ಕಲಬುರಗಿ: ಹಣ ಕದ್ದಳೆಂದು ಸೊಸೆಯನ್ನ ಬೆಂಕಿ ಹಚ್ಚಿ ಕೊಂದ್ರು
ಕಲಬುರಗಿ, ಸೆಪ್ಟೆಂಬರ್ 11 : ಮನೆಯಲ್ಲಿದ್ದ 2 ಸಾವಿರ ರು. ಕದ್ದಿದ್ದಾಳೆಂದು ಸೊಸೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಅಮಾನುಷ ಘಟನೆ ಕಲಬುರಗಿಯ ದೇವಲನಾಯಕ ತಾಂಡಾದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಕಳ್ಳತನ ಆರೋಪ ಮಾಡಿದ್ದಾಳೆಂದು ಪೂಜಾ ಎನ್ನುವ ಯುವತಿಗೆ ಗಂಡ ಮತ್ತು ಅತ್ತಿಗೆ ಸೇರಿ ಬೆಂಕಿ ಹಚ್ಚಿದ್ದಾರೆ. ಗಾಯಗೊಂಡ ಪೂಜಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ತಡರಾತ್ರಿ ಪೂಜಾ ಸಾವನಪ್ಪಿದ್ದಾರೆ.

ಪೂಜಾ ಅವರ ತಾಯಿಯ ದೂರಿನ ಮೇರೆಗೆ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಗಂಡ ತಾರಾಸಿಂಗ್ ಮತ್ತು ಆತನ ತಾಯಿ ಗೋಮಲಾಬಾಯಿ ವಿರುದ್ಧ ದೂರು ದಾಖಲಾಗಿದೆ. ಆರೋಪಿ ತಾರಾಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.
#PregnantWoman identified as Pooja set ablaze by her husband & mother-in-law for allegedly stealing Rs 2000 in #Kalaburagi. Accused missing. pic.twitter.com/mq4HQJWfPn
— NEWS9 (@NEWS9TWEETS) September 11, 2017












Click it and Unblock the Notifications