ಕಲಬುರಗಿಗೆ ಹೋಗುವಂತಿಲ್ಲ ಪ್ರಮೋದ್ ಮುತಾಲಿಕ್
ಕಲಬುರಗಿ, ನವೆಂಬರ್ 08 : ಇನ್ನು 15 ದಿನಗಳ ಕಾಲ ಕಲಬುರಗಿ ಪ್ರವೇಶಿಸದಂತೆ ಶ್ರೀರಾಮ ಸೇನೆ ನಾಯಕ ಪ್ರಮೋದ್ ಮುತಾಲಿಕ್ ಗೆ ಜಿಲ್ಲಾಧಿಕಾರಿ ನಿರ್ಭಂಧ ಹೇರಿದ್ದಾರೆ.
ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸ್ಥಿತಿ ಇದ್ದು, ಪ್ರಮೋದ್ ಮುತಾಲಿಕ್ ಆಗಮನದಿಂದ ಪರಿಸ್ಥಿತಿ ಬಿಗಡಾಯಿಸಿ, ಕೋಮುಸೌಹಾರ್ಧ ಹದಗೆಡುವ ಸಾಧ್ಯತೆ ಇರುವ ಕಾರಣ ಜಿಲ್ಲಾಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ. ಕಾನೂನು ಸುವ್ಯವಸ್ಥೆಗೆ ಭಂಗ ಬಾರದಂತೆ ಕಾರ್ಯಕ್ರಮ ನಡೆಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಶ್ರಿರಾಮ ಸೇನೆ ಅಧ್ಯಕ್ಷ ಪ್ರಮೋಧ್ ಮುತಾಲಿಕ್ ಅವರು ಟಿಪ್ಪುಜಯಂತಿಗೆ ತೀರ್ವ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಘಟನೆ ಮೂಲಕ ರಾಜ್ಯಾದ್ಯಂತ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವುದಾಗಿ ಹೇಳಿಕೆ ನೀಡಿದ್ದರು.
ಪ್ರಮೋದ್ ಮುತಾಲಿಕ್ ಅವರಿಗೆ ಈ ರೀತಿಯ ನಿಷೇಧಗಳು ಹೊಸದೇನಲ್ಲ ಹಿಂದೆ ಅನೇಕ ಭಾರಿ ಕರಾವಳಿ ಜಿಲ್ಲೆಗಳು, ಮೈಸೂರು ಮುಂತಾದ ಜಿಲ್ಲೆಗಳಿಗೆ ಪ್ರವೇಶಿಸದಂತೆ ಅವರಿಗೆ ನಿಷೇಧ ಹೇರಲಾಗಿತ್ತು.
ಪೋಲೀಸರ ಭದ್ರಗಾವಲಿನಲ್ಲಾದರೂ ಟಿಪ್ಪು ಜಯಂತಿ ಜಯಂತಿಯನ್ನು ಆಚರಿಸಿಯೇ ತೀರುವುದಾಗಿ ಪಣತೊಟ್ಟಿರುವ ರಾಜ್ಯ ಸರ್ಕಾರ ಅನೇಕ ಕಠಿಣ ನಿರ್ಧಾರಗಳನ್ನು ತಳೆಯುತ್ತಿದೆ, ಅನೇಕ ಜಿಲ್ಲೆಗಳಲ್ಲಿ ನಿಷೇಧಾಜ್ಞೆಗಳನ್ನು ಜಾರಿ ಮಾಡಿ ಟಿಪ್ಪು ಜಯಂತಿಯಂದು ಕಾನೂನು ಸುವ್ಯವಸ್ಥೆಗೆ ಭಂಗವಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತಗಳು ಹರಸಾಹಸ ಪಡುತ್ತಿವೆ.












Click it and Unblock the Notifications