ಮತ್ತೆ ಮೋದಿ ಹೆಸರಲ್ಲಿ ಮತ ಕೇಳಿದರೆ ಬಾಯಲ್ಲಿ ಬೂಟ್ ಹಾಕ್ತೀವಿ: ಮುತಾಲಿಕ್

ಕಲಬುರಗಿ, ಜುಲೈ 4: ಪ್ರತಿ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿನಲ್ಲಿ ಚುನಾವಣೆ ಪ್ರಚಾರ ನಡೆಸಿ ಗೆಲ್ಲುವ ರಾಜ್ಯ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ವಿರಾಟ್ ಹಿಂದೂ ಸಮಾವೇಶದಲ್ಲಿ ಮಾತನಾಡಿದ ಅವರು, ಬಿಜೆಪಿ ಸಂಸದರ ವಿರುದ್ಧ ನಾಲಿಗೆ ಹರಿಬಿಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.

ಇನ್ನಾದರೂ ಐದು ವರ್ಷ ಕೆಲಸ ಮಾಡಿ. ಮುಂದಿನ ಬಾರಿಯೂ ಮೋದಿ ಅವರ ಹೆಸರು ಹೇಳಿದರೆ ಬಾಯಲ್ಲಿ ಬೂಟ್ ಹಾಕುತ್ತೇವೆ ಎಂದು ಮುತಾಲಿಕ್ ಹೇಳಿದ್ದಾರೆ.

Pramod muthalik shove shoes into the mouth of BJP MPs if they use Modi name again

'ಐದಾರು ಗೆಲ್ಲುತ್ತೀರಿ, ಇಪ್ಪತ್ತೈದು ವರ್ಷ ಒಂದು ಜಿಲ್ಲೆಯನ್ನಾಳುತ್ತೀರಿ. ನಾಚಿಕೆ ಬರುವುದಿಲ್ಲ ನಿಮಗೆ? ನಿರ್ಲಜ್ಜರು ನೀವು. ಈಗ ಹೇಳಬೇಕು ಅವರಿಗೆ ಮೋದಿ ಅವರ ಮುಖ ನೋಡಿ, ಮೋದಿ ಅವರ ಗಂಡಸ್ತನ ನೋಡಿ, ಮೋದಿ ಅವರ ಹಿಂದುತ್ವದ ವಿಚಾರ ನೋಡಿ ನಾವು ಅವರಿಗೆ ವೋಟ್ ಹಾಕಿದ್ದೇವೆ. ಈ ಐದು ವರ್ಷ ಬಾಯಿಮುಚ್ಚಿಕೊಂಡು ಕೆಲಸ ಮಾಡಿ. ಮುಂದಿನ ಸಲ ಏನಾದರೂ ಮೋದಿ ಎಂದರೆ ಬಾಯಲ್ಲಿ ಬೂಟ್ ಹಾಕ್ತೇವೆ ಎಂಬ ಎಚ್ಚರಿಕೆಯನ್ನು ಅವರಿಗೆ ಕೊಡಬೇಕಿದೆ' ಎಂದು ಹೇಳಿದ್ದಾರೆ.

ಮುತಾಲಿಕ್ ಅವರು ಇತ್ತೀಚೆಗಷ್ಟೇ ತಾವು ರಾಜಕೀಯದಿಂದ ದೂರ ಸರಿದಿರುವುದಾಗಿ ತಿಳಿಸಿದ್ದರು. ಇತ್ತೀಚಿನ ದಿನಗಳಲ್ಲಿ ರಾಜಕೀಯವಾಗಿ ನೆಲೆ ಕಂಡುಕೊಳ್ಳುವುದು ಕಷ್ಟ. ಪಕ್ಷೇತರರಾಗಿ ಗೆದ್ದರೂ ಯಾರಿಗೂ ಸಹಾಯ ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+