• search
  • Live TV
ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶೀಘ್ರ ಬೆಂಗಳೂರು-ಕಲಬುರಗಿ-ತಿರುಪತಿ ನಡುವೆ ವಿಮಾನ ಹಾರಾಟ

|
Google Oneindia Kannada News

ಕಲಬುರಗಿ, ನವೆಂಬರ್ 07 : ಕಲಬುರಗಿ ಜಿಲ್ಲೆಯ ಜನರಿಗೆ ಸ್ಟಾರ್ ಏರ್ ಸಿಹಿ ಸುದ್ದಿ ಕೊಟ್ಟಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ಸಂಚಾರಕ್ಕೆ ನವೆಂಬರ್ 1ರಂದು ಒಪ್ಪಿಗೆ ಸಿಕ್ಕಿತ್ತು.

ಸ್ಟಾರ್ ಏರ್ ಬೆಂಗಳೂರು- ಕಲಬುರಗಿ-ತಿರುಪತಿ ನಡುವೆ ಶೀಘ್ರದಲ್ಲೇ ವಿಮಾನ ಸೇವೆಯನ್ನು ಆರಂಭಿಸಲಿದೆ. ಉಡಾನ್ ಯೋಜನೆಯಡಿ ಕಲಬುರಗಿ ವಿಮಾನ ನಿಲ್ದಾಣ ಸೇರ್ಪಡೆಗೊಂಡಿದೆ.

ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ ಕಲಬುರಗಿ-ಬೀದರ್ ರೈಲು ಮಾರ್ಗ ವಿದ್ಯುತೀಕರಣಕ್ಕೆ ಒಪ್ಪಿಗೆ

"ಬೆಂಗಳೂರು-ಕಲಬುರಗಿ-ತಿರುಪತಿ ನಡುವಿನ ವಿಮಾನ ಸೇವೆಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿಯನ್ನು ಆಹ್ವಾನಿಸಲಾಗಿದೆ" ಎಂದು ಸ್ಟಾರ್ ಏರ್ ಸಂಸ್ಥಾಪಕ ಸಂಜಯ್ ಘೋಡಾವತ್ ಹೇಳಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣ ಎಎಐಗೆ ಹಸ್ತಾಂತರ, ಶೀಘ್ರದಲ್ಲೇ ಸಂಚಾರ ಕಲಬುರಗಿ ವಿಮಾನ ನಿಲ್ದಾಣ ಎಎಐಗೆ ಹಸ್ತಾಂತರ, ಶೀಘ್ರದಲ್ಲೇ ಸಂಚಾರ

175.57 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ. ನವೆಂಬರ್ 1 ರಿಂದಲೇ ವಾಣಿಜ್ಯ ಸಂಚಾರ ಆರಂಭಿಸಲು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಿಗೆ ನೀಡಿತ್ತು.

ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿಗೆ ಆಹ್ವಾನಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಮೋದಿಗೆ ಆಹ್ವಾನ

2018ರ ಆಗಸ್ಟ್‌ 26ರಂದು ಪ್ರಾಯೋಗಿಕವಾಗಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಹಾರಾಟ ನಡೆಸಲಾಗಿತ್ತು. 742.23 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲಾಗಿದೆ.

ಏರ್ ಬಸ್‌ ನಂತಹ ಬೃಹತ್ ವಿಮಾನಗಳು ಸಹ ಬಂದಿಳಿಯಲು ಅನುಕೂಲವಾಗುವಂತೆ 3,725 ಉದ್ದದ ರನ್‌ ವೇಯನ್ನು ಕಲಬುರಗಿ ವಿಮಾನ ನಿಲ್ದಾಣದಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಟಾರ್ ಏರ್ ವಿಮಾನ ಮೊದಲ ಬಾರಿಗೆ ಇಲ್ಲಿಂದ ಸಂಚಾರ ನಡೆಸುವ ಸಾಧ್ಯತೆ ಇದೆ.

English summary
Soon Star air will start flight service between Bengaluru Kalaburagi Tirupathi Soon. Union govt will approved for commercial service in Kalaburagi airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X