ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನನ್ನನ್ನು ಟೀಕಿಸುವುದಕ್ಕೆ ಮೋದಿ ಬಳಿ ಏನೂ ಇಲ್ಲ: ಖರ್ಗೆ

|
Google Oneindia Kannada News

Recommended Video

ನನ್ನನ್ನು ಟೀಕಿಸುವುದಕ್ಕೆ ಮೋದಿ ಬಳಿ ಏನೂ ಇಲ್ಲ: ಖರ್ಗೆ..! | Oneindia Kannada

ಕಲಬುರಗಿ, ಮಾರ್ಚ್‌ 07: ನರೇಂದ್ರ ಮೋದಿ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಕ್ಷೇತ್ರಕ್ಕೆ ಬಂದರೂ ಅವರ ವಿರುದ್ಧ ಒಂದು ಮಾತೂ ಆಡದೆ ಇರುವ ಬಗ್ಗೆ ಖರ್ಗೆ ಅವರು ಪ್ರತಿಕ್ರಿಯಿಸಿದ್ದಾರೆ.

ನನ್ನ ವಿರುದ್ಧ ಮಾತನಾಡಲು ಮೋದಿ ಬಳಿ ಏನೂ ವಿಷಯವಿಲ್ಲ ಹಾಗಾಗಿ ಅವರು ನನ್ನ ವಿರುದ್ಧ ಮಾತನಾಡಿಲ್ಲ ಎಂದು ಖರ್ಗೆ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

'ರಿಮೋಟ್ ಕಂಟ್ರೋಲ್ ಸಿಎಂ' ಎಂದ ಮೋದಿಯ ಕಾಲೆಳೆದ ಸಿದ್ದರಾಮಯ್ಯ 'ರಿಮೋಟ್ ಕಂಟ್ರೋಲ್ ಸಿಎಂ' ಎಂದ ಮೋದಿಯ ಕಾಲೆಳೆದ ಸಿದ್ದರಾಮಯ್ಯ

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆ ವಿರುದ್ಧ ಮಾತನಾಡಿದರೆ ಇಲ್ಲಿಯ ಜನ ತಿರುಗಿ ಬೀಳುತ್ತಾರೆ ಎಂಬುದು ಮೋದಿಗೆ ಗೊತ್ತಿದೆ. ಖರ್ಗೆ ಹೆಸರು ಹೇಳಿದರೆ ಅಭಿವೃದ್ಧಿಯೇ ಕಣ್ಣ ಮುಂದೆ ಬರುತ್ತದೆ ಹಾಗಾಗಿ ಮೋದಿ ಸುಮ್ಮನೆ ಹೋಗಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

There is nothing negative about me to tell: Mallikarjun Kharge

ದೇಶದ ಪ್ರಧಾನಿಯೇ ಕಲಬುರಗಿಗೆ ಬರುತ್ತಿದ್ದಾರೆ, ಈ ಕಲ್ಲಿನ ನಾಡನ್ನು ಚಿನ್ನದ ನಾಡು ಮಾಡುತ್ತಾರೆ ಎಂದುಕೊಂಡಿದ್ದೆ, ಆದರೆ ಅವರು ಬರಿಗೈಲಿ ಬಂದು, ಬರಿಗೈಲಿ ಹೋದರು ಎಂದು ಖರ್ಗೆ ಅವರು ವ್ಯಂಗ್ಯ ಮಾಡಿದರು.

ಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿಕುಮಾರಸ್ವಾಮಿ ರಿಮೋಟ್ ಕಂಟ್ರೋಲ್ ಸಿಎಂ : ಮೋದಿ

ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿ ರಿಪೇರಿ, ರಿಂಗ್ ರಸ್ತೆ, ವಿಮಾನ ನಿಲ್ದಾಣ, ನಿಮ್ಜ್‌ ಇನ್ನೂ ಹಲವು ಕೆಲಸಗಳು ಬಾಕಿ ಉಳಿದಿವೆ. ನಮ್ಮ ಕ್ಷೇತ್ರದ ಫೈಲುಗಳನ್ನು ಬದಿಗೆ ಇಡಲಾಗಿದೆ. ಆದರೆ ಬೆಂಗಳೂರು, ರಾಯಚೂರು, ಹುಬ್ಬಳ್ಳಿಗೆ ಮಂಜೂರಾದ ಕಾಮಗಾರಿಗಳಿಗೆ ಇಲ್ಲಿ ಶಂಕುಸ್ಥಾಪನೆ ಮಾಡಲಾಗಿದೆ. ಅಲ್ಲಿಯೇ ಶಂಕುಸ್ಥಾಪನೆ ಯಾಕೆ ಮಾಡಲಿಲ್ಲ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

English summary
Mallikarjun Kharge said 'there is nothing negative about me to tell'. He replies to media who ask 'why did not talk about you in Kalaburagi'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X