• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನು ಸಿಎಂ ಆಗುವುದನ್ನು ಮೂರು ಬಾರಿ ತಪ್ಪಿಸಲಾಗಿದೆ: ಖರ್ಗೆ

|

ಕಲಬುರಗಿ, ಏಪ್ರಿಲ್ 12: ನಾನು ಸಿಎಂ ಆಗುವ ಅವಕಾಶ ಮೂರು ಬಾರಿ ತಪ್ಪಿಸಲಾಯಿತು, ಆದರೆ ನಾನು ಪಕ್ಷಕ್ಕೆ ನಿಷ್ಟವಾಗಿ ಇದ್ದೆ ಎಂದು ಹಿರಿಯ ಕಾಂಗ್ರೆಸ್ಸಿಗ, ಸಂಸದ ಮಲ್ಲಿಕಾರ್ಜುನ ಖರ್ಗೆ ಇಂದು ಹೇಳಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕಲಬುರಗಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ನನಗೆ ಪಕ್ಷ ಮತ್ತು ಸಿದ್ಧಾಂತಗಳು ಮುಖ್ಯವಾಗಿದ್ದವು, ಆದರೆ ನಮ್ಮದೇ ಪಕ್ಷದಿಂದ ಹೊರಹೋದವರು, ಸಂವಿಧಾನ ವಿರೋಧಿ ಪಕ್ಷದ ಜೊತೆ ಸೇರಿಕೊಂಡು, ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದಿದ್ದಾರೆ.

ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಪರಿಚಯ

ನಾನು ಮಾಡಿದ ಅಭಿವೃದ್ಧಿ ಕಾರ್ಯಗಳೇ ನನ್ನು 11 ಬಾರಿ ಗೆಲ್ಲುವಂತೆ ಮಾಡಿವೆ, ಆದ್ದರಿಂದಲೇ ಮೋದಿಯೇ ಇಲ್ಲಿಗೆ ಬಂದರೂ ನನ್ನ ವಿರುದ್ಧ ಮಾತನಾಡಲಿಲ್ಲ, ಆದರೆ ಮೋದಿಯ ಇಲ್ಲಿನ ಮರಿಗಳು ನನ್ನ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದರು.

ನನ್ನನ್ನು ಸೋಲಿಸಲು ಗುಂಪು ಗೂಡಿರುವವರು, ಸ್ವತಃ ತಾವೇ ಸೋತಿದ್ದಾರೆ. ಇಂತಹ ಸೋತಿರುವ ಗುಂಪು ಸೇರಿಕೊಂಡು ನನ್ನನ್ನು ಸೋಲಿಸಲು ಯತ್ನಿಸುತ್ತಿದ್ದಾರೆ ಎಂದು ಖರ್ಗೆ ಎದುರಾಳಿಗಳ ಬಗ್ಗೆ ವ್ಯಂಗ್ಯವಾಡಿದರು.

ನನ್ನನ್ನು ಸೋಲಿಸಲು ಭಾರಿ ರಣತಂತ್ರ ಹೆಣೆಯಲಾಗುತ್ತಿದೆ: ಖರ್ಗೆ

ಪ್ರಧಾನಿ ಮೋದಿ ದೇಶಪ್ರೇಮದ ಮಾತನ್ನಾಡುತ್ತಾರೆ ಆದರೆ, ಕಾಂಗ್ರೆಸ್‌ ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಾಗ ಮೋದಿ ಇನ್ನೂ ಹುಟ್ಟಿಯೇ ಇರಲಿಲ್ಲ, ದೇಶದ ಐಕ್ಯತೆಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮಾರಕವಾಗಲಿದೆ ಆದ್ದರಿಂದ ಅಂತಹಾ ಶಕ್ತಿಗಳನ್ನು ಸೋಲಿಸಬೇಕು ಎಂದು ಖರ್ಗೆ ಹೇಳಿದರು.

English summary
Congress leader Mallikarjun Kharge said three times i miss the opurtunity to become CM, but i did not leave the party, because i belive in congress parties agenda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X