ಕಲಬುರಗಿ : ಬಿಆರ್ ಪಾಟೀಲ್, ಯಡಿಯೂರಪ್ಪ ಏಟು, ಎದಿರೇಟು!

Posted By: ಕಲಬುರಗಿ ಪ್ರತಿನಿಧಿ
Subscribe to Oneindia Kannada

ಕಲಬುರಗಿ, ಡಿಸೆಂಬರ್ 04 : 'ಅಳಂದ ಶಾಸಕ ಬಿ.ಆರ್.ಪಾಟೀಲ್ ಒಬ್ಬ ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಯಡಿಯೂರಪ್ಪ ಹೆಸರಿನಲ್ಲಿ ಚುನಾವಣೆ ಗೆದ್ದು, ಇಂದು ಸಿದ್ದರಾಮಯ್ಯ ಬಾಲಂಗೋಚಿಯಾಗಿ ಓಡಾಡುತ್ತಿದ್ದಾರೆ' ಎಂದು ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದರು.

ನವ ಕರ್ನಾಟಕ ಪರಿವರ್ತನಾ ಯಾತ್ರೆಯ 23ನೇ ದಿನ ಕಲಬುರಗಿ ಜಿಲ್ಲೆಯ ಅಳಂದಲ್ಲಿ ಬಿಜೆಪಿಯ ಬೃಹತ್ ಸಮಾವೇಶ ನಡೆಯಿತು. ಸಮಾವೇಶ ಉದ್ದೇಶಿಸಿ ಮಾತನಾಡಿದ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕ್ಷೇತ್ರದ ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ಗುಡುಗಿದರು.

ಅಳಂದ ಶಾಸಕ ಬಿ ಆರ್ ಪಾಟೀಲ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ

'ಯಡಿಯೂರಪ್ಪ ಹೆಸರಲ್ಲಿ ಚುನಾವಣೆ ಗೆದ್ದು, ಇಂದು ಸಿದ್ದರಾಮಯ್ಯನ ಬಾಲಂಗೋಚಿಯಾಗಿ ಓಡಾಡುತ್ತಿದ್ದಾರೆ. ಬಿ.ಆರ್.ಪಾಟೀಲ್ ಅವರಿಗೆ ಇನ್ನು ಮುಂದೆ ಮತ ಕೊಡಬೇಡಿ' ಎಂದು ಸಮಾವೇಶದಲ್ಲಿ ಯಡಿಯೂರಪ್ಪ ಕರೆ ನೀಡಿದ್ದರು.

ಬಂಡಾಯದ ಬಿಸಿ, ಬಿಎಸ್‌ವೈ ಭಾಷಣದ ವೇಳೆ ಮೈಕ್ ಕಿತ್ತು ಆಕ್ರೋಶ!

ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ಕೊಟ್ಟಿರುವ ಶಾಸಕ ಬಿ.ಆರ್.ಪಾಟೀಲ್, 'ಮೋಸಗಾರ ನಾನಲ್ಲ ಬದಲಾಗಿ ಯಡಿಯೂರಪ್ಪ' ಎಂದು ಹೇಳಿದ್ದಾರೆ. ಮೊದಲು ಕೆಜೆಪಿಯಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಬಿ.ಆರ್.ಪಾಟೀಲ್ ನಂತರ ಕಾಂಗ್ರೆಸ್ ಸೇರಿದ್ದಾರೆ.

ಬಿಜೆಪಿಗೆ ಸೇರ್ಪಡೆಯಾಗಲಿರುವವರ ಹೆಸರು ಸದ್ಯದಲ್ಲೇ ಪ್ರಕಟ

ಸುಭಾಷ ಗುತ್ತೇದಾರ್ ಪರ ಬ್ಯಾಟಿಂಗ್

ಸುಭಾಷ ಗುತ್ತೇದಾರ್ ಪರ ಬ್ಯಾಟಿಂಗ್

ಬಿಜೆಪಿ ಪರಿವರ್ತನಾ ಯಾತ್ರೆಯ 23ನೇ ದಿನದ ಸಮಾವೇಶ ಅಳಂದ ಪಟ್ಟಣದಲ್ಲಿ ಭಾನುವಾರ ನಡೆಯಿತು. ಶ್ರೀರಾಮ್ ಮಾರ್ಕೇಟ್ ಪ್ರದೇಶದಲ್ಲಿ ನಡೆದ ಸಮಾವೇಶ ಉದ್ದೇಶಿಸಿ ಮಾತನಾಡಿ ಯಡಿಯೂರಪ್ಪ ಅಳಂದ ಶಾಸಕ ಬಿ.ಆರ್.ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸುಭಾಷ ಗುತ್ತೇದಾರ ಪರ ಬ್ಯಾಟಿಂಗ್ ನಡೆಸಿದ್ದರು.

ವಿಶ್ವಾಸ ದ್ರೋಹಿಗೆ ಮತ ನೀಡಬೇಡಿ

ವಿಶ್ವಾಸ ದ್ರೋಹಿಗೆ ಮತ ನೀಡಬೇಡಿ

'ಬಿ.ಆರ್.ಪಾಟೀಲ್ ಒಬ್ಬ ನಂಬಿಕೆ ದ್ರೋಹಿ, ವಿಶ್ವಾಸ ದ್ರೋಹಿ. ಯಡಿಯೂರಪ್ಪ ಹೆಸರಿನಲ್ಲಿ ಚುನಾವಣೆಯಲ್ಲಿ ಗೆದ್ದು, ಇಂದು ಸಿದ್ದರಾಮಯ್ಯನ ಬಾಲಂಗೋಚಿಯಾಗಿ ಓಡಾಡುತ್ತಿದ್ದಾರೆ' ಎಂದು ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದರು.

ಬಿ.ಆರ್.ಪಾಟೀಲ್ ದಿಟ್ಟ ಉತ್ತರ

ಬಿ.ಆರ್.ಪಾಟೀಲ್ ದಿಟ್ಟ ಉತ್ತರ

ಬಿ.ಆರ್.ಪಾಟೀಲ್ ಯಡಿಯೂರಪ್ಪ ಅವರಿಗೆ ತಿರುಗೇಟು ಕೊಟ್ಟಿದ್ದಾರೆ. ‘ಈ ಹಿಂದೆ ಇದೇ ಯಡಿಯೂರಪ್ಪ, ನಮಗೆಲ್ಲಾ ಬಿಜೆಪಿ ಪಕ್ಷದವರು ನನ್ನನ್ನು ಜೈಲಿಗೆ ಕಳಿಸಿದರು. ಅವರನ್ನು ಸುಮ್ಮನೆ ಬಿಡಬಾರದು ಎಂದು ಹೇಳಿ ಕೆಜೆಪಿ ಕಟ್ಟಿದರು. ಆದರೆ, ನಂತರ ನಮಗೆ ಮೋಸ ಮಾಡಿ ಕೆಜೆಪಿ ಬಿಟ್ಟು ಬಿಜೆಪಿ‌ ಸೇರಿದರು. ಮೋಸಗಾರ ಯಾರು? ಯಡಿಯೂರಪ್ಪನವರೇ ಎಂದು ಪ್ರಶ್ನೆ ಮಾಡಿದ್ದಾರೆ'.

ಕೆಜೆಪಿಯಿಂದ ಗೆಲುವು ಸಾಧಿಸಿದ್ದರು

ಕೆಜೆಪಿಯಿಂದ ಗೆಲುವು ಸಾಧಿಸಿದ್ದರು

2013ರ ವಿಧಾನಸಭೆ ಚುನಾವಣೆಯಲ್ಲಿ ಬಿ.ಆರ್.ಪಾಟೀಲ್ ಅವರು ಕೆಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 67,085 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು. ನಂತರ ನಡೆದ ಬೆಳವಣಿಗೆಯಲ್ಲಿ ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸ್ ಆಗಿದ್ದರು.

ಕಾಂಗ್ರೆಸ್ ಸೇರಿದ ಬಿ.ಆರ್.ಪಾಟೀಲ್

ಕಾಂಗ್ರೆಸ್ ಸೇರಿದ ಬಿ.ಆರ್.ಪಾಟೀಲ್

ಯಡಿಯೂರಪ್ಪ ಬಿಜೆಪಿಗೆ ಮರಳಿದರೂ ಬಿ.ಆರ್.ಪಾಟೀಲ್ ಕೆಜೆಪಿ ಪಕ್ಷದ ಶಾಸಕರಾಗಿಯೇ ಗುರುತಿಸಿಕೊಂಡಿದ್ದರು. 2017ರ ಜೂನ್‌ನಲ್ಲಿ ಅವರು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿಯೇ ಅವರು 2018ರ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP 23rd day Nava Karnataka Parivarthana Yatra in Aland, Kalaburagi on December 3, 2017. Verbal war between Aland MLA B.R.Patil and B.S.Yeddyurappa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ