ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಲಬುರಗಿಯಲ್ಲಿ 2018ರ ಮೊದಲ ಶೂಟೌಟ್, ರೌಡಿಶೀಟರ್ ಆಸ್ಪತ್ರೆ ಬೆಡ್ ಮೇಲೆ

By ಕಲಬುರಗಿ ಪ್ರತಿನಿಧಿ
|
Google Oneindia Kannada News

ಕಲಬುರಗಿ, ಜನವರಿ 10: ಹೊಸ ವರ್ಷದಲ್ಲಿ ಕಲಬುರಗಿಯಲ್ಲಿ ಮತ್ತೊಮ್ಮೆ ಗುಂಡು ಹಾರಿದೆ. ಇಲ್ಲಿನ ಪೊಲೀಸರು ಹಾರಿಸಿದ ಗುಂಡಿಗೆ ರೌಡಿಯೊಬ್ಬನ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆ ಬೆಡ್ ನಲ್ಲಿ ಬ್ರೆಡ್- ಹಣ್ಣು ತಿನ್ನುವಂತಾಗಿದ್ದಾನೆ.

ಕಲಬುರಗಿಯಲ್ಲಿ ಕುಖ್ಯಾತ ಸುಪಾರಿ ಹಂತಕನ ಮೇಲೆ ಬೆಳ್ಳಂಬೆಳಗ್ಗೆ ಫೈರಿಂಗ್ಕಲಬುರಗಿಯಲ್ಲಿ ಕುಖ್ಯಾತ ಸುಪಾರಿ ಹಂತಕನ ಮೇಲೆ ಬೆಳ್ಳಂಬೆಳಗ್ಗೆ ಫೈರಿಂಗ್

ಕಲಬುರಗಿ ನಗರದಲ್ಲಿ ಬುಧವಾರ ಬೆಳ್ಳಂಬೆಳಗ್ಗೆ ಶೂಟೌಟ್ ನಡೆದಿದ್ದು, ಪೊಲೀಸರು ರೌಡಿಯೊಬ್ಬನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ನಗರದ ಹೊರವಲಯದ ಕೆಸರಟಗಿ ಗಾರ್ಡನ್ ಹತ್ತಿರ ಶೂಟೌಟ್ ನಡೆದಿದ್ದು, ಕಡಬೂರು ಮಲ್ಯಾ ಅಲಿಯಾಸ್ ಮಲ್ಲಿಕಾರ್ಜುನ ಎಂಬ ರೌಡಿ ಶೀಟರ್ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Police shootout on rowdy Mallikarjun in Kalaburagi

ಇತ್ತೀಚೆಗೆ ಪೊಲೀಸರ ಎನ್‌ಕೌಂಟರ್‌ಗೆ ಬಲಿಯಾದ ರೌಡಿ ಕರಿಚಿರತೆ ಸಹಚರನಾಗಿದ್ದ ಈಗ ಗುಂಡೇಟು ತಿಂದಿರುವ ಮಲ್ಲಿಕಾರ್ಜುನ. ಕರಿಚಿರತೆ ಜೊತೆಗೆ ಸೇರಿ ಮಲ್ಲಿಕಾರ್ಜುನ ಹಲವಾರು ದುಷ್ಕೃತ್ಯಗಳಲ್ಲಿ ಭಾಗಿಯಾಗಿದ್ದ. ಪ್ರಮುಖವಾಗಿ ಲಕ್ಷ್ಮೀಕಾಂತ್ ಎಂಬುವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ.

ಸಂಕ್ರಾಂತಿ ವಿಶೇಷ ಪುಟ

ಪ್ರಕರಣವೊಂದರ ಸಂಬಂಧ ಮಲ್ಲಿಕಾರ್ಜುನನ್ನು ಬಂಧಿಸಲು ಹೋದಾಗ ಮಾರಕಾಸ್ತ್ರಗಳಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ ಈ ವೇಳೆ ಪಿಎಸ್‌ಐ ಪರಶುರಾಮ ವನಜಾಕರ್‌ ಅವರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ, ಘಟನೆಯಲ್ಲಿ ಪೇದೆಗಳಾದ ಅನಿಲ್ ಮತ್ತು ವಿಶ್ವನಾಥ್‌ಗೆ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದು ಈ ವರ್ಷ ಕಲಬುರಗಿಯಲ್ಲಿ ನಡೆದ ಮೊದಲ ಶೂಟೌಟ್. ಕಳೆದ ವರ್ಷ ನಗರದಲ್ಲಿ 8 ಶೂಟೌಟ್ ಪ್ರಕರಣಗಳು ನಡದಿದ್ದವು.

English summary
Kalaburagi Police shoots on rowdy Mallikarjun today morning. Injured Mallikarjun has been shifted to hospital. Malikarjun is accused in several kidnapping and murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X