'ಜೆಡಿಎಸ್'ಬಿಟ್ಟು ನಾನು ಹೊರಬಂದಿಲ್ಲ:ಆರ್ ಅಶೋಕ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದು

Recommended Video

      ಮೈತ್ರಿ ಸರ್ಕಾರದ ಹೀಗೆ ಮಾತನಾಡಿದ್ರಾ ಸಿದ್ದರಾಮಯ್ಯ | Oneindia Kannada

      ಕಲಬುರ್ಗಿ, ಮೇ 11:ಜೆಡಿಎಸ್ ಪಕ್ಷ ಬಿಟ್ಟು ನಾನು ಹೊರಬಂದಿಲ್ಲ, ಅಹಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇವೇಗೌಡರೇ ನನ್ನನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕಲಬುರ್ಗಿಯಲ್ಲಿ ಹೇಳಿದರು.

      ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

      ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷ ಜಾಧವ್ ಗೆ ಎಲ್ಲವೂ ನೀಡಿದರೂ ಪಕ್ಷ ಬಿಡುವ ಮೂಲಕ ಪಕ್ಷಕ್ಕೆ ಅನ್ಯಾಯ ಮಾಡಿದ್ದಾರೆ ಎಂದರು.

      ಉಪಚುನಾವಣೆ ನಂತರ 20 ಶಾಸಕರು ಏನು ಬೇಕಾದ್ರೂ ನಿರ್ಣಯ ತೆಗೆದುಕೊಳ್ಳಬಹುದು ಎನ್ನುವ ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿಯವರು ಹತಾಷರಾಗಿ ಈ ಮಾತು ಹೇಳುತ್ತಿದ್ದಾರೆ. ಅಧಿಕಾರದ ಆಸೆ ತೋರಿಸಿ, ದುಡ್ಡಿನ ಆಮಿಷ ಮೂಡಿಸಿ, ಬಲವಂತ ಮಾಡಿ ಶಾಸಕರನ್ನು ಸೆಳೆಯಲು ಪ್ರಯತ್ನ ಮಾಡಿ ಸೋತಿದ್ದಾರೆ ಎಂದು ಆರೋಪಿಸಿದರು.

      Siddaramaiah responded to R. Ashokas comment

      ಬಿಜೆಪಿಯವರ ಈ ಪ್ರಯತ್ನಗಳಿಗೆ ನಮ್ಮ ಯಾವ ಶಾಸಕರೂ ಸೊಪ್ಪು ಹಾಕಿಲ್ಲ ಎಂದ ಸಿದ್ದರಾಮಯ್ಯ,ಶಾಸಕರಿಗೆ ಈ ರೀತಿ ಕೊಡಲು ಇವರಿಗೆ ದುಡ್ಡು ಆದ್ರೂ ಎಲ್ಲಿಂದ ಬಂದಿದೆ? ನರೇಂದ್ರ ಮೋದಿ, ಅಮಿತ್ ಷಾ , ಯಡಿಯೂರಪ್ಪ ಈ ಬಗ್ಗೆ ಉತ್ತರ ನೀಡಲಿ, ಯಡಿಯೂರಪ್ಪಗೆ ರಾಜ್ಯಪಾಲರು ಒಂದು ಬಾರಿ ಸರಕಾರ ರಚನೆಗೆ ಅವಕಾಶ ಕೊಟ್ಟಿರಲಿಲ್ಲವಾ ?ಬಹುಮತ ಸಾಬೀತು ಮಾಡಿದ್ರಾ? ಎಂದು ಪ್ರಶ್ನಿಸಿದರು.

      ಮೂರೇ ಮೂರು ದಿನದಲ್ಲಿ ಮನೆಗೆ ಹೋದ್ರಿ, ಈಗ ಪದೇ ಪದೇ 20 ಶಾಸಕರು ಬರ್ತಾರೆ ಅನ್ನೋಕೆ ನಾಚಿಕೆ ಆಗಲ್ವಾ? ಮತ್ತೆ 20 ಶಾಸಕರು ಬರ್ತಾರೆ ಅಂತಿದಾರೆ ಥೂ ನಾಚಿಕೆ ಆಗಬೇಕು ಇವರಿಗೆ ಎಂದು ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ರೇಗಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+