ್ ಗೌಡ
ಮಡಿಕೇರಿಯಲ್ಲಿ ಕಾಂಗ್ರೆಸ್ನಿಂದ ಮಂಥರ್ ಗೌಡ ಕಣದಲ್ಲಿದ್ದು, ಅವರ ತಂದೆ ಎ.ಮಂಜು ಜೆಡಿಎಸ್ನಿಂದ ಅರಕಲಗೂಡು ವಿಧಾನಸಭಾ ಕ್ಷೇತ್ರದಿಂದ ಅಖಾಡಕ್ಕೆ ಇಳಿದಿದ್ದರು. ಮಂಜುಗೆ ಅರಕಲಗೂಡಿನಲ್ಲಿ ಗೆಲುವಾದರೆ, ಮಂಥರ್ ಗೌಡ ಕೂಡಾ ವಿಜಯದ ಹಾರ ಧರಿಸಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ ಎಂ.ಕೃಷ್ಣಪ್ಪ ವಿಜಯನಗರ ಕ್ಷೇತ್ರದಿಂದ ಹಾಗೂ ಅವರ ಪುತ್ರ ಪ್ರಿಯಾಕೃಷ್ಣ ಅವರು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದರು. ಎಂ. ಕೃಷ್ಣಪ್ಪ ಗೆ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದು ವಿಜಯನಗರದಲ್ಲಿ ಗೆದ್ದಿದ್ದಾರೆ. ಇನ್ನೂ ಅವರ ಮಗ ಪ್ರಿಯಾಕೃಷ್ಣ ಇಬ್ಬರೂ ಗೆಲುವು ಕಂಡಿದ್ದಾರೆ.
ಆಖಾಡಕ್ಳಿಳಿದ ಸಹೋದರರಲ್ಲಿ ಗೆಲುವು-ಸೋಲು ಯಾರಿಗೆ
ಇನ್ನು ಅಪ್ಪ - ಮಕ್ಕಳ ಗೆಲುವಿನ ಬೆನ್ನಲ್ಲೇ ಆಖಾಡಕ್ಳಿಳಿದ ಸಹೋದರರಲ್ಲಿ ಗೆಲುವು-ಸೋಲು ಯಾರಿಗೆ ಎಂದು ನೋಡುವುದಾದರೆ, ಬಿಜೆಪಿಯಿಂದ ಸ್ಪರ್ಧಿಸಿದ್ದ ಕುಮಾರ್ ಬಂಗಾರಪ್ಪಗೆ ಹಿನ್ನಡೆಯಾಗಿದ್ದು, ಸಹೋದರ ಮಧು ಬಂಗಾರಪ್ಪಗೆ ಸೊರಬದಲ್ಲಿ ಜಯ ದೊರಕಿದೆ. ಮಧು ಅವರು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಅದೇ ರೀತಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಎಚ್.ಡಿ.ರೇವಣ್ಣ ತಮ್ಮತಮ್ಮ ಕ್ಷೇತ್ರದಲ್ಲಿ ಗೆಲುವು ಕಂಡಿದ್ದಾರೆ.
ಇನ್ನೂ ಬೆಳಗಾವಿ ಸಹೋದರರಾದ ಸತೀಶ್ ಜಾರಕಿಹೊಳಿ ಯಮಕನಮರಡಿಯಲ್ಲಿ ಕಾಂಗ್ರೆಸ್ ಟಿಕೆಟ್ ನಿಂದ, ರಮೇಶ್ ಜಾರಕಿಹೊಳಿಗೆ ಗೋಕಾಕ್ ನಲ್ಲಿ ಬಿಜೆಪಿ ಟಿಕೆಟಿನಿಂದ, ಅರಭಾವಿಯಲ್ಲಿ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿದ್ದ ಬಾಲಚಂದ್ರ ಜಾರಕಿಹೊಳಿಗೆ ಗೆಲುವಾಗಿದೆ.












Click it and Unblock the Notifications