ಕಲಬುರಗಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪಗೆ ರಿಲೀಫ್: ಕಲಬುರಗಿ ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ

|
Google Oneindia Kannada News

Recommended Video

ಕಲಬುರಗಿ ಹೈಕೋರ್ಟ್‌ನಿಂದ ಎಫ್‌ಐಆರ್‌ಗೆ ಮಧ್ಯಂತರ ತಡೆ

ಕಲಬುರಗಿ, ಫೆಬ್ರವರಿ 22: ಆಪರೇಷನ್ ಕಮಲ ಆಡಿಯೋ ಕ್ಲಿಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವದುರ್ಗದ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಕಲಬುರಗಿ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಇದರಿಂದ ಆಪರೇಷನ್ ಕಮಲ ಪ್ರಕರಣದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಲ್ಲಿ ನಿರಾಳತೆ ಮೂಡಿಸಿದೆ.

ಆಪರೇಷನ್ ಕಮಲ ಆಡಿಯೋ: ಎಫ್‌ಐಆರ್‌ ರದ್ದಿಗೆ ಬಿಎಸ್‌ವೈ ಮನವಿಆಪರೇಷನ್ ಕಮಲ ಆಡಿಯೋ: ಎಫ್‌ಐಆರ್‌ ರದ್ದಿಗೆ ಬಿಎಸ್‌ವೈ ಮನವಿ

ಯಡಿಯೂರಪ್ಪ ಅವರಲ್ಲದೆ, ಉಳಿದ ಮೂವರು ಆರೋಪಿಗಳಾದ ಹಾಸನ ಶಾಸಕ ಪ್ರೀತಂಗೌಡ, ದೇವದುರ್ಗದ ಶಾಸಕ ಶಿವನಗೌಡ ಮತ್ತು ಪತ್ರಕರ್ತ ಮರಂಕಲ್ ಅವರೂ ಸದ್ಯ ಎಫ್‌ಐಆರ್‌ನಿಂದ ಪಾರಾಗಿದ್ದಾರೆ.

operation kamala audio big relief for bs yeddyurappa kalaburagi high court interim stay to fir

ಆಪರೇಷನ್ ಕಮಲ ನಡೆಸುವ ಪ್ರಯತ್ನದಲ್ಲಿ ಯಡಿಯೂರಪ್ಪ ಮತ್ತು ಮೂವರ ವಿರುದ್ಧ ದೇವದುರ್ಗ ಪೊಲೀಶ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಜೆಡಿಎಸ್ ಶಾಸಕ ನಾಗನಗೌಡ ಕುಂದಕೂರು ಅವರ ಮಗ ಶರಣಗೌಡ ನೀಡಿದ್ದ ದೂರಿನ ಅನ್ವಯ ಪೊಲೀಸರು ತನಿಖೆ ಆರಂಭಿಸಿದ್ದರು.

ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್ಆಪರೇಷನ್ ಕಮಲ ಆಡಿಯೋ: ಸಂಭಾಷಣೆ ಹೈಲೈಟ್ಸ್

ಇದನ್ನು ರದ್ದುಗೊಳಿಸುವಂತೆ ಕೋರಿ ಕಲಬುರಗಿ ಹೈಕೋರ್ಟ್‌ನಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು ಆದೇಶವನ್ನು ಶುಕ್ರವಾರಕ್ಕೆ ಕಾಯ್ದಿರಿಸಿದ್ದರು.

ಬಿಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲುಬಿಎಸ್ ಯಡಿಯೂರಪ್ಪ ಸೇರಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು

ಯಡಿಯೂರಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ ಹೈಕೋರ್ಟ್ ನ್ಯಾಯಮೂರ್ತಿ ಪಿಜಿಎಂ ಪಾಟೀಲ್ ಎಫ್‌ಐಆರ್‌ಗೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿದರು.

ಗುರುಮಠಕಲ್ ಶಾಸಕ ನಾಗನಗೌಡ ಕುಂದಕೂರ ಅವರ ಪುತ್ರ ಶರಣಗೌಡ ಅವರು ಯಡಿಯೂರಪ್ಪ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಲಾಗಿತ್ತು.

English summary
Kalaburagi High Court ordered an interim stay to FIR against BS Yeddyurappa and three others at Devdurga police station in the Operation Kamala case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X