'ಶಕ್ತಿ' ಯೋಜನೆ ಮಹಿಳಾ ಪ್ರಯಾಣಿಕರಿಗೆ ಗುಡ್ ನ್ಯೂಸ್
ಕಲಬುರಗಿ, ನವೆಂಬರ್ 14: ಕರ್ನಾಟಕದ ಕಾಂಗ್ರೆಸ್ ಸರ್ಕಾರದ 'ಶಕ್ತಿ' ಯೋಜನೆಯಡಿ ಸಂಚಾರ ನಡೆಸುವ ಪ್ರಯಾಣಿಕರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗ ಗುಡ್ ನ್ಯೂಸ್ ನೀಡಿದೆ. ಜೂನ್ ತಿಂಗಳಿನಲ್ಲಿ ಜಾರಿಗೆಗ ಬಂದಿರುವ ಉಚಿತ ಬಸ್ ಪ್ರಯಾಣ ಯೋಜನೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಈ ಕುರಿತು ಆದೇಶ ಹೊರಡಿಸಿದ್ದಾರೆ. ಈ ಆದೇಶ ಮಹಿಳೆಯರು ಉಚಿತವಾಗಿ ಪ್ರಯಾಣಿಸುವ 'ಶಕ್ತಿ ಯೋಜನೆ'ಯ ಪರಿಣಾಮಕಾರಿ ಜಾರಿಯ ಕುರಿತು ಎಂಬ ವಿಚಾರ ಒಳಗೊಂಡಿದೆ. ದಿನಾಂಕ 5/06/2023ರ ಆದೇಶ, ಸಾಮಾನ್ಯ ಸ್ಥಾಯಿ ಆದೇಶ ದಿನಾಂಕ 7/06/2023, ಸಂ/ ಕಕರಸಾ/ ಕೇಕ/ ಸಂ/ 910/23-24 ದಿನಾಂಕ 12/06/2023 ಮತ್ತು ಸಂ/ ಕರಾಸಾ/ ಕೇಕ/ ಸಂ/ ಸಾ/ ಎಸ್.ವೈ-4/2849/23-24 ದಿನಾಂಕ 03/11/2023 ಉಲ್ಲೇಖ ಮಾಡಲಾಗಿದೆ.

ಆದೇಶದ ವಿವರಗಳು; ಕರ್ನಾಟಕ ಸರ್ಕಾರವು 'ಶಕ್ತಿ ಯೋಜನೆ'ಯಡಿ ರಾಜ್ಯದ ಎಲ್ಲಾ ಮಹಿಳಾ ಪ್ರಯಾಣಿಕರಿಗೆ ನಿಗಮದ ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಸಾಮಾನ್ಯ ಸ್ಥಾಯಿ ಆದೇಶ ದಿನಾಂಕ 07/06/2023ರಲ್ಲಿ ಅವಕಾಶವನ್ನು ಕಲ್ಪಿಸಿದ್ದು ಹಾಗೂ ತಿದ್ದುಪಡಿ ಆದೇಶದಲ್ಲಿ ಸದರಿ ಉಚಿತ ಪ್ರಯಾಣಕ್ಕಾಗಿ ಮಹಿಳಾ ಪ್ರಯಾಣಿಕರು ಮೂಲ ನಕಲು/ ಡಿಜಿಲಾಕರ್ (Digilocker) ಹಾರ್ಡ್ ಮತ್ತು ಸಾಫ್ಟ್ ಕಾಪಿ) ಮಾದರಿಯಲ್ಲಿ ತೋರಿಸಿದಲ್ಲಿ ಹಾಜರುಪಡಿಸಿದಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ತಿಳಿಸಲಾಗಿರುತ್ತದೆ.
ಆದಾಗ್ಯೂ ಸಹ ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಅಧಿಕೃತ ಗುರುತಿನ ಚೀಟಿ ತೋರಿಸಿದಾಗ್ಯೂ ಸಹ ಮೊಬೈಲ್‌ನಲ್ಲಿನ ಗುರುತಿನ ಚೀಟಿ ನಡೆಯುವುದಿಲ್ಲ ಎಂದು ಕೆಲವು ನಿರ್ವಾಹಕರು ಅನಾವಶ್ಯಕವಾಗಿ ಮಹಿಳಾ ಪ್ರಯಾಣಿಕರಿಗೆ ತೊಂದರೆಯುಂಟು ಮಾಡುತ್ತಿರುವ ಬಗ್ಗೆ ಪದೇ ಪದೇ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.
ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ಸರ್ಕಾರದ ಉಲ್ಲೇಖಿತ ಆದೇಶಗಳಲ್ಲಿ ತಿಳಿಸಿರುವಂತೆ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ ಶೂನ್ಯ ಮೊತ್ತದ ಮಹಿಳಾ ಟಿಕೆಟ್ ವಿತರಿಸಲು ಮತ್ತೊಮ್ಮೆ ಎಲ್ಲಾ ನಿರ್ವಾಹಕರಿಗೆ ತಿಳುವಳಿಕೆ ನೀಡಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಆಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಕ್ರಮ ವಹಿಸುವಂತೆ ಮುಖ್ಯ ಸಂಚಾರ ವ್ಯವಸ್ಥಾಪಕರು (ಕಾ), ಕ.ರಾ.ರ.ಸಾ.ನಿಗಮ, ಕೇಂದ್ರ ಕಛೇರಿ, ಬೆಂಗಳೂರು ಅವರು ತಿಳಿಸಿರುತ್ತಾರೆ ಎಂದು ಹೇಳಿದೆ.
ಮಹಿಳಾ ಪ್ರಯಾಣಿಕರು ಮೊಬೈಲ್‌ನಲ್ಲಿ ತೋರಿಸುವ ಯಾವುದಾದರೂ ಒಂದು ಅಧಿಕೃತ ಗುರುತಿನ ಚೀಟಿಯನ್ನು ಪರಿಗಣಿಸಿ, ಶೂನ್ಯ ಮೊತ್ತದ ಮಹಿಳಾ ಟಿಕೆಟ್ ವಿತರಿಸಲು ಮತ್ತೊಮ್ಮೆ ಎಲ್ಲಾ ನಿರ್ವಾಹಕರಿಗೆ ಸೂಕ್ತ ತಿಳುವಳಿಕೆ ನೀಡಲು ಹಾಗೂ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣಕ್ಕೆ ಅಡಚಣೆಯಾಗದಂತೆ ಹಾಗೂ ದೂರುಗಳಿಗೆ ಆಸ್ಪದ ನೀಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಈ ಮೂಲಕ ಸೂಚಿಸಲಾಗಿದೆ ಎಂದು ಆದೇಶದಲ್ಲಿ ವಿವರಣೆ ನೀಡಲಾಗಿದೆ.
ಈ ಬಗ್ಗೆ ದೂರುಗಳು ಸ್ವೀಕೃತಗೊಂಡಲ್ಲಿ ಗಂಭೀರವಾಗಿ ಪರಿಗಣಿಸಿ ಸಂಬಂಧಪಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಎಂದು ಆದೇಶದಲ್ಲಿ ಹೇಳಿದೆ. ಈ ಕುರಿತು ವಿಭಾಗೀಯ ನಿಯಂತ್ರಣಾಧಿಕಾರಿಗಳು ಕ.ಕ.ರ.ಸಾ.ನಿಗಮ ಕಲಬುರಗಿ ವಿಭಾಗ-1/ ವಿಭಾಗ-2/ ಬೀದರ್/ ಯಾದಗಿರಿ/ ರಾಯಚೂರು/ ಕೊಪ್ಪಳ/ ಬಳ್ಳಾರಿ/ ಹೊಸಪೇಟೆ/ ವಿಜಯಪುರ ಇವರಿಗೆ ಮಾಹಿತಿ ನೀಡಲಾಗಿದೆ.
ಕರ್ನಾಟಕ ಸರ್ಕಾರ 'ಶಕ್ತಿ' ಯೋಜನೆಯಡಿ ಸಂಚಾರ ನಡೆಸುವ ಮಹಿಳಾ ಪ್ರಯಾಣಿಕರಿಗೆ ಇನ್ನೂ ಸ್ಮಾರ್ಟ್ ಕಾರ್ಡ್ ನೀಡಿಲ್ಲ. ಸ್ಮಾರ್ಟ್ ಕಾರ್ಡ್ ನೀಡುವ ತನಕ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ತೋರಿಸಿ ಪ್ರಯಾಣಿಸಲು ಅವಕಾಶ ನೀಡಿದೆ. ಪ್ರಯಾಣಿಕರು ಮೂಲ ಪ್ರತಿಯನ್ನು ನೀಡಬಹುದು ಅಥವ ಮೊಬೈಲ್‌ನಲ್ಲಿರುವ ಡಿಜಿಟಲ್ ಪ್ರತಿಯನ್ನು ಸಹ ತೋರಿಸಿ ಸಂಚಾರ ನಡೆಸಬಹುದಾಗಿದೆ.












Click it and Unblock the Notifications